ಮದುವೆ ದಿಬ್ಬಣದ ಬಸ್ ಮೇಲೆ ವಿದ್ಯುತ್ ತಂತಿ ಬಿದ್ದು ಚಾಲಕ ಸಾವು

Posted By:
Subscribe to Oneindia Kannada

ರಾಮನಗರ, ನವೆಂಬರ್.30 : ಮದುವೆ ದಿಬ್ಬಣದ ಬಸ್ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ವಿದ್ಯುತ್ ಪ್ರವಹಿಸಿ ಚಾಲಕ ಮೃತಪಟ್ಟಿರುವ ಘಟನೆ ಚನ್ನಪಟ್ಟಣದ ಕೆಂಗಲ್ ಬಳಿ ನಡೆದಿದೆ.

ಹುಣಸೂರಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಚಾಲಕ ಸಾವು

ಮೃತ ಬಸ್ ಚಾಲಕ ಲೋಕೆಶ್ (32) ರಾಮನಗರದ ಗಂಗರಾಜನಹಳ್ಳಿ ಗ್ರಾಮದವನು ಎಂದು ತಿಳಿದು ಬಂದಿದೆ, ಬಿಡದಿ ಹೋಬಳಿಯ ಬಾನಂದೂರು ಗ್ರಾಮದಿಂದ ಕೆಂಗಲ್ ನ ಬೆಂಗಳೂರು-ಮೈಸೂರು ಹೆದ್ದಾರಿ ಬಳಿಯ ತಿಮ್ಮಮ್ಮದಾಸೇಗೌಡ ಕಲ್ಯಾಣಮಂಟಪದಲ್ಲಿ ನಡೆಯುತ್ತಿದ್ದ ಮದುವೆಗೆ ಜನರನ್ನು ಕರೆತಂದಿದ್ದ ಶ್ರೀಸಾಯಿ ಹೆಸರಿನ ಖಾಸಗಿ ಬಸ್.

Bus driver died by electric shock after hitting light poll

ಜನರನ್ನು ಕೆಳಗಿಳಿಸಿ ನಂತರ ವಾಹನವನ್ನು ರಿವರ್ಸ್ ತೆಗೆದುಕೊಳ್ಳುವಾಗ ಹಿಂಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದ ಪರಿಣಾಮ ಕಂಬ ತುಂಡಾಗಿ ಬಸ್ ಮೇಲೆ ವಿದ್ಯುತ್ ತಂತಿ ತಗುಲಿ ವಿದ್ಯುತ್ ಹರಿದು ಚಾಲಕ ಸಾವನ್ನಪ್ಪಿದ್ದಾನೆ.

ಬಸ್ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮೂರು ತುಂಡಾಗಿದೆ. ಘಟನೆಗೆ ಬಸ್ ಚಾಲಕ ಮೊಬೈಲ್ ನಲ್ಲಿ ಮಾತನಾಡುತ್ತಾ ಬಸ್ ಹಿಂಬದಿಗೆ ಚಲಾಯಿಸಿದ್ದೇ ಕಾರಣ ಎನ್ನಲಾಗಿದೆ.

Bus driver died by electric shock after hitting light poll

ಇನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A bus driver in Chenapatan's Kengal village died by electric shock after hitting a light poll. driver Lokesh talking in mobile phone will he hit the electric poll.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ