ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ನಕಲಿ ಮತದಾರರ ಸೃಷ್ಠಿ: ಜೆಡಿಎಸ್ ಅಭ್ಯರ್ಥಿ ಆರೋಪ
ರಾಮನಗರ, ಸೆಪ್ಟೆಂಬರ್ 30: ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿದ್ದು, 4 ಸಾವಿರ ನಕಲಿ ಮತದಾರರು ಪತ್ತೆಯಾಗಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎ.ಪಿ ರಂಗನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಎ.ಪಿ ರಂಗನಾಥ್ ಅವರು ರಾಮನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತಮಾಡಿ, ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ. ಈ ಚುನಾವಣೆಗೆ ಅಕ್ರಮವಾಗಿ ಮತದಾರರನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಶಿಕ್ಷಣ ಕ್ಷೇತ್ರದ 17,800 ಜನ ಮತದಾರರ ಪೈಕಿ, 4 ಸಾವಿರ ಜನರ ಅಕ್ರಮ ಮತಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಮಾಜಿ ಎಂಎಲ್ಸಿ, ಹಾಲಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ ಜೆಡಿಎಸ್ ಅಭ್ಯರ್ಥಿ ಎ.ಪಿ ರಂಗಸ್ವಾಮಿ ವಾಗ್ದಾಳಿ ನಡೆಸಿದರು.

ಹಾಗೆಯೇ ಕಾಲೇಜು ವರ್ಕರ್ಸ್, ಕ್ಲರ್ಕ್ ಗಳು, ಗಾರ್ಮೆಂಟ್ಸ್ ಕಾರ್ಮಿಕರ ಹೆಸರು ಮತದಾರರ ಪಟ್ಟಿಯಲ್ಲಿ ಇದೆ. ಚುನಾವಣೆ ಗೆಲ್ಲಲು ಈ ಕುತಂತ್ರ ಮಾಡಿರುವ ಆರೋಪ ಬಗ್ಗೆ ಈಗಾಗಲೆ ಹೈಕೋರ್ಟ್ ಮಧ್ಯ ಪ್ರವೇಶಿಸಿದೆ ಎಂದರು.
ಮುಂದಿನ ಅಕ್ಟೋಬರ್ 6ನೇ ತಾರೀಖು ಈ ಪ್ರಕರಣ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಇದಲ್ಲದೆಯೇ ಪುಟ್ಟಣ್ಣ ಆಪ್ತ ಆರಾಧ್ಯ ಎಂಬುವವರು ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದಾರೆಂದು ಎ.ಪಿ ರಂಗನಾಥ್ ಆರೋಪ ಮಾಡಿದ್ದರು.












Click it and Unblock the Notifications