ಇನ್ನೆರಡು ದಿನಗಳಲ್ಲಿ ಸೂರ್ಯನಂತೆ ಬೆಳಗುವುದು ಈ ರಾಶಿಯವರ ಅದೃಷ್ಟ: ನನಸಾಗುವುದು ಸ್ವಂತ ಮನೆ ಕನಸು

ಗ್ರಹಗಳ ರಾಜ ಸೂರ್ಯ, ಮೇ 25 ರಂದು ಮಧ್ಯಾಹ್ನ 3:44 ಕ್ಕೆ ರೋಹಿಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಇದಾದ ನಂತರ ಜೂನ್ 8 ರವರೆಗೆ ಅದೇ ನಕ್ಷತ್ರದಲ್ಲಿ ಇರಲಿದ್ದಾನೆ. ಸೂರ್ಯ ರೋಹಿಣಿ ನಕ್ಷತ್ರವನ್ನು ಪ್ರವೇಶಿಸುವುದರೊಂದಿಗೆ, ಐದು ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಈ ರಾಶಿಯವರ ಸ್ಥಾನಮಾನ ಮತ್ತು ಪ್ರತಿಷ್ಠೆಯ ಹೆಚ್ಚಾಗುವುದು. ವೃತ್ತಿಯಲ್ಲಿ ಯಶಸ್ಸು ಸಿಗುವುದು.

ಸೂರ್ಯ ಸಂಕ್ರಮಣದಿಂದ ಅದೃಷ್ಟ ಪಡೆಯುವ ರಾಶಿಗಳು:

ಮೇಷ ರಾಶಿ: ರೋಹಿಣಿ ನಕ್ಷತ್ರದಲ್ಲಿ ಸೂರ್ಯನ ಸಂಚಾರವು ಮೇಷ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವನ್ನು ತರುತ್ತದೆ. ಎಲ್ಲಾ ಕಠಿಣ ಪರಿಶ್ರಮವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಹೊಸ ಉದ್ಯೋಗ ಅವಕಾಶ ಸಿಗಬಹುದು. ನಿಮ್ಮ ಆದಾಯದೊಂದಿಗೆ ಸಂಪತ್ತು ಕೂಡಾ ಹೆಚ್ಚಾಗುವುದು. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

Sun Transit

ವೃಷಭ ರಾಶಿ: ರೋಹಿಣಿ ನಕ್ಷತ್ರಕ್ಕೆ ಸೂರ್ಯನ ಪ್ರವೇಶವು ವೃಷಭ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ಹಣ ಗಳಿಸುವ ಅವಕಾಶಗಳನ್ನು ತರುತ್ತದೆ. ಈ ಅವಧಿಯಲ್ಲಿ ಹೊಸ ಕಾರು ಅಥವಾ ವಾಹನವನ್ನು ಖರೀದಿಸಬಹುದು. ಲಕ್ಷ್ಮಿ ದೇವಿಯ ಸಂಪೂರ್ಣ ಆಶೀರ್ವಾದ ನಿಮ್ಮ ಮೇಲಿರುವುದು. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಉನ್ನತ ಮಟ್ಟಕ್ಕೆ ಏರುವ ಸೂಚನೆಗಳಿವೆ.

ನಿಮ್ಮ ಜಾತಕದಲ್ಲಿ ಯಾವ ದೆಸೆ ನಡೆಯುತ್ತಿದೆ? ಯಾವ ಗ್ರಹದ ಪ್ರಭಾವ ಹೆಚ್ಚಿದೆ? ಎರಡೇ ನಿಮಿಷದಲ್ಲಿ ಹೀಗೆ ಕಂಡುಕೊಳ್ಳಿ
ನಿಮ್ಮ ಜಾತಕದಲ್ಲಿ ಯಾವ ದೆಸೆ ನಡೆಯುತ್ತಿದೆ? ಯಾವ ಗ್ರಹದ ಪ್ರಭಾವ ಹೆಚ್ಚಿದೆ? ಎರಡೇ ನಿಮಿಷದಲ್ಲಿ ಹೀಗೆ ಕಂಡುಕೊಳ್ಳಿ

ಸಿಂಹ ರಾಶಿ: ಸಿಂಹ ರಾಶಿಯ ಅಧಿಪತಿ ಸೂರ್ಯ. ಹಾಗಾಗಿ ಸೂರ್ಯನ ನಕ್ಷತ್ರ ಬದಲಾವಣೆ ನಿಮಗೆ ಅತ್ಯಂತ ಶುಭಕರವಾಗಿರುತ್ತದೆ. ವೃತ್ತಿಪರ ಪ್ರಗತಿಗೆ ಅವಕಾಶ ಸಿಗುವುದು. ಶೈಕ್ಷಣಿಕ ಸ್ಪರ್ಧೆಗಳಲ್ಲಿ ಯಶಸ್ಸನ್ನು ಸಾಧಿಸಲು ಸಮಯ ಅನುಕೂಲಕರವಾಗಿದೆ. ಕಷ್ಟಪಟ್ಟು ಕೆಲಸ ಮಾಡಿದರೆ, ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಆರ್ಥಿಕ ಲಾಭವಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಬಲಗೊಳ್ಳುತ್ತದೆ. ತಂದೆಯಿಂದ ನಿಮಗೆ ಬೆಂಬಲ ಸಿಗುತ್ತದೆ.

ಕನ್ಯಾ ರಾಶಿ: ಆಸ್ತಿ ಖರೀದಿಯ ಯೋಗವಿದೆ. ಈ ಸಮಯದಲ್ಲಿ, ಭೂಮಿ, ಮನೆ, ನಿವೇಶನ, ಅಂಗಡಿ ಅಥವಾ ವಾಹನವನ್ನು ಖರೀದಿಸಬಹುದು. ಬಾಕಿ ಇರುವ ಯಾವುದೇ ಕೆಲಸ ಯಶಸ್ವಿಯಾಗಿ ಪೂರ್ಣವಾಗುವುದು. ಸಂತೋಷ ಹೆಚ್ಚುವುದು. ವೃತ್ತಿಜೀವನದಲ್ಲಿ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಕುಟುಂಬ ಜೀವನವು ಸಂತಸಮಯವಾಗಿರುತ್ತದೆ. ಕಷ್ಟಗಳೆಲ್ಲಾ ನಿವಾರಣೆಯಾಗುವುದು.

ಇನ್ನು 10 ದಿನಗಳಲ್ಲಿ ಹೆಚ್ಚುವುದು ಈ ರಾಶಿಯವರ ಸಿರಿ ಸಂಪತ್ತು, ಸಾಲದಿಂದ ಸಿಗುವುದು ಮುಕ್ತಿ, ಅಕ್ಟೋಬರ್‌ವರೆಗೆ ಅದೃಷ್ಟ
ಇನ್ನು 10 ದಿನಗಳಲ್ಲಿ ಹೆಚ್ಚುವುದು ಈ ರಾಶಿಯವರ ಸಿರಿ ಸಂಪತ್ತು, ಸಾಲದಿಂದ ಸಿಗುವುದು ಮುಕ್ತಿ, ಅಕ್ಟೋಬರ್‌ವರೆಗೆ ಅದೃಷ್ಟ

ಧನು ರಾಶಿ: ರೋಹಿಣಿ ನಕ್ಷತ್ರದಲ್ಲಿ ಸೂರ್ಯನ ಸಂಚಾರವು ಧನು ರಾಶಿಯವರ ಅದೃಷ್ಟವನ್ನು ಬೆಳಗಿಸಬಹುದು. ಉದ್ಯೋಗಿಗಳಿಗೆ ಬಡ್ತಿ ಅಥವಾ ಹೊಸ ಕೆಲಸದ ಬಗ್ಗೆ ಒಳ್ಳೆಯ ಸುದ್ದಿ ಸಿಗಬಹುದು. ಉದ್ಯಮಿಗಳಿಗೆ ಗಮನಾರ್ಹ ಆರ್ಥಿಕ ಪ್ರಯೋಜನಗಳಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಆದಾಯ ಉತ್ತಮವಾಗಿರುತ್ತದೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಸಮಯ ಅನುಕೂಲಕರವಾಗಿದ್ದು ಹೊಸ ಕೆಲಸ ಆರಂಭಿಸಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+