80 ಕೋಟಿ ವೆಚ್ಚದಲ್ಲಿ ಶಿವಕುಮಾರ ಶ್ರೀಗಳ ಹುಟ್ಟೂರು ಅಭಿವೃದ್ಧಿ

ರಾಮನಗರ, ಏಪ್ರಿಲ್ 2; ತ್ರಿವಿಧ ದಾಸೋಹಿ, ಲಿಂಗೈಕ್ಯ ಡಾ. ಶಿವಕುಮಾರ ಮಹಾಸ್ವಾಮಿಗಳ ಹುಟ್ಟೂರು ಅಭಿವೃದ್ಧಿಗೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕರ್ನಾಟಕ ಸರ್ಕಾರ ಗ್ರಾಮದ ಅಭಿವೃದ್ಧಿಗೆ 80 ಕೋಟಿ ರೂ. ಬಿಡುಗಡೆ ಮಾಡಿದೆ.

ರಾಮನಗರ ಜಿಲ್ಲೆಯಲ್ಲಿರುವ ವೀರಾಪುರ ಗ್ರಾಮದಲ್ಲಿ ಶ್ರೀಗಳ 111 ಅಡಿ ಎತ್ತರದ ಪುತ್ಥಳಿ ಹಾಗೂ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿದೆ. ಶುಕ್ರವಾರ ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ.

ವೀರಾಪುರ ಗ್ರಾಮದ ಸಮುದಾಯ ಭವನ, ದೇವಾಲಯ, ಶ್ರೀ ಗಳ‌ ಹಳೆಯ ಮನೆ ಅಭಿವೃದ್ಧಿ ಸೇರಿದಂತೆ ಸುಮಾರು 80 ಕೋಟಿ ವೆಚ್ಚದ ಅಭಿವೃದ್ಧಿ ಕಾಮಾಗಾರಿಗೆ ರಾಮನಗರ ಜಿಲ್ಲಾಡಳಿತ ಚಾಲನೆಯನ್ನು ನೀಡಿದೆ.

Ramanagara news

ರಾಮನಗರ ಜಿಲ್ಲಾಡಳಿತ ಮತ್ತು ಮಾಗಡಿ ತಾಲೂಕು ಅಧಿಕಾರಿಗಳ ತಂಡ ಉದ್ದೇಶಿತ ಅಭಿವೃದ್ಧಿ ಕಾಮಾಗಾರಿಗಳ ವೀಕ್ಷಣೆ ನಡೆಸಿತು. ವೀರಾಪುರ ಗ್ರಾಮದ ಪೂರ್ವದಲ್ಲಿರುವ ಬೆಟ್ಟದ ಮೇಲೆ ಶ್ರೀ ಗಳ 111 ಅಡಿ ಪುತ್ಥಳಿ ಹಾಗೂ ವಸ್ತು ಸಂಗ್ರಾಹಲಾಯ ನಿರ್ಮಾಣವಾಗಲಿದೆ.

ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, "ವೀರಾಪುರದ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಶ್ರೀ ಬಾಲಗಂಗಾಧರನಾಥ ಸ್ವಾಮಿಜಿ ಹುಟ್ಟೂರು, ರಾಮನಗರ ತಾಲ್ಲೂಕಿನ ಬಾನಂದೂರು ಸಹ ಅಭಿವೃದ್ಧಿಯಾಗಲಿ, ಅದಷ್ಟೂ ಬೇಗ ಜಿಲ್ಲೆಯ ಇಬ್ಬರು ಸಂತರ ಗ್ರಾಮಗಳು ಮಾದರಿ ಗ್ರಾಮವಾಗಲಿ" ಎಂದು ಆಶಿಸಿದರು.

"ಸ್ವಾಮೀಜಿಗಳ 111 ಅಡಿ ಎತ್ತರದ ಪುತ್ಥಳಿ ಕಾಮಗಾರಿ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಎಲ್ಲಾ ಸುಸೂತ್ರವಾಗಿ ಕಾರ್ಯಕಲಾಪ ನಡೆದರೇ, ಇನ್ನೂ ಎರಡು-ಮೂರು ವರ್ಷಗಳಲ್ಲಿ ಕಾಯಕ ಯೋಗಿಯ ಮೂರ್ತಿ ಜನರ ದರ್ಶನಕ್ಕೆ ಲಭ್ಯವಾಗಲಿದೆ" ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+