ಗುಡ್‌ನ್ಯೂಸ್: ಬೆಂಗಳೂರಿನಿಂದ ಬೀದರ್, ಕಲಬುರಗಿಗೆ ವಿಮಾನ ಸೇವೆ ಪುನಾರಂಭ

ಬೆಂಗಳೂರು: ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ಸಾರಿಗೆ ಸೌಲಭ್ಯ ಕುರಿತು ಮೇಲಿಂದ ಮೇಲೆ ಚರ್ಚೆ ಆಗುತ್ತಲೇ ಇರುತ್ತದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ರಾಜಧಾನಿ ಬೆಂಗಳೂರಿನಿಂದ ಎರಡು ಪ್ರಮುಖ ಜಿಲ್ಲೆಗಳಾದ ಬೀದರ್ ಮತ್ತು ಕಲಬುರಗಿಗೆ ಇದೇ ಜೂನ್ 2026ರಿಂದ ವಿಮಾನ ಸೇವೆ ಆರಂಭವಾಗಲಿದ್ದು, ಸರ್ಕಾರ ಗುಡ್‌ನ್ಯೂಸ್ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮತ್ತು ಮೂಲ ಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ್ ಅವರು, ಕಾರಣಾಂತರಗಳಿಂದ ನಿಂತುಹೋಗಿದ್ದ ವಿಮಾನ ಸೇವೆ ಮತ್ತೆ ಆರಂಭವಾಗಲಿದೆ. ಕಲ್ಯಾಣ ಕರ್ನಾಟಕ ಭಾಗದ ಬೀದರ್ ಹಾಗೂ ಕಲಬುರಗಿ ಜಿಲ್ಲಾ ಕೇಂದ್ರಗಳಿಗೆ ಕ್ರಮವಾಗಿ ಜೂನ್ 1 ಮತ್ತು ಜೂನ್ 10ರಿಂದ ಬೆಂಗಳೂರಿನಿಂದ ವಿಮಾನಯಾನ ಸೇವೆ ಪುನಾರಂಭಿಸಲಾಗುವುದು ಎಂದು ಶುಕ್ರವಾರ ತಿಳಿಸಿದ್ದಾರೆ.

Good News

ಸರ್ಕಾರದಿಂದ 28.47 ಕೋಟಿ, ಬುಕಿಂಗ್ ಆರಂಭ

ಸ್ಟಾರ್ ಏರ್ ಲೈನ್ಸ್ (ಘೋಡಾವತ್ ಎಂಟರ್‌ಪ್ರೈಸಸ್ ಲಿಮಿಟೆಡ್) ಸಂಸ್ಥೆಯು ಬೆಂಗಳೂರು-ಬೀದರ್-ಬೆಂಗಳೂರು ಹಾಗೂ ಬೆಂಗಳೂರು-ಕಲಬುರಗಿ- ಬೆಂಗಳೂರು ಮಾರ್ಗಗಳಲ್ಲಿ ವಿಮಾನ ಸೇವೆ ಒದಗಿಸಲಿದ್ದು, ಈ ಸೇವೆಗೆ ಬೆಂಬಲವಾಗಿ ರಾಜ್ಯ ಸರ್ಕಾರವು 28.47 ಕೋಟಿ ರೂಪಾಯಿ ಮೊತ್ತವನ್ನು 'ವಯಬಿಲಿಟಿ ಗ್ಯಾಪ್ ಫಂಡಿಂಗ್' ರೂಪದಲ್ಲಿ ನೀಡುತ್ತಿದೆ. ಎರಡೂ ಮಾರ್ಗಗಳ ವಿಮಾನ ಪ್ರಯಾಣಕ್ಕೆ ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಸಹ ಆರಂಭವಾಗಿದೆ.

Bengaluru Second Airport: ಟ್ರಾಫಿಕ್, ದೂರ, ಮೆಟ್ರೋ ಸಂಪರ್ಕ ವಿಳಂಬ: ಬೆಂಗಳೂರಿಗೆ ಹೊಸ ಏರ್‌ಪೋರ್ಟ್ ಯಾಕೆ ಬೇಕು?
Bengaluru Second Airport: ಟ್ರಾಫಿಕ್, ದೂರ, ಮೆಟ್ರೋ ಸಂಪರ್ಕ ವಿಳಂಬ: ಬೆಂಗಳೂರಿಗೆ ಹೊಸ ಏರ್‌ಪೋರ್ಟ್ ಯಾಕೆ ಬೇಕು?

ಕಲಬುರಗಿಯ ವಿಮಾನ ಸೇವೆ ನಷ್ಟದ ಕಾರಣದಿಂದ ಸ್ಥಗಿತಗೊಂಡಿದ್ದರೆ, ಬೀದರ್ ಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವಿಶೇಷ ನೆರವಿನಿಂದ ಸೀಮಿತ ವಿಮಾನ ಸೇವೆ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮ, ಕೃಷಿ ಹಾಗೂ ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಾದೇಶಿಕ ವಿಮಾನಯಾನ ಸಂಪರ್ಕ ಯೋಜನೆಯಡಿ ಸರ್ಕಾರವು ವಿಮಾನ ಸೇವೆ ಪುನಃ ಶುರು ಮಾಡುತ್ತಿದೆ.

ಈ ನಿರ್ಧಾರದಿಂದ ಕೇವಲ ದೇಶಿ ವಿಮಾನ ಪ್ರಯಾಣಿಕರಿಗೆ ವಿಮಾನ ಸೇವೆ ಸಿಗುವುದು ಮಾತ್ರವಲ್ಲದೇ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೊಸ ವೇಗ ದೊರೆಯಲಿದೆ. ಉದ್ಯಮ, ಹೂಡಿಕೆ ಮತ್ತು ಜನಸಂಪರ್ಕ ವೃದ್ಧಿಗೆ ಸಾರಿಗೆ ಪೂರಕವಾಗಲಿದೆ. ಜೂನ್ ಬೆಂಗಳೂರು ಸಂಪರ್ಕ ಸಾಧಿಸಲು ಹೆಚ್ಚುವರಿ ಸೇವೆ ಸಿಕ್ಕಂತಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ರೈಲು ಸಾರಿಗೆ ಸಮಸ್ಯೆ

ಕಲ್ಯಾಣ ಕರ್ನಾಟಕದ ಭಾಗಗಳಲ್ಲಿ ಸಾರಿಗೆ ಪೈಕಿ ರೈಲು ಸಾರಿಗೆ ಕೊರತೆ ಇದೆ ಎಂಬ ಮಾತುಗಳು ಹಿಂದಿನಿಂದ ಕೇಳಿ ಬರುತ್ತಿವೆ. ಇದನ್ನು ಗಮನಿಸಿಯೇ ಮುಂಬೈ-ಬೆಂಗಳೂರು ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಕಲಬುರಗಿ, ಯಾದಗಿರಿ ಮಾರ್ಗವಾಗಿ ಬಿಡಲಾಗುತ್ತಿದೆ. ರೈಲಿಗೆ ಅನುಮೋದನೆ ನೀಡಲಾಗಿದೆ. ಶೀಘ್ರವೇ ಸಂಚಾರ ಆರಂಭಿಸಲಿದೆ. ಬೆಂಗಳೂರಿಗೆ ನೇರ ಸೇವೆಯ ಬಸ್ ಬಿಡುವಂತೆ, ಹಚ್ಚುವರಿ ರೈಲುಗಳ ಓಡಾಟಕ್ಕೆ ಈ ಭಾಗದ ಜನರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+