• search
  • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಗೆ ಕಮರಿದ ಸೊಪ್ಪು, ತರಕಾರಿ; ಗ್ರಾಹಕರ ಜೇಬಿಗೆ ಕತ್ತರಿ: ಸಂಕಷ್ಟದಲ್ಲಿ ರೈತರು

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಅಕ್ಟೋಬರ್ 6: ಸತತ ಸುರಿದ ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯ ಮತ್ತು ಶೀತಗಾಳಿ ಪ್ರಮಾಣ ಹೆಚ್ಚಾಗಿ ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದರಿಂದ ರಾಯಚೂರು ಜಿಲ್ಲೆಯ ರೈತರು ಕಂಲಾಗಿದ್ದಾರೆ.

ಜಿಲ್ಲಾದ್ಯಂತ ಅಂದಾಜು 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ತರಕಾರಿ ಬೆಳೆದಿದ್ದು, ಮೆಣಸಿನಕಾಯಿ, ದಾಳಿಂಬೆ, ಹೂ ಕೋಸು, ಈರುಳ್ಳಿ ಸಹ ಬೆಳೆದಿದ್ದಾರೆ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳೆಗಳು ಸಂಪೂರ್ಣ ಕೊಳೆತಿದೆ. ಜಿಲ್ಲಾದ್ಯಂತ ಅಂದಾಜು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾಳಾಗಿವೆ. ಮಳೆಯಿಂದ ಹೂ ಕೋಸು, ಟೊಮೇಟೊ, ಈರುಳ್ಳಿ ಬೆಳೆಗೆ ಬಾರಿ ಪೆಟ್ಟು ಬಿದ್ದಿದೆ.

ಸ್ವಾವಲಂಬಿ App ಮೂಲಕ ನಿಮ್ಮ ಜಮೀನಿನ ನಕಾಶೆ ನೀವೆ ಡೌನ್‌ ಲೋಡ್ ಮಾಡಿಕೊಳ್ಳಿಸ್ವಾವಲಂಬಿ App ಮೂಲಕ ನಿಮ್ಮ ಜಮೀನಿನ ನಕಾಶೆ ನೀವೆ ಡೌನ್‌ ಲೋಡ್ ಮಾಡಿಕೊಳ್ಳಿ

ಮಳೆಯಿಂದ ಬೆಳೆಗಳು ಕೊಳೆಯುವ ಪರಿಸ್ಥಿತಿ ಬಂದಿದೆ. ಹೂ ಕೋಸು ಹಳದಿ ಬಣ್ಣಕ್ಕೆ ತಿರುಗಿದ್ದರಿಂದ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಖರೀದಿಗೆ ಮುಂದಾಗುತ್ತಿಲ್ಲ. ಹೀಗಾಗಿ ಬೆಳೆಯೆಲ್ಲ ಹಿಂತಿರುಗಿ ರೈತರ ಮನೆಗೆ ಸೇರಿದ್ದರಿಂದ ರೈತರು ಸಂಪೂರ್ಣ ನಷ್ಟ ಅನುಭವಿಸುತ್ತಿದ್ದಾರೆ.

ಇದು ರೈತರ ಪಾಡಾದರೆ ಉತ್ತಮ ಹೆಚ್ಚಿನ ಪ್ರಮಾಣದ ತರಕಾರಿ ಮಾರುಕಟ್ಟೆಯಲ್ಲಿಲ್ಲದ ಕಾರಣ ಕೆಜಿಗೆ 20-30 ರೂ. ಇದ್ದ ಟೊಮೇಟೊ ಈಗ 70 ರೂ. ಆಗಿದೆ. ಕೆಜಿಗೆ 40 ಇದ್ದ ಬೀನ್ಸ್‌ ಈಗ 70-80 ರೂ. ಏರಿಕೆಯಾಗಿದೆ. ಸೌತೆಕಾಯಿ, ಹೂ ಕೋಸು ಬೆಲೆಯೂ ಹೆಚ್ಚಾಗಿದ್ದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದ್ದು, ತರಕಾರಿ ಕೊಳ್ಳುವುದೇ ದುಸ್ತರವಾಗಿದೆ. ಅದರಲ್ಲೂ ಬಡ, ಮಧ್ಯಮ ವರ್ಗದವರಂತೂ ತರಕಾರಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಸಾವಯವ ಕೃಷಿಯಲ್ಲಿ ಖುಷಿಕಂಡ ಮಸ್ಕಿ ತಾಲೂಕಿನ ಅಮೀನಗಡ ಸಹೋದರರುಸಾವಯವ ಕೃಷಿಯಲ್ಲಿ ಖುಷಿಕಂಡ ಮಸ್ಕಿ ತಾಲೂಕಿನ ಅಮೀನಗಡ ಸಹೋದರರು

 ರೈತರಿಗೆ ನಷ್ಟ, ಗ್ರಾಹಕರಿಗೆ ಹೊರೆ

ರೈತರಿಗೆ ನಷ್ಟ, ಗ್ರಾಹಕರಿಗೆ ಹೊರೆ

ಈರುಳ್ಳಿ 40-50 ರೂ. ಆಗಿದೆ. ಕ್ಯಾರೆಟ್‌ ಕೆಜಿಗೆ 30 ರೂ. ಇದ್ದಿದ್ದು ಈಗ 50 ರೂ. , ಹಿರೇಕಾಯಿ ಬೆಲೆ ದುಪ್ಪಟ್ಟಾಗಿದ್ದು, ಕೆಜಿಗೆ 60 ರೂ. ಆಗಿದೆ. ಬೆಂಡೆಕಾಯಿ 50 ರೂ.ಗೆ ಏರಿಕೆಯಾಗಿದೆ. ಚವಳಿಕಾಯಿ ಕೆಜಿಗೆ 40 ಇದ್ದಿದ್ದು 60-70 ರೂ.ಗೆ ಏರಿಕೆ ಕಂಡಿದೆ. ಹಾಗಲಕಾಯಿ 50 ರೂ., ಕ್ಯಾಪ್ಸಿಕಮ್‌ 70 ರೂ. ಗಡಿದಾಟಿದ್ದು, ಕೊಂಡುಕೊಳ್ಳುವುದೇ ಕಷ್ಟವಾಗಿ ಪರಿಣಮಿಸಿದೆ. ಅದರಲ್ಲೂ ಟೊಮೇಟೊ ಬೆಲೆ ಕೇಳಿ ಗ್ರಾಹಕರು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದು, ಕೆಜಿ ಖರೀದಿಸುತ್ತಿದ್ದ ಗ್ರಾಹಕರು ಅರ್ಧ ಕೆಜಿ ಖರೀದಿಸುತ್ತಿದ್ದಾರೆ. ಬೆಲೆ ಏರಿಕೆಗೆ ತತ್ತರಿಸಿರುವ ಕೆಲವರು ಟೊಮೇಟೊ ಖರೀದಿಸುವುದನ್ನೇ ಬಿಟ್ಟು ಹುಣಿಸೆ ಹಣ್ಣನ್ನೇ ಪರ್ಯಾಯವಾಗಿ ಬಳಸುತ್ತಿದ್ದಾರೆ.

 ಮಳೆಯಿಂದ ಕೊಳೆಯುತ್ತಿರುವ ತರಕಾರಿ

ಮಳೆಯಿಂದ ಕೊಳೆಯುತ್ತಿರುವ ತರಕಾರಿ

ಕೊತ್ತಂಬರಿ, ಪಾಲಕ್‌, ಮೆಂತೆ ಸೇರಿ ಮುಂತಾದ ಸೊಪ್ಪುಗಳ ಮಳೆಯಿಂದ ಹಾಳಾಗಿದ್ದು, ಇವುಗಳ ಬೆಲೆಯಲ್ಲಿಯೂ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಬೆಳೆ ಹಾಳಾಗಿರುವುದರಿಂದ ದೂರದ ಜಿಲ್ಲೆಗಳಿಂದ ಹಾಗೂ ಆಂಧ್ರ ಹಾಗೂ ತೆಲಂಗಾಣದಿಂದ ತರಕಾರಿ, ಸೊಪ್ಪು ಮಾರುಕಟ್ಟೆಗೆ ಬರುತ್ತಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು. ಜಿಟಿ ಜಿಟಿ ಮಳೆಯಿಂದ ತೇವಾಂಶ ಹೆಚ್ಚಿ ಈರುಳ್ಳಿ ಹಾಳಾಗುತ್ತಿದೆ. ತಾಡಪತ್ರಿ ಹೊದಿಸಿದರೆ, ಗಾಳಿಯಾಡದೇ ದುರ್ನಾತ ಬೀರುತ್ತಿದೆ. ಹೀಗಾಗಿ ಈರುಳ್ಳಿ, ಹೂ ಕೋಸು ಬೆಳೆದವರು ಚಿಂತೆಗೀಡಾಗಿದ್ದಾರೆ.

 ಮಾರುಕಟ್ಟೆಯಲ್ಲಿ ಸಿಗದ ಬೆಲೆ

ಮಾರುಕಟ್ಟೆಯಲ್ಲಿ ಸಿಗದ ಬೆಲೆ

ಮಳೆ ಸ್ವಲ್ಪವೂ ಬಿಡುವು ಕೊಡುತ್ತಿಲ್ಲ. ಕೆಲವೆಡೆ ಈರುಳ್ಳಿ ಹಾಕಿದಲ್ಲೇ ಕೆಡುತ್ತಿವೆ. ಹೂ ಕೋಸು ಮಳೆಯಿಂದ ಹಳದಿ ಬಣ್ಣಕ್ಕೆ ತಿರುಗಿದ್ದರಿಂದ ಕೈಗೆ ಬಂದ ಬೆಳೆ ತಿಪ್ಪೆ ಪಾಲಾಗುತ್ತಿದೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹೂ ಕೋಸು ಸಂಪೂರ್ಣ ಹಾಳಾಗಿದೆ. ಮಾರುಕಟ್ಟೆಗೆ ಕಳುಹಿಸಿದರೂ ಬೆಲೆ ಇಲ್ಲದ್ದರಿಂದ ಹಿಂತಿರುಗಿ ಮನೆಗೆ ಬಂದಿದ್ದು, ಕಷ್ಟಪಟ್ಟು ಬೆಳೆಸಿದ ಬೆಳೆ ಹಾಳಾಗಿದೆ ಎಂದು ರೈತ ತಮ್ಮ ನೋವು ತೋಡಿ ಕೊಂಡಿದ್ದಾರೆ.

 ಮುಂದುವರೆಗೆ ಬೆಳೆಹಾನಿ ಸಮೀಕ್ಷೆ

ಮುಂದುವರೆಗೆ ಬೆಳೆಹಾನಿ ಸಮೀಕ್ಷೆ

ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಳೆಯಿಂದಾಗಿರುವ ಬೆಳೆ ಹಾನಿ ಸಮೀಕ್ಷೆ ನಡೆಸಿದ್ದಾರೆ. 150 ಹೆಕ್ಟೇರ್‌ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಮತ್ತೆ ಸಮೀಕ್ಷೆ ಮುಂದುವರಿದಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಮಹಮ್ಮದ್‌ ಅಲಿ ಹೇಳಿದರು.

English summary
Vegetable prices continue to soar in Raichur district as damage to crops due to heavy rainfall in last few days,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X