Get Updates
Get notified of breaking news, exclusive insights, and must-see stories!

Channapatna Tahsildar Transfer: ಮಾಜಿ ಸಿಎಂ, ಹಾಲಿ ಎಂಎಲ್‌ಸಿ ನಡುವೆ ತಾರಕ್ಕಕೇರಿದ ತಹಶೀಲ್ದಾರ ವರ್ಗಾವಣೆ ಫೈಟ್

ರಾಮನಗರ, ಏಪ್ರಿಲ್ 9: ಚನ್ನಪಟ್ಟಣದಲ್ಲಿ ತಮಗೆ ಆಪ್ತರಾದ ಅಧಿಕಾರಿಯನ್ನು ತಹಶೀಲ್ದಾರ ಹುದ್ದೆಯಲ್ಲಿ ಕೂರಿಸಿ ತಾಲ್ಲೂಕು ಆಡಳಿತವನ್ನು ತಮ್ಮ ಅಣತಿಯಂತೆ ನಡೆಸಲು ಮಾಜಿ ಸಿಎಂ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರ ನಡುವಿನ ಪೈಟ್ ತಾರಕ್ಕಕೇರಿದೆ.

ಚನ್ನಪಟ್ಟಣ ತಹಶೀಲ್ದಾರ ನಾಗೇಶ್‌ರನ್ನು ವರ್ಗಾವಣೆ ಮಾಡಿ‌ ಅದೇ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಆಪ್ತ ಹಾಗೂ ಹಿಂದಿನ ತಹಶೀಲ್ದಾರ ಬಿ.ಕೆ. ಸುದರ್ಶನ್ ಅವರನ್ನು ನಿಯೋಜನೆ ಮಾಡಿ ಶುಕ್ರವಾರ ರಾಜ್ಯ ಸರ್ಕಾರ ಆದೇಶ ಮಾಡಿತ್ತು‌. ನಂತರ ಸಂಜೆ ವೇಳೆಗೆ ಸರ್ಕಾರ ತನ್ನ ಆದೇಶವನ್ನು ಹಿಂಪಡೆದಿದೆ.

ತಮಗೆ ನಿಷ್ಠರಾದ ಬಿ.ಕೆ. ಸುದರ್ಶನ್ ಅವರನ್ನು ತಹಶೀಲ್ದಾರ ಹುದ್ದೆಯಲ್ಲಿ ನಿಯೋಜಿಸಿ ತಾಲ್ಲೂಕು ಆಡಳಿತವನ್ನು ನಿಯಂತ್ರಿಸಲು ಮುಂದಾಗಿದ್ದ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್‌ಗೆ ನಿರಾಶೆಯಾಗಿದೆ.

Fight High Between Former CM HD Kumaraswamy And MLC CP Yogeshwar For Channapattana Tahasildar Transfer

ಚನ್ನಪಟ್ಟಣ ತಹಶೀಲ್ದಾರ ನಾಗೇಶ್ ವರ್ಗಾವಣೆಯನ್ನು ಕೆಲ ಗಂಟೆಗಳಲ್ಲೇ ತಡೆಹಿಡಿಯುವ ಮೂಲಕ ರಾಜ್ಯ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಸರ್ಕಾರ ಇಲ್ಲದಿದ್ದರೂ ನಾನು ಪ್ರಭಾವಿ ಎಂಬುದನ್ನು ಸಾಬೀತು ಮಾಡಿದ್ದಾರೆ. ತಹಶೀಲ್ದಾರ ಎಲ್‌. ನಾಗೇಶ್ ವರ್ಗಾವಣೆ ಮಾಡಿಸಲು ಹಿಂದಿನಿಂದಲೂ ‌ಸಿ.ಪಿ. ಯೋಗೇಶ್ವರ್ ನಿರಂತರ ಪ್ರಯತ್ನ ನಡೆಸಿದರು. ಅದನ್ನು ವಿಫಲಗೊಳಿಸುವ ಮೂಲಕ ಮಾಜಿ ಸಿಎಂ ಎಚ್‌ಡಿಕೆ ಟಾಂಗ್ ನೀಡಿದ್ದಾರೆ.

ಚನ್ನಪಟ್ಟಣದಿಂದ ಶಾಸಕರಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಯ್ಕೆಯಾದ ನಂತರ ತಹಶೀಲ್ದಾರ ಆಗಿದ್ದ ಯೋಗೇಶ್ವರ್‌ರ ಆಪ್ತ ಬಿ.ಕೆ. ಸುದರ್ಶನ್ ಅವರನ್ನು ವರ್ಗಾವಣೆ ಮಾಡಿಸಿ ಅವರ ಜಾಗಕ್ಕೆ ಎಲ್. ನಾಗೇಶ್ ಅವರನ್ನು ಕುಮಾರಸ್ವಾಮಿ ಹಾಕಿಸಿಕೊಂಡಿದ್ದರು. ಇದೀಗ ನಾಗೇಶ್ ವರ್ಗಾವಣೆಗೆ ಯೋಗೇಶ್ವರ್ ತಮ್ಮದೇ ಸರ್ಕಾರದ ಮೇಲೆ ಒತ್ತಡ ಹಾಕಿದರೂ ಪ್ರಯೋಜನವಾದಂತೆ ಕಾಣುತ್ತಿಲ್ಲ.

Fight High Between Former CM HD Kumaraswamy And MLC CP Yogeshwar For Channapattana Tahasildar Transfer

ಕಳೆದ ಕೆಲ ತಿಂಗಳುಗಳಿಂದ ತಹಶೀಲ್ದಾರ ಎಲ್‌. ನಾಗೇಶ್ ವರ್ಗಾವಣೆ ವಿಚಾರದಲ್ಲಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಂಎಲ್‌ಸಿ ಸಿ.ಪಿ. ಯೋಗೇಶ್ವರ್ ನಡುವೆ ಶೀತಲ ಸಮರ ನಡೆಯುತ್ತಿತ್ತು. ಶುಕ್ರವಾರ ಸಂಜೆ ತಹಶೀಲ್ದಾರ ವರ್ಗಾವಣೆ ಆದೇಶ ಹೊರಬಿದ್ದಿತ್ತು. ಅದರಲ್ಲೂ ಆದೇಶ ಪ್ರತಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಅನುಮೋದಿತ ಎಂಬ ಸಾಲು ಕೂಡ ಇತ್ತು ಎಂಬುದು ಗಮನಾರ್ಹ ಸಂಗತಿ.

ಕಳೆದ ಒಂದೆರಡು ತಿಂಗಳಿನಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸಿ.ಪಿ. ಯೋಗೇಶ್ವರ್, ನಮ್ಮ ಪಕ್ಷದ ನಾಯಕರೇ ಎಚ್.ಡಿ. ಕುಮಾರಸ್ವಾಮಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಸ್ವಪಕ್ಷೀಯರ ವಿರುದ್ಧ ಆರೋಪ ಮಾಡಿದ್ದರು. ಸಿಪಿವೈ ಆರೋಪಕ್ಕೆ ತಹಶೀಲ್ದಾರ ವರ್ಗಾವಣೆ ಕೆಲ ಗಂಟೆಯಲ್ಲೇ ಬದಲಾಯಿಸಿದ ಘಟನೆ ಮತ್ತಷ್ಟು ಪುಷ್ಟಿ ನೀಡಿದೆ.

Fight High Between Former CM HD Kumaraswamy And MLC CP Yogeshwar For Channapattana Tahasildar Transfer

ಇನ್ನು ಬಹಿರಂಗ ಸಭೆಗಳಲ್ಲೇ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸರ್ಕಾರದಲ್ಲಿ ನನ್ನ ಮಾತು ನಡೆಯುತ್ತಿಲ್ಲ, ನಾನು ತಹಶೀಲ್ದಾರ ನಾಗೇಶ ವರ್ಗಾವಣೆ ಮಾಡಿಸಲು ಹೋದರೆ, ಶಾಸಕರು ಅದನ್ನು ತಡೆ ಹಿಡಿಯುತ್ತಿದ್ದಾರೆ. ಅಲ್ಲದೇ ಕೆಲ ಅನುದಾನಗಳು ತಡೆ ಹಿಡಿದ್ದಿದ್ದಾರೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

Recommended Video

      Rahul Tewatia ಹಾಗು ಪಂಜಾಬ್ ತಂಡದ ವಿಚಿತ್ರ ಸಂಬಂಧ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+