6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ‌ಎಸಗಿದ್ದ ಕಾಮುಕನಿಗೆ 10 ವರ್ಷ ಸಜೆ

ರಾಮನಗರ, ಅಕ್ಟೋಬರ್ 4: ಆರು ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹಲ್ಲೆ ನಡೆಸಿದ್ದ ತಮಿಳುನಾಡು ಮೂಲದ ಮಂಜುನಾಥ್ ಎಂಬಾತನಿಗೆ 10 ವರ್ಷ ಜೈಲು ವಾಸದ ಜೊತೆಗೆ 20 ಸಾವಿರ ದಂಡ ಶಿಕ್ಷೆ ವಿಧಿಸಿ ರಾಮನಗರದ ಒಂದನೇ ಅಪರ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.

2018ರಲ್ಲಿ ಕನಕಪುರ ನಗರ ಠಾಣಾ ವ್ಯಾಪ್ತಿಯ ಪ್ರಶಾಂತ ನಗರದಲ್ಲಿ 6 ವರ್ಷದ ಬಾಲಕಿ ಮೇಲೆ ಮಂಜುನಾಥ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಜೊತೆಗೆ ಹಲ್ಲೆಯನ್ನೂ ನಡೆಸಿದ್ದ. ಎರಡು ದಿನಗಳ ನಂತರ ಬಾಲಕಿ ತಂದೆ ತಾಯಿಗೆ ವಿಷಯ ತಿಳಿಸಿದ್ದಳು. ಪೋಷಕರ ದೂರಿನ ಮೇರೆಗೆ ಕನಕಪುರ ನಗರ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

10 Year Imprisonment For Man For Sexually Abusing Girl In Kanakapura

ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಮಂಜುನಾಥ್ ಗೆ 10 ವರ್ಷ ಜೈಲು, 20 ಸಾವಿರ ದಂಡ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+