ಸಿಪಿವೈಗೆ ಸೆಡ್ಡು ಹೊಡೆಯಲು ಸಜ್ಜಾದ ಡಿಕೆ ಸಹೋದರರು

Posted By: ಚನ್ನಪಟ್ಟಣ ಪ್ರತಿನಿಧಿ
Subscribe to Oneindia Kannada

ರಾಮನಗರ, ನವೆಂಬರ್.21: ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಕೈ ಪಕ್ಷಕ್ಕೆ ವಿದಾಯ ಹೇಳಿ ಕಮಲ ಪಕ್ಷದ ತೆಕ್ಕೆಗೆ ಜಾರಿದ ನಂತರದಲ್ಲಿ ತಾಲ್ಲೂಕಿನಲ್ಲಿ ಪಕ್ಷ ಸಂಘಟನೆ ಒತ್ತು ನೀಡಿರುವ ಡಿಕೆ ಸಹೋದರರು, ಸಿಎಂ ಕರೆತಂದು ಬೃಹತ್ ಸಮಾವೇಶ ನಡೆಸಿ ಸಿಪಿವೈಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.

ಚನ್ನಪಟ್ಟಣ ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಇನ್ನು ಕೆಲವು ಕಾಮಗಾರಿಗಳ ಉದ್ಘಾಟನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ತಿಂಗಳು ಆಗಮಿಸುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Channapatna: DKS brothers plan CM Siddaramaiah led campaign plan to counter CP Yogeshwar

ಖಾಸಗಿ ವೈದ್ಯ ನಿಯಂತ್ರಣ ಕಾಯ್ದೆಯ ವಿಷಯದಲ್ಲಿ ಕೆಲವರು ಗೊಂದಲಗಳನ್ನ ಸೃಷ್ಟಿಮಾಡಿದ್ದರು. ಕಾಯ್ದೆಯಲ್ಲಿ ಕೆಲ ಮಾರ್ಪಡುಗಳನ್ನ ಮಾಡಿ ಬಡವರ ಪರವಾಗಿರುವ ಈ ಕಾಯ್ದೆಯನ್ನ ಸರಕಾರ ಮಂಡನೆ ಮಾಡುತ್ತಿದೆ. ಕಾಯ್ದೆಯಿಂದ ಬಡ ರೋಗಿಗಳಿಗೆ ಅನುಕೂಲವಾಗುತ್ತದೆ. ಎಲ್ಲ ವರ್ಗದ ಜನರಿಗರ ಗುಣಮಟ್ಟದ ವೈಧ್ಯಕೀಯ ಸೌಲಬ್ಯ ದೊರೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Channapatna: DKS brothers plan CM Siddaramaiah led campaign plan to counter CP Yogeshwar

ಜಿಲ್ಲೆಯಲ್ಲಿ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ ಮುಖ್ಯ ಅದ್ದರಿಂದ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಪಕ್ಷ ಸಂಘಟನೆ ಮಾಡಲು ನಾನು ಮುಂದಾಗಿದ್ದೇನೆ. ರಾಮನಗರ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ವಿಚಾರ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು ಒಂದು ವೇಳೆ ನನ್ನನ್ನೆ ಅಭ್ಯರ್ಥಿ ಮಾಡಿದರು ಸ್ಪರ್ಧೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಜೆಡಿಎಸ್ ರೆಬಲ್ ಶಾಸಕ ಮಾಗಡಿ ಎಚ್.ಸಿ.ಬಾಲಕೃಷ್ಣ ರವರು ಮುಂದಿನ ವಾರದಿಂದ ಕಾಂಗ್ರೆಸ್ ಪಕ್ಷದ ಸಭೆಗಳು ಹಾಗೂ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ, ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಸದೃಢಗೂಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Channapatna: DK Shivakumar brothers planning CM Siddaramaiah led campaign to counter CP Yogeshwar popularity in the constituency

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ