Bengaluru-Mysuru expressway: ಅಪಘಾತಗಳ ತಡೆಗೆ ಹೊಸ ಯೋಜನೆ ಹಾಕಿಕೊಂಡ ಹೆದ್ದಾರಿ ಪ್ರಾಧಿಕಾರ

ಮೈಸೂರು, ಆಗಸ್ಟ್‌, 25: ಬೆಂಗಳೂರು- ಎಕ್ಸ್‌ಪ್ರೆಸ್‌ ವೇನಲ್ಲಿ ಸರಣಿ ಅಪಘಾತಗಳು ನಡೆಯುತ್ತೇ ಇದ್ದವು. ಆದರೆ ಇತ್ತೀಚೆಗೆ ಇಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರ ಹಿತದೃಷ್ಟಿಯಿಂದ ಹೆದ್ದಾರಿಯ 24 ಕಡೆಗಳಲ್ಲಿ ಸ್ಕೈವಾಕ್‌ ನಿರ್ಮಾಣವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದು ಎಲ್ಲೆಲ್ಲಿ ನಿರ್ಮಾಣವಾಗಲಿದೆ, ಇದರ ಉದ್ದ ಎಷ್ಟು ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಅಪಘಾತಗಳ ಹಾಟ್‌ಸ್ಪಾಟ್‌ ಅಂತಲೇ ಹೆಸರಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಜನರು ರಸ್ತೆ ದಾಟಲು ಹರಸಾಹಸಪಡುವಂತಾಗಿದ್ದು, ಈ ಹಿನ್ನೆಲೆ ಸ್ಕೈವಾಕ್‌ಗಳು ನಿರ್ಮಾಣ ಆಗಲಿವೆ. 118 ಕಿಲೋ ಮೀಟರ್‌ ಉದ್ದದ ಎಕ್ಸ್‌ಪ್ರೆಸ್‌ ವೇಯಲ್ಲಿನ ಒಟ್ಟು 24 ಕಡೆಗಳಲ್ಲಿ ಈ ಸ್ಕೈವಾಕ್‌ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

bengaluru-mysuru-expressway

ಈಗಾಗಲೇ ಹೆದ್ದಾರಿ ಪ್ರಾಧಿಕಾರ (NHAI) ಫುಟ್‌ ಆನ್‌ ಬ್ರಿಡ್ಜ್‌ಗಳ ಮಾದರಿಯ ನೀಲನಕ್ಷೆ ಮತ್ತು ಕಾಮಗಾರಿಯ ಡಿಪಿಆರ್‌ ಸಿದ್ಧಪಡಿಸಿದೆ. 24 ಕಡೆ ಸ್ಟೀಲ್‌ ಬ್ರಿಡ್ಜ್‌ಗಳನ್ನು ನಿರ್ಮಿಸಿ ಈ ಮೂಲಕ ಜನರು ಯಾವುದೇ ಕಿರಿಕಿರಿ ಇಲ್ಲದಂತೆ ಸುಗಮವಾಗಿ ರಸ್ತೆ ದಾಟಲು ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕೆ ಸುಮಾರು 46.10 ಕೋಟಿ ರೂಪಾಯಿ ವೆಚ್ಚ ಆಗಲಿದೆ ಎಂದು ಅಂದಾಜು ಮಾಡಲಾಗಿದೆ ಎಂದು ವಿಜಯ ಕರ್ನಾಕ ಪತ್ರಿಕೆಯಲ್ಲಿ ವರದಿಯಾಗಿದೆ.

ನಿರ್ಮಾಣ ಆಗುವ ಸ್ಕೈವಾಕ್‌ಗಳಲ್ಲಿಇಪಿಸಿ ಮಾದರಿಯನ್ನು ಅಳವಡಿಸಿದ್ದು, ಈ ಮಾದರಿಯಲ್ಲಿ ಗುತ್ತಿಗೆ ಪಡೆದಿರುವವರೇ ಯೋಜನೆ ರೂಪಿಸಿ, ಕಾಮಗಾರಿ ನಡೆಸಲಿದ್ದಾರೆ. ಗುತ್ತಿಗೆ ಪಡೆದ ಕಂಪನಿ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ. 5 ವರ್ಷಗಳ ಕಾಲ ಗುತ್ತಿಗೆದಾರರೇ ಇವುಗಳ ನಿರ್ವಹಣೆ ಜವಾಬ್ದಾರಿ ಹೋರಬೇಕಾಗುತ್ತದೆ. ಹೆದ್ದಾರಿ ಪ್ರಾಧಿಕಾರ ಕೇವಲ ಕಾಮಗಾರಿಯ ಮೇಲುಸ್ತುವಾರಿಯ ಜವಾಬ್ದಾರಿಯನ್ನಷ್ಟೇ ನೋಡಿಕೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆಕ್ಸೆಸ್‌ ಕಂಟ್ರೋಲ್‌ ಹೈವೇ ದಾಟಲು ಯಾವುದೇ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡದ ಕಾರಣ ಸಾರ್ವಜನಿಕರು ಕೆಲವೆಡೆ ರಸ್ತೆ ಮಧ್ಯೆಯೇ ನಡೆದುಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಅಪಘಾತ ಹೆಚ್ಚುತ್ತಿದೆ ಎಂದು ರಸ್ತೆ ಸುರಕ್ಷತೆ ಬಗ್ಗೆ ಅಧ್ಯಯನ ನಡೆಸಿದ ಪೊಲೀಸ್‌ ಇಲಾಖೆ ವರದಿ ನೀಡಿತ್ತು.

ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಲು ಹೆದ್ದಾರಿ ಪ್ರಾಧಿಕಾರ (NHAI) ನಿರ್ಲಕ್ಷ್ಯವಹಿಸುತ್ತಿದೆ ಎಂದು ಇತ್ತೀಚೆಗಷ್ಟೇ ರಸ್ತೆ ಸುರಕ್ಷತೆ ಪರಿಶೀಲಿಸಿದ ಎಡಿಜಿಪಿ ಅಲೋಕ್‌ಕುಮಾರ್‌ ಅವರು ಸಹ ಅಸಮಾಧಾನ ಹೊರಹಾಕಿದ್ದರು. ಈ ಎಲ್ಲ ಬೆಳವಣಿಗಗಳ ಬೆನ್ನಲ್ಲೇ ಇದೀಗ ಹೆದ್ದಾರಿ ಪ್ರಾಧಿಕಾರ ಜನರು ರಸ್ತೆ ದಾಟಲು ಎಫ್‌ಒಬಿಗಳನ್ನು ನಿರ್ಮಾಣ ಮಾಡಲು ನಿರ್ಧಾರ ಮಾಡಿದೆ ಎನ್ನಲಾಗಿದೆ.

ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ನಿರ್ಮಾಣ ಆಗಲಿರುವ ಸ್ಕೈವಾಕ್‌ ಸುಧಾರಿತ ವಿಧಾನದಲ್ಲಿ ತಯಾರು ಆಗಲಿದೆ. ಅಲ್ಲದೆ ಇವುಗಳು ಕಾಂಕ್ರಿಟ್‌ ಬ್ರಿಕ್ಸ್‌ ಮತ್ತು ಕಬ್ಬಿಣದಿಂದ ನಿರ್ಮಾಣ ಆಗಲಿವೆ. ಆಕ್ಸೆಸ್‌ ಕಂಟ್ರೋಲ್‌ ಹೈವೇ ಮತ್ತು ಸರ್ವಿಸ್‌ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಯಾವುದೇ ಸಮಸ್ಯೆ ಆಗದಂತೆ ಈ ಪಾದಚಾರಿ ಮೇಲ್ಸೇತುವೆಯನ್ನು ವಿನ್ಯಾಸ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

63 ಅಡಿ ಉದ್ದವಿರುವ ಈ ಬ್ರಿಡ್ಜ್‌, 3.5 ಮೀಟರ್‌ ಅಗಲ ಇರಲಿದೆ. ಜನರು ನಡೆದುಕೊಂಡು ಹೋಗಲು 3 ಮೀಟರ್‌ನಷ್ಟು ವಿಶಾಲವಾಗಿರಲಿದೆ. ಇದನ್ನು ಹೊರಗಡೆ ಸಿದ್ಧಪಡಿಸಿ ಹೆದ್ದಾರಿಯಲ್ಲಿ ಕೇವಲ ಅಳವಡಿಕೆ ಮಾಡಲಿದೆ ಎನ್ನಲಾಗಿದೆ.

ಈ ಸ್ಥಳಗಳಲ್ಲಿ ಸ್ಕೈವಾಕ್‌ ನಿರ್ಮಾಣ

1. ಕಣಮಿಣಕಿ

2. ಕಲ್ಲುಗೋಪಹಳ್ಳಿ

3. ಹುಲ್ತಾರ್‌ ಹೊಸದೊಡ್ಡಿ

4. ಮಾದಾಪುರ

5. ರುದ್ರಾಕ್ಷಿಪುರ

6. ಬಿ.ಗೌಡಗೆರೆ

7. ಬೂದನೂರು,

8. ಸಿದ್ದಾಪುರ,

9. ಗಂಗೂರು

10. ಗೌಡಹಳ್ಳಿ

11. ಬ್ರಹ್ಮಾಪುರ

12. ಕಳಸ್ತಾವಾಡಿ,

13. ಸಿದ್ದಲಿಂಗಪುರ

ಪಾದಚಾರಿಗಳು ಸುಗಮವಾಗಿ ಯಾವುದೇ ಕಿರಿಕಿರಿ ಇಲ್ಲದೆ ನಡುದುಕೊಂಡು ಹೋಗುವ ಹಿತದೃಷ್ಟಿಯಿಂದ ಈ 13 ಕಡೆ ಸೇರಿದಂತೆ ಒಟ್ಟು 24 ಕಡೆಗಳಲ್ಲಿ ಸ್ಕೈವಾಕ್‌ ನಿರ್ಮಾಣ ಮಾಡಲಾಗುತ್ತದೆ. ಹಾಗಾದರೆ ಈ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ. ಸಾರ್ವಜನಿಕರು ಓಡಾಡಲು ಯಾವಾಗ ಸಿದ್ಧವಾಗುತ್ತದೆ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+