ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್?

|
Google Oneindia Kannada News

ರಾಮನಗರ, ಮೇ 26: ರಾಮನಗರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರ ಎದುರು ಸೋತಿದ್ದ ಸಿಪಿ ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.

ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದ್ದು ಸಿಪಿ ಯೋಗೀಶ್ವರನ್ನು ಕಳೆದುಕೊಳ್ಳುವುದು ಬೇಡ ಎಂಬ ಉದ್ದೇಶದಿಂದ ಯೋಗೇಶ್ವರ್‌ಗೆ ಮತ್ತೊಂದು ಅವಕಾಶವನ್ನು ಬಿಜೆಪಿ ನೀಡಿದೆ.

CP Yogeshwar may contest Ramanagar by election from BJP ticket

ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಎದುರು ಸೋಲನ್ನನುಭವಿಸಿದ್ದರು. ರಾಮನಗರದಲ್ಲೂ ಚುನಾವಣೆಗೆ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರು ಅಲ್ಲಿ ಗೆದ್ದ ನಂತರ ಚನ್ನಪಟ್ಟಣದ ಸ್ಥಾನ ಉಳಿಸಿಕೊಂಡು ರಾಮನಗರ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು ಹಾಗಾಗಿ ಅಲ್ಲಿ ಉಪ ಚುನಾವಣೆ ನಡೆಯಲಿದೆ.

ರಾಮನಗರ - ಚನ್ನಪಟ್ಟಣ ನನ್ನ ತಂದೆ-ತಾಯಿ ಇದ್ದಂತೆ: ಕುಮಾರಸ್ವಾಮಿರಾಮನಗರ - ಚನ್ನಪಟ್ಟಣ ನನ್ನ ತಂದೆ-ತಾಯಿ ಇದ್ದಂತೆ: ಕುಮಾರಸ್ವಾಮಿ

ರಾಮನಗರದಲ್ಲಿ ಜೆಡಿಎಸ್ ಅತ್ಯಂತ ಪ್ರಾಬಲ್ಯ ಹೊಂದಿದ್ದು, ಬಿಜೆಪಿಯ ಸಿಪಿ ಯೋಗೇಶ್ವರ್‌ಗೆ ಇಲ್ಲೂ ಕೂಡ ಗೆಲುವು ಕಷ್ಟ ಎನ್ನಲಾಗುತ್ತಿದೆ. ಆದರೆ ಚನ್ನಪಟ್ಟಣದಲ್ಲಿ ಸೋತಿರುವ ಕಾರಣ ಕರುಣೆಯ ಮತಗಳು ಬೀಳಬಹುದು ಎಂಬ ಲೆಕ್ಕಾಚಾರವನನ್ನು ಬಿಜೆಪಿ ಹಾಕಿದಂತಿದೆ.

ರಾಮನಗರದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತರಾಮನಗರದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತ

ರಾಮನಗರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತಗೊಂಡಿದೆ. ಕಳೆದ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಇದೇ ಯೋಗೇಶ್ವರ್ ಅವರು ಅನಿತಾ ಕುಮಾರಸ್ವಾಮಿ ಅವರನ್ನು ಸೋಲಿಸಿ ಶಾಸಕರಾಗಿದ್ದರು. ಈಗ ಮತ್ತೆ ಇವರಿಬ್ಬರು ಎದುರು-ಬದುರಾಗಲಿದ್ದಾರೆ.

ಬೆಟ್ಟಿಂಗ್ ನಡೆಯಲೆಂದು ಸುದ್ದಿಗೋಷ್ಠಿಯಲ್ಲಿ ಸುಳ್ಳು ಹೇಳಿದರಾ ಯೋಗೇಶ್ವರ್?ಬೆಟ್ಟಿಂಗ್ ನಡೆಯಲೆಂದು ಸುದ್ದಿಗೋಷ್ಠಿಯಲ್ಲಿ ಸುಳ್ಳು ಹೇಳಿದರಾ ಯೋಗೇಶ್ವರ್?

ಹಳೆ ಮೈಸೂರು ಭಾಗದ ಬಿಜೆಪಿಯ ಏಕೈಕ ಒಕ್ಕಲಿಗ ನಾಯಕ ಸಿಪಿ ಯೋಗೇಶ್ವರ್ ಅವರಾಗಿದ್ದು, ಅವರನ್ನು ಕಳೆದುಕೊಳ್ಳಲು ಬಿಜೆಪಿ ತಯಾರಿಲ್ಲ, ಹಾಗಾಗಿ ಒಂದು ವೇಳೆ ರಾಮನಗರದಲ್ಲಿಯೂ ಸೋತರೆ ಅವರನ್ನು ಕೆ.ಎಸ್.ಈಶ್ವರಪ್ಪ ಹಾಗೂ ವಿ.ಸೋಮಣ್ಣ ಅವರಿಂದ ತೆರವಾಗಿರುವ ವಿಧಾನಪರಿಷತ್‌ ಸ್ಥಾನಕ್ಕೆ ಅವಕಾಶ ನೀಡುವ ಸಾಧ್ಯತೆಯೂ ಇದೆ.

English summary
CP Yogeshwar may contest from Ramanagar by election from BJP ticket. He already lost in Chenpatna against Kumaraswamy. BJP want to give him more chance because he is the only Okkaliga community leader for BJP in Old Mysuru region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X