ರಾಯಚೂರು-ಯಾದಗಿರಿ ವಿಶೇಷ ರೈಲುಗಳ ಸೇವೆ: ರೈಲ್ವೆಗೆ ಶೇ.49.76 ಹೆಚ್ಚುವರಿ ಆದಾಯ

ರಾಯಚೂರು, ಮಾರ್ಚ್‌ 11: ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ವ್ಯಾಪ್ತಿಯಲ್ಲಿ ಸಂಪರ್ಕ ಜಾಲ ಹೊಂದಿರುವ ದಕ್ಷಿಣ ಮಧ್ಯ ರೈಲ್ವೆ ವಲಯವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪ್ರಯಾಣಿಕರ ಮುಂಗಡ ಟಿಕೆಟ್‌ ಮಾರಾಟದಿಂದ ಭರ್ಜರಿ ಆದಾಯ ಗಳಿಸುವ ಮೂಲಕ ಗಮನಸೆಳೆದಿದೆ.

ದಕ್ಷಿಣ ಮಧ್ಯ ರೈಲ್ವೆ ವಲಯದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಾರ್ಚ್ 4, 2023ರ ವರೆಗೆ ಒಟ್ಟು 3,734.09 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಗೆ 2,493.31 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಕಳೆದ ಅವಧಿಗಿಂತ ಈ ಬಾರಿ 1,240.78 ಕೋಟಿ ರೂಪಾಯ ಹೆಚ್ಚಿಗೆ ಗಳಿಸುವ ಮೂಲಕ ಶೇಕಡಾ 49.76ರಷ್ಟು ಆದಾಯ ಹೆಚ್ಚುವರಿಯಾಗಿ ಲಭ್ಯವಾಗಿದೆ.

The South Central Railway Sector Has Earned 49.76% Surplus Revenue

ಸಿಕಂದ್ರಾಬಾದ್‌ ಕೇಂದ್ರ ಸ್ಥಾನ ಹೊಂದಿರುವ ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ ಪ್ರಸಕ್ತ ಆರ್ಥಿಕ ವರ್ಷ ಅಪಾರ ಸಂಖ್ಯೆಯಲ್ಲಿ ಪ್ರಯಾಣಿಕರು ರೈಲುಗಳ ಮೂಲಕ ಸಂಚರಿಸಿರುವುದು ಹೆಚ್ಚುವರಿ ಆದಾಯ ತಂದುಕೊಟ್ಟಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆ ವ್ಯಾಪ್ತಿಯಲ್ಲಿ ವಿಶೇಷ ರೈಲುಗಳ ಸೇವೆಯೂ ಆದಾಯ ಹೆಚ್ಚಳಕ್ಕೆ ನೆರವಾಗಿದೆ.

ಸಾಮಾನ್ಯ ದರ್ಜೆಯ ಟಿಕೆಟ್‌ ಮಾರಾಟದಲ್ಲಿಯೂ ರೈಲ್ವೆ ವಲಯಕ್ಕೆ ಈ ವರ್ಷ ಹೆಚ್ಚಿನ ಆದಾಯ ದೊರಕಿದೆ. ಪ್ರಯಾಣಿಕರ ರೈಲುಗಳಿಗೆ ಸಾಮಾನ್ಯ ದರ್ಜೆಯ ಬೋಗಿಗಳ ಅಳವಡಿಕೆ ಪ್ರಮಾಣ ತಗ್ಗಿಸಿದ್ದರೂ ಪ್ರಯಾಣಿಕರ ಸಂಚಾರದಲ್ಲಿ ಯಾವುದೇ ರೀತಿಯ ಇಳಿಕೆಯಾಗಿಲ್ಲ ಎನ್ನುವುದು ಗಮನಾರ್ಹವಾಗಿದೆ.

The South Central Railway Sector Has Earned 49.76% Surplus Revenue

ಕಳೆದ ಬಾರಿ 233.40 ಕೋಟಿ ರೂಪಾಯಿ ಹಾಗೂ ಪ್ರಸಕ್ತ ವರ್ಷ ಮಾರ್ಚ್.4 ರವರೆಗೆ ಸಾಮಾನ್ಯ ದರ್ಜೆಯ ಬೋಗಿಗಳ ಪ್ರಯಾಣದಿಂದ 1,199.57 ಕೋಟಿ ರೂಪಾಯಿ ಆದಾಯ ಬಂದಿದೆ. ವಲಯ ವ್ಯಾಪ್ತಿಯ ಪ್ರಮುಖ ಮಹಾನಗರಗಳಿಂದ ನಾನಾ ಪ್ರಮುಖ ಪ್ರವಾಸಿ ಸ್ಥಳಗಳು ಹಾಗೂ ಇತರ ನಗರ, ಪಟ್ಟಣಗಳಿಗೆ ಹಬ್ಬ, ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ವಿಶೇಷ ಹಾಗೂ ಹೆಚ್ಚುವರಿ ರೈಲುಗಳನ್ನು ಓಡಿಸಿದ್ದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿರುವ ಜೊತೆಗೆ ಆದಾಯ ಸಂಗ್ರಹದಲ್ಲೂ ಭಾರೀ ಹೆಚ್ಚಳ ಕಂಡಿದೆ.y

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+