ರಾಮನಗರದಲ್ಲಿಂದು ₹99.93 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಜಿಲ್ಲಾಸ್ಪತ್ರೆ ಕಟ್ಟಡ ಲೋಕಾರ್ಪಣೆ

ಕಳೆದ ಏಳು ವರ್ಷಗಳ ಕಾಲ ಕುಂಟುತ್ತಾ ಸಾಗಿದ್ದ ಜಿಲ್ಲಾ‌ಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಾಗಾರಿ ಮುಕ್ತಾಯಗೊಂಡಿದ್ದು, ಗುರುವಾರ (ಮಾರ್ಚ್‌ 02) ಲೋಕಾರ್ಪಣೆಯಾಗಲಿದೆ.

ರಾಮನಗರ, ಮಾರ್ಚ್‌, 02: ಕಳೆದ ಏಳು ವರ್ಷಗಳ ಕಾಲ ಕುಂಟುತ್ತಾ ಸಾಗಿದ್ದ ಜಿಲ್ಲಾ‌ಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಾಗಾರಿ ಮುಕ್ತಾಯಗೊಂಡಿದ್ದು, ಗುರುವಾರ (ಮಾರ್ಚ್‌ 02) ಲೋಕಾರ್ಪಣೆಯಾಗಲಿದೆ.

2017ರಲ್ಲಿ ಶಂಕುಷ್ಥಾಪನೆಯಾದ ಜಿಲ್ಲಾಸ್ಪತ್ರೆ ಕಾಮಾಗಾರಿ ಕಳೆದ ಏಳು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗಿತ್ತು. ಇದೀಗ ಚುನಾವಣೆಯ ಹೊಸ್ತಿನಲ್ಲಿ ಸರ್ಕಾರ ಇದನ್ನು ಲೋಕಾರ್ಪಣೆಗೆ ಮುಂದಾಗಿದೆ. ಜಿಲ್ಲಾ‌ಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್‌ ನಾರಾಯಣ್ ಉಪಸ್ಥಿತಿಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ವಹಿಸಲಿದ್ದಾರೆ.

ಟೋಲ್‌ ಸಂಗ್ರಹ ಖಂಡಿಸಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
‌‌‌‌‌

ಇನ್ನು ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ, ಚನ್ನಪಟ್ಟಣ ಶಾಸಕರಾದ ಎಚ್‌.ಡಿ.ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಕನಕಪುರ ಶಾಸಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಿಕ್ಕಬಳ್ಳಾಪುರ ಸಂಸದ ಬಜ್ಜೇಗೌಡ, ಮಾಗಡಿ ಶಾಸಕ ಎ.ಮಂಜುನಾಥ್ ಸೇರಿದಂತೆ ಜಿಲ್ಲೆಯ ಎಲ್ಲಾ ಎಂಎಲ್‌ಸಿಗಳು ಹಾಗೂ ವಿವಿಧ ನಿಗಮಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

250 ಹಾಸಿಗೆಗಳನ್ನು ಒಳಗೊಂಡ ಜಿಲ್ಲಾಸ್ಪತ್ರೆಯು 5.20 ಗುಂಟೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದೆ. ಇದನ್ನು ಅಂದಾಜು ವೆಚ್ಚ 99.93 ಕೋಟಿ ರೂಪಾಯಿಗಳಲ್ಲಿ ನಿರ್ಮಾಣ ಮಾಡಲಾಗಿದೆ. ನೂತನ ಜಿಲ್ಲಾಸ್ಪತ್ರೆ ಭವನ ನೆಲಮಾಳಿಗೆ ಸೇರಿದಂತೆ 4 ಅಂತಸ್ತುಗಳನ್ನು ಒಳಗೊಂಡಿದೆ. ಈ ಕಟ್ಟಡವು 374 ಹಾಸಿಗೆಗಳ ಮಂಜೂರಾತಿ ಸಾಮರ್ಥ್ಯದಲ್ಲಿ ನಿರ್ಮಾಣವಾಗಿದೆ. ಸರ್ಕಾರದಿಂದ 250 ಹಾಸಿಗೆಗಳು ಹಾಗೂ ಅದಕ್ಕೆ ಅಗತ್ಯ ಸಿಬ್ಬಂದಿ ಮಂಜೂರಾತಿಯಾಗಿದೆ. ಉಳಿದಂತರ ಇನ್ನು 124 ಸಿಬ್ಬಂದಿಗಳ ಮಂಜೂರಾತಿ ಬಾಕಿ ಇದೆ.

 ಇದೀಗ ಆಸ್ಪತ್ರೆ ನಿರ್ಮಾಣಕ್ಕೆ ತಗುಲಿದ ವೆಚ್ಚ ಎಷ್ಟು?

ಇದೀಗ ಆಸ್ಪತ್ರೆ ನಿರ್ಮಾಣಕ್ಕೆ ತಗುಲಿದ ವೆಚ್ಚ ಎಷ್ಟು?

ಪ್ರಾರಂಭದಲ್ಲಿ 66 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಉದ್ದೆಶಿಸಿದ ಜಿಲ್ಲಾಸ್ಪತ್ರೆಯು, ಏಳು ವರ್ಷಗಳ ನಂತರ 99 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರು ಮತ್ತು ಮೈಸೂರು ಹೆದ್ದಾರಿಗೆ ಹೊಂದಿಕೊಂಡು ನಿರ್ಮಾಣವಾಗಿದೆ. ಇನ್ನು ಹಳೆಯ ಜಿಲ್ಲಾಸ್ಪತ್ರೆ ಜಿಲ್ಲಾ ಹೆರಿಗೆ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

 ಆಸ್ಪತ್ರೆಯಲ್ಲಿ ಯಾವೆಲ್ಲ ಸೌಲಭ್ಯಗಳು ಲಭ್ಯ

ಆಸ್ಪತ್ರೆಯಲ್ಲಿ ಯಾವೆಲ್ಲ ಸೌಲಭ್ಯಗಳು ಲಭ್ಯ

ತುರ್ತು ಚಿಕಿತ್ಸಾ ವಿಭಾಗ, 4 ಮೇಜರ್ ಶಸ್ತ್ರಚಿಕಿತ್ಸಾ ವಿಭಾಗ, 5 ಮೈನರ್ ಶಸ್ತ್ರಚಿಕಿತ್ಸಾ ವಿಭಾಗ, ವೈದ್ಯಕೀಯ ವಿಭಾಗ, ಐಸಿಯು ವಿಭಾಗ (ಮೆಡಿಕಲ್ ಮತ್ತು ಸರ್ಜಿಕಲ್) ಜನರಲ್ ಸರ್ಜರಿ ವಿಭಾಗ, ಯುರಾಲಜಿ ವಿಭಾಗ, ರೇಡಿಯಾಲಜಿ ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಇ.ಎನ್.ಟಿ ವಿಭಾಗ, ಆರ್ಥೋಪೆಡಿಕ್ ವಿಭಾಗ, ಚರ್ಮರೋಗ ವಿಭಾಗ, ಮನೋರೋಗ ವಿಭಾಗ, ಎಸ್.ಎನ್.ಸಿ.ಯು, ಪಿ.ಐ.ಸಿ.ಯು, ಎನ್.ಸಿ.ಡಿ, ಐ.ಪಿ.ಹೆಚ್.ಎಲ್ ಪ್ರಯೋಗ ಶಾಲಾ ವಿಭಾಗ, ದಂತ ಚಿಕಿತ್ಸಾ ವಿಭಾಗ, ಮಕ್ಕಳ ವಿಭಾಗ, ಎನ್.ಆರ್.ಸಿ, ಎನ್.ಐ.ಸಿ.ಯು, ಫಾರ್ಮಾಸಿ ವಿಭಾಗ, ಐ.ಸಿ.ಟಿ.ಸಿ, ಎ.ಆರ್.ಟಿ, ಬ್ಲಡ್ ಬ್ಯಾಂಕ್, ಸ್ಪಾಸ್ಟಿಕ್ ಸೊಸೈಟಿ ಸೇರಿದಂತೆ ಒಟ್ಟು 26 ವಿಭಾಗಗಳು ಕಾರ್ಯನಿರ್ವಹಿಸಲಿವೆ.

 ಆಮ್ಲಜನಕ ಉತ್ಪಾದನೆಯ ವಿವರ ಇಲ್ಲಿದೆ

ಆಮ್ಲಜನಕ ಉತ್ಪಾದನೆಯ ವಿವರ ಇಲ್ಲಿದೆ

ಒಂದು ನಿಮಿಷಕ್ಕೆ ಒಂದು ಸಾವಿರ ಲೀಟರ್ ಆಮ್ಲಜನಕ ಉತ್ಪಾದಿಸುವ ಆಮ್ಲಜನಕ ಉತ್ಪಾದನಾ ಘಟಕವು (PSA
Plant) ಸುಸಜ್ಜಿತವಾಗಿದ್ದು ಕಾರ್ಯನಿರ್ವಹಣೆಯಲ್ಲಿದೆ.

 ಕೆಲವು ವೈದ್ಯಕೀಯ ಸಲಕರಣೆಗಳನ್ನ ಅಳವಡಿಸಬೇಕಿದೆ

ಕೆಲವು ವೈದ್ಯಕೀಯ ಸಲಕರಣೆಗಳನ್ನ ಅಳವಡಿಸಬೇಕಿದೆ

ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (LMO Tank) 19,ಕೆ.ಎಲ್.ಡಿ ಸಾಮರ್ಥ್ಯವಿದ್ದು, ಅವಶ್ಯವಿರುವ ರೋಗಿಗಳಿಗೆ ಸರಬರಾಜು ಮಾಡುವ ಸ್ಥಿತಿಯಲ್ಲಿದೆ. ಕೆಲವೊಂದು ವೈದ್ಯಕೀಯ ಸಲಕರಣೆಗಳನ್ನು ಅಳವಡಿಸಲಾಗಿದ್ದು ಇನ್ನು ಕೆಲವೊಂದು ವೈದ್ಯಕೀಯ ಸಲಕರಣೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಸದರಿ ಪ್ರಕ್ರಿಯೆಯು ಚಾಲನೆಯಲ್ಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+