ಚನ್ನಪಟ್ಟಣದಿಂದ ಕಾಂಗ್ರೆಸ್ ಟಿಕೆಟ್ ಎಚ್ಚೆಂ ರೇವಣ್ಣಂಗೆ!

Posted By: ರಾಮನಗರ ಪ್ರತಿನಿಧಿ
Subscribe to Oneindia Kannada
   Karnataka Elections 2018 : ಕಾಂಗ್ರೆಸ್ ನಿಂದ ಎಚ್ ಎಂ ರೇವಣ್ಣ ಈ ಕ್ಷೇತ್ರದಿಂದ ಸ್ಪರ್ಧೆ| Oneindia Kannada

   ಮಾಗಡಿ (ರಾಮನಗರ ಜಿಲ್ಲೆ), ಏಪ್ರಿಲ್ 12: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ಮಾತಿಗೆ ಬದ್ಧನಾಗಿರುವುದಾಗಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮಾಗಡಿಯಲ್ಲಿ ಸ್ಪಷ್ಟಪಡಿಸಿದರು.

   ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ತಮ್ಮ ತೋಟದ ಮನೆಯಲ್ಲಿ ಕರೆದಿದ್ದ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಿನ್ನೆ ರಾತ್ರಿಯವರೆಗೂ ದೆಹಲಿಯಲ್ಲೇ ಇದ್ದೆ. ಅಲ್ಲಿಯ ತನಕ ನನ್ನ ಸ್ಪರ್ಧೆ ವಿಚಾರವಾಗಿ ಚರ್ಚೆ ನಡೆದಿರಲಿಲ್ಲ. ಆದರೆ ಬೆಳಗ್ಗೆ ನನ್ನ ಹೆಸರು ಪ್ರಸ್ತಾವ ಆಗಿದೆ ಎಂದರು.

   'ಯೋಗೇಶ್ವರ್ ಗೆದ್ದರೆ ಚ.ಪಟ್ಟಣ ಬಸ್ಟ್ಯಾಂಡಲ್ಲಿ ನೇಣು ಹಾಕ್ಕೊಳ್ತೀನಿ'

   ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪೋನ್ ಮಾಡಿ, ಈ ವಿಷಯ ತಿಳಿಸಿದರು. ನಾನು ಚುನಾವಣೆ ನಿಲ್ಲುವ ಬಗ್ಗೆ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ ಎಂದರು.

   Assembly elections: HM Revanna likely to contest for Congress from Channapatna

   ಸಿದ್ದರಾಮಯ್ಯ ಅವರು ಎರಡು ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ರೇವಣ್ಣ, ಈ ಸಂಸ್ಕೃತಿ ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಪ್ರಧಾನಿ ಮೋದಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕೂಡ ಎರಡು ಕಡೆ ಸ್ಪರ್ಧೆ ಮಾಡಿದ್ದಾರೆ ಎಂದು ಹೇಳಿದರು.

   ರಾಮನಗರದಲ್ಲಿ ಕುಮಾರಸ್ವಾಮಿ ವಿರುದ್ಧ ತೇಜಸ್ವಿನಿ ಸ್ಪರ್ಧೆ?

   ಇನ್ನು ಸಭೆಯಲ್ಲಿದ್ದ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಚುನಾವಣೆಯಲ್ಲಿ ಇಂತಹ ಗಿಮಿಕ್ ರಾಜಕಾರಣ ಮಾಡಬೇಕು. ಚನ್ನಪಟ್ಟಣದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂದು ಚರ್ಚೆ ಇತ್ತು. ಹಾಗಾಗಿ ರೇವಣ್ಣ ಅವರ ಹೆಸರು ಕೇಳಿಬರುತ್ತಿದೆ ಎಂದು ನಗುತ್ತಾ ಪ್ರತಿಕ್ರಿಯೆ ನೀಡಿದರು.

   ಸಭೆಯಲ್ಲಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಸೇರಿದಂತೆ ಕಾಂಗ್ರೆಸ್ ನ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka assembly elections 2018: Transport minister HM Revanna likely to contest for Congress from Channapatna constituency, Ramanagara district. Himself gave hint in Magadi about contest.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ