ಚನ್ನಪಟ್ಟಣದಲ್ಲಿ ಶಕ್ತಿ ಪ್ರದರ್ಶಿಸಿದ ಸಿ.ಪಿ.ಯೋಗೇಶ್ವರ ಹೇಳಿದ್ದೇನು?

Posted By: Gururaj
Subscribe to Oneindia Kannada

ರಾಮನಗರ, ಅಕ್ಟೋಬರ್ 23 : ವಿಧಾನಸಭೆ ಚುನಾವಣೆಗೂ ಮೊದಲೇ ಚನ್ನಪಟ್ಟಣದ ಚುನಾವಣಾ ಕಣ ರಂಗೇರಿದೆ. ಡಿ.ಕೆ.ಶಿವಕುಮಾರ್ ಸಹೋದರರಿಗೆ ಟಾಂಗ್ ನೀಡಿರುವ ಶಾಸಕ ಸಿ.ಪಿ.ಯೋಗೇಶ್ವರ ಅವರು ಸ್ವಾಭಿಮಾನಿ ಪ್ರಗತಿಪರ ಚಿಂತಕರ ಹೆಸರಿನಲ್ಲಿ ಸಭೆ ನಡೆಸಿದ್ದಾರೆ.

ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಿ.ಪಿ.ಯೋಗೇಶ್ವರ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದೇ ಕಲ್ಯಾಣ ಮಂದಿರದಲ್ಲಿ ಅಕ್ಟೋಬರ್ 17ರಂದು ಡಿಕೆಶಿ ಸಹೋದರರು ಕಾಂಗ್ರೆಸ್ ಸಮಾವೇಶ ನಡೆಸಿ ಯೋಗೇಶ್ವರ ವಿರುದ್ಧ ಗುಡುಗಿದ್ದರು.

ಚನ್ನಪಟ್ಟಣದಲ್ಲಿ ಯೋಗೇಶ್ವರಗೆ ಡಿಕೆಶಿ ಸಹೋದರರ ಸವಾಲ್!

ಭಾನುವಾರ ಸಭೆಯಲ್ಲಿ ಮಾತನಾಡಿದ ಯೋಗೇಶ್ವರ ಅವರು, 'ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಡಿಕೆ ಬ್ರದರ್ಸ್ ಪ್ರತಿ ಬೂತ್‌ಗೆ 20 ಸಾವಿರದಂತೆ ಒಂದು ಕೋಟಿ ರೂಪಾಯಿ ಖರ್ಚು ಮಾಡಿದರು. ಚನ್ನಪಟ್ಟಣದ ಜನರು ಸಭೆಗೆ ಬರಲಿಲ್ಲ. ಕನಕಪುರ, ರಾಮನಗರ ಮತ್ತು ಮಾಗಡಿ ಸೇರಿದಂತೆ ವಿವಿಧ ಕಡೆಗಳಿಂದ ಕಾರ್ಯಕರ್ತರನ್ನು ಕರೆ ತಂದು ಸಭೆ ನಡೆಸಿದರು' ಎಂದು ಆರೋಪಿಸಿದರು.

ಡಿಕೆಶಿ ವಿರುದ್ಧ ಮುನಿಸಿಕೊಂಡು ಕಾಂಗ್ರೆಸ್ ಬಿಟ್ಟ ಯೋಗೇಶ್ವರ?

'ಮುಂದಿನ ಎರಡು ಮೂರು ದಿನಗಳಲ್ಲಿ ಅಂತಿಮವಾಗಿ ನನ್ನ ರಾಜಕೀಯ ನಿರ್ಧಾರ ಪ್ರಕಟಿಸುವೆ. ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಇನ್ನು ಚರ್ಚೆ ಮಾಡಬೇಕಿದೆ. ಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳು ನನ್ನ ನಿರ್ಧಾರ ಒಪ್ಪುವ ವಿಶ್ವಾಸವಿದೆ' ಎಂದು ಹೇಳಿದರು.

'1 ಕೋಟಿ ಖರ್ಚು ಮಾಡಿ ಸಮಾವೇಶ ಮಾಡಿದರು'

'1 ಕೋಟಿ ಖರ್ಚು ಮಾಡಿ ಸಮಾವೇಶ ಮಾಡಿದರು'

'ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಡಿಕೆ ಬ್ರದರ್ಸ್ ಪ್ರತಿ ಬೂತ್‌ಗೆ 20 ಸಾವಿರದಂತೆ ಒಂದು ಕೋಟಿ ರೂಪಾಯಿ ಖರ್ಚು ಮಾಡಿದರು. ಚನ್ನಪಟ್ಟಣದ ಜನರು ಸಭೆಗೆ ಬರಲಿಲ್ಲ. ಕನಕಪುರ, ರಾಮನಗರ ಮತ್ತು ಮಾಗಡಿ ಸೇರಿದಂತೆ ವಿವಿಧ ಕಡೆಗಳಿಂದ ಕಾರ್ಯಕರ್ತರನ್ನು ಕರೆ ತಂದು ಸಭೆ ನಡೆಸಿದರು' ಎಂದು ಸಿ.ಪಿ.ಯೋಗೇಶ್ವರ ಆರೋಪಿಸಿದರು.

'ಒಂದು ಪೈಸೆ ಖರ್ಚು ಮಾಡಿಲ್ಲ'

'ಒಂದು ಪೈಸೆ ಖರ್ಚು ಮಾಡಿಲ್ಲ'

'ಸ್ವಾಭಿಮಾನಿ ಜನರು ಇಂದಿನ ಸಭೆಗೆ ಬಂದಿದ್ದಾರೆ. ಆದರೆ, ನಾನು ಇವತ್ತಿನ ಸಭೆಗೆ ಒಂದು ಪೈಸೆ ಖರ್ಚು ಮಾಡಿಲ್ಲ. ಸ್ವಾಭಿಮಾನಿ ಕಾರ್ಯಕರ್ತರು ಈ ಸಭೆಯನ್ನ ಆಯೋಜಿಸಿದ್ದಾರೆ. ನನ್ನ ಮುಂದಿನ ನಿರ್ಧಾರವನ್ನು ಅವರು ಒಪ್ಪುತ್ತಾರೆ ಎಂಬ ಭರವಸೆ ಇದೆ' ಎಂದು ಹೇಳಿದರು.

'ಸಹೋದರನಿಗೆ ಸಹಾಯ ಮಾಡು ಎಂದು ಭಿಕ್ಷೆ ಬೇಡಿದ್ರು'

'ಸಹೋದರನಿಗೆ ಸಹಾಯ ಮಾಡು ಎಂದು ಭಿಕ್ಷೆ ಬೇಡಿದ್ರು'

'ಚನ್ನಪಟ್ಟಣಕ್ಕೆ ನಾನೇ ಶಾಸಕ ಎಂದು ಹೇಳುವ ಡಿ.ಕೆ.ಶಿವಕುಮಾರ್ ಅಂದು ನನ್ನ ಬಳಿಗೆ ಹಾರ ತೂರಾಯಿ ಹಿಡಿದುಕೊಂಡು ಬಂದು ನನ್ನ ಸಹೋದರನಿಗೆ ಸಹಾಯ ಮಾಡು ಅಂತಾ ಭಿಕ್ಷೆ ಬೇಡಿದ್ರು. ನನ್ನ ಸಹಾಯದಿಂದ ಅವರ ತಮ್ಮ ಡಿ.ಕೆ.ಸುರೇಶ್ ಸಂಸದರಾದರು. ಅವರ ಸಂಬಂಧಿಕ ರವಿ ವಿಧಾನಪರಿಷತ್ ಸದಸ್ಯರಾದರು' ಎಂದು ಸಿ.ಪಿ.ಯೋಗೇಶ್ವರ ಹೇಳಿದರು.

'ಅಂತಿಮ ನಿರ್ಧಾರ ಪ್ರಕಟಿಸುವೆ'

'ಅಂತಿಮ ನಿರ್ಧಾರ ಪ್ರಕಟಿಸುವೆ'

'ಮುಂದಿನ ಎರಡು ಮೂರು ದಿನಗಳಲ್ಲಿ ಅಂತಿಮವಾಗಿ ನನ್ನ ರಾಜಕೀಯ ನಿರ್ಧಾರ ಪ್ರಕಟಿಸುವೆ. ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಇನ್ನು ಚರ್ಚೆ ಮಾಡಬೇಕಿದೆ. ನನ್ನ ಮೇಲೆ ಪದೇ ಪದೇ ಪಕ್ಷ ಬದಲಾವಣೆ ಮಾಡುವ ಆರೋಪವಿದೆ. ಆದರೆ, ಇದು ನನ್ನ ಕೊನೆಯ ರಾಜಕೀಯ ತೀರ್ಮಾನ ಇನ್ನು ಮುಂದೆ ಯಾವುದೇ ರೀತಿಯ ಪಕ್ಷ ಬದಲಾವಣೆ ಮಾಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

'ಬಿಜೆಪಿ ನಾಯಕರ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ'

'ಬಿಜೆಪಿ ನಾಯಕರ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ'

'ಈಗಾಗಲೇ ಬಿಜೆಪಿಯ ಎಲ್ಲಾ ಪ್ರಮುಖ ನಾಯಕರ ಜೊತೆ ಚರ್ಚೆ ಮಾಡಿದ್ದೇನೆ. ಆದರೆ, ಮಾತುಕತೆ ಪೂರ್ಣವಾಗಿಲ್ಲ ನಾನು ಬಿಜೆಪಿ ನಾಯಕರ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ ಬಿಜೆಪಿ ನಾಯಕರೇ ನನಗೆ ಹೆಚ್ಚಿನ ಜವಾಬ್ದಾರಿಯನ್ನು ಕೊಡುವುದಾಗಿ ಹೇಳಿದ್ದಾರೆ' ಎಂದರು.

'ಬಿಜೆಪಿ ಋಣ ಈ ತಾಲೂಕಿನ ಮೇಲಿದೆ'

'ಬಿಜೆಪಿ ಋಣ ಈ ತಾಲೂಕಿನ ಮೇಲಿದೆ'

'ನಾನು ಈ ಕ್ಷೇತ್ರದಲ್ಲಿ 7 ಭಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಬಿಜೆಪಿಯಿಂದ ಮೂರು ಸಲ ಸ್ಪರ್ಧಿಸಿದ್ದೇನೆ. ಬಿಜೆಪಿ ಪಕ್ಷದಿಂದ ಚನ್ನಪಟ್ಟಣ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಬಿಜೆಪಿಯ ಋಣ ಈ ತಾಲೂಕಿನ ಮೇಲಿದೆ' ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
C.P.Yogeshwar verbal attack on Ramanagara district in-charge minister D.K.Shiva Kumar. C.P.Yogeshwar resigned for Congress party and he may join BJP soon.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ