ಜಾನಪದ ಕಾಶಿಯ ಬೆಳ್ಳಿ ಹಬ್ಬದಲ್ಲಿ ಮೇಳೈಸಿದ ಜಾನಪದ ಕಲಾ ಮೇಳ
ರಾಮನಗರ, ಫೆಬ್ರವರಿ 18: ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳ ಉಳಿವಿಗೆ ಶ್ರಮಿಸುತ್ತಿರುವ ಜಾನಪದ ಲೋಕ, 25ನೇ ವರ್ಷದ ಬೆಳ್ಳಿ ಹಬ್ಬಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜಾನಪದ ಲೋಕದ ಬೆಳ್ಳಿ ಹಬ್ಬದ ಹಿನ್ನೆಲೆಯಲ್ಲಿ ನಡೆದ ಜಾನಪದ ಕಲೆಗಳ ಪ್ರದರ್ಶನ ನೋಡುಗರ ಮನ ಸೂರೆಗೊಂಡಿತು.
ಪ್ರತಿವರ್ಷದಂತೆ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಪ್ರವಾಸಿ ಜಾನಪದ ಲೋಕೋತ್ಸವ ಕಾರ್ಯಕ್ರಮ ಈ ವರ್ಷವೂ ಅದ್ಧೂರಿಯಾಗಿ ನಡೆಯಿತು. ಅದರಲ್ಲೂ ಈ ಬಾರಿ 25ನೇ ವರ್ಷವಾದ್ದರಿಂದ ಜಾನಪದ ಲೋಕೋತ್ಸವದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಹಲವು ಕಡೆಗಳಿಂದ ಬಂದ ಕಲಾವಿದರ ತಂಡಗಳು ಪ್ರದರ್ಶನ ನೀಡಿದವು.

ತಮಿಳುನಾಡಿನ ತಪ್ಪಾಟಂ, ಕೇರಳದ ಕಳಾರಿ ಪಟ್ಟು, ಮಹಾರಾಷ್ಟ್ರದ ಲವಾಣಿ, ಕಾಸರಗೋಡಿನ ಆದಿವಾಸಿ ಪರಂಪರೆ ನೃತ್ಯ ಪ್ರದರ್ಶನ ಸೇರಿದಂತೆ ಕರ್ನಾಟಕದ ಯಕ್ಷಜಾನಪದ ಲೋಕದ ಬೆಳ್ಳಿ ಹಬ್ಬ:ಕಲಾಕ್ಷೇತ್ರದಲ್ಲಿ ಅನಾವರಣಗೊಂಡ ಸಿರಿ ಲೋಕಗಾನ, ಸೋಮನ ಕುಣಿತ, ಪಟ್ಟದ ಕುಣಿತಗಳು ನೋಡುಗರನ್ನು ಆಕರ್ಷಿಸಿದವು.

ಸಾಂಪ್ರದಾಯಿಕ ಚರ್ಮವಾದ್ಯಗಳಾದ ತಮಟೆ, ನಗಾರಿ, ಥಾರಸಿ ಸೇರಿದಂತೆ ಇನ್ನುಳಿದ ಕೆಲ ವಾದ್ಯಗಳ ನಾದ ಜನರು ತಲೆತೂಗುವಂತೆ ಮಾಡಿದ್ದವು. ಬಾಲು ಜಂಬೆಯವರು ಜಂಬೆ ವಾದ್ಯವನ್ನು ಬಹಳ ಸೊಗಸಾಗಿ ನುಡಿಸಿದರು. ಚಾಮರಾಜನಗರ ಕಲಾ ತಂಡ ಮಲೈಮಹದೇಶ್ವರನ ಹಾಡಿಗೆ ನೀಡಿದ ನೃತ್ಯ ಪ್ರದರ್ಶನ ವಾವ್ ಎನಿಸುವಂತಿತ್ತು. ದೇಸಿ ಕಲೆಗಳು ಮರೆಯಾಗುತ್ತಿರುವ ಈ ದಿನಗಳಲ್ಲಿ ಜಾನಪದ ಲೋಕ ಅವುಗಳನ್ನು ಜೀವಂತವಾಗಿರಿಸಲು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ.











Click it and Unblock the Notifications