• search
  • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಯಚೂರಿನ ಶಕ್ತಿನಗರದಲ್ಲಿ ಎರಡು ಥರ್ಮಲ್ ಘಟಕಗಳು ಸ್ಥಗಿತ

|

ರಾಯಚೂರು, ನವೆಂಬರ್ 9: ದೇಶದಲ್ಲಿರುವ ನೂರಕ್ಕೂ ಹೆಚ್ಚು ಶಾಖೋತ್ಪನ್ನ ಘಟಕಗಳು ಕಲ್ಲಿದ್ದಲು ಕೊರತೆ ಅನುಭವಿಸುತ್ತಿವೆ. ಹಾಗಾಗಿ ಕೆಲ ಘಟಕಗಳನ್ನು ಮುಚ್ಚಲಾಗಿದೆ. ಇದೀಗ ರಾಯಚೂರಿನ ಎರಡು ಥರ್ಮಲ್ ಘಟಕಗಳನ್ನು ಮುಚ್ಚಲಾಗಿದೆ.

ಕೇಂದ್ರ ಸರ್ಕಾರಕ್ಕೆ ಕಲ್ಲಿದ್ದಲನ್ನು ಪೂರೈಸುವಂತೆ ಮನವಿ ಮಾಡಲಾಗಿದೆ ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಏರುಮುಖವಾಗುತ್ತಿದೆ ಆದರೆ ತಾಂತ್ರಿಕ ಸಮಸ್ಯೆ ಉಷ್ಣ ವಿದ್ಯುತ್ ಸ್ಥಾವರಗಳನ್ನು ಕಾಡತೊಡಗಿದೆ.ತಾಂತ್ರಿಕ ದೋಷದಿಂದ ಶಕ್ತಿನಗರ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಗಳಲ್ಲಿ ಒಟ್ಟು ಎರಡು ಘಟಕಗಳು ಗುರುವಾರ ಸ್ಥಗಿತಗೊಂಡಿವೆ.

ರಾಯಚೂರು : ಕಲ್ಲಿದ್ದಲು ಕೊರತೆ, ವಿದ್ಯುತ್ ಉತ್ಪಾದನೆ ಸ್ಥಗಿತ?

ಆರ್‌ಟಿಪಿಎಸ್ ನಾಲ್ಕನೇ ಘಟಕಗಳಲ್ಲಿ ಕಂಡುಬಂದ ತಾಂತ್ರಿಕ ಸಮಸ್ಯೆಯಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ವಿದ್ಯುತ್ ಕೇಂದ್ರದ ಐದನೇ ಘಟಕ ಕಳೆದ ಕೆಲ ದಿನಗಳಿಂದ ದುರಸ್ತಿಯಲ್ಲಿದೆ. ಕಲ್ಲಿದ್ದಲು ಸಮಸ್ಯೆಯೂ ಮುಂದುವರೆದಿರುವುದರಿಂದ ಇನ್ನುಳಿದ ಆರು ಘಟಕಗಳಲ್ಲಿ ಕೇವಲ 900 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ವೈಟಿಪಿಎಸ್ ನಲ್ಲಿ ಎರಡು ಘಟಕಗಳಿದ್ದರೂ ವಿದ್ಯುತ್ ಸಾಗಣೆ ಮಾರ್ಗದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ.

ರಾಯಚೂರಿನಲ್ಲಿ ವಿದ್ಯುತ್ ಹೊಸ ದಾಖಲೆ

ರಾಯಚೂರಿನಲ್ಲಿ ವಿದ್ಯುತ್ ಹೊಸ ದಾಖಲೆ

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೊಸ ದಾಖಲೆ ಮಟ್ಟವನ್ನು ತಲುಪಿದೆ. ಈವರೆಗೆ ಬೇಡಿಕೆ ಪ್ರಮಾಣ 10 ಸಾವಿರ ಮೆಗಾ ವ್ಯಾಟ್ ಗಡಿ ದಾಟಿತ್ತು. ಆದರೆ ನ.6ರಂದು ವಿದ್ಯುತ್ ಬೇಡಿಕೆ 11,052 ಮೆಗಾ ವ್ಯಾಟ್ ತಲುಪಿರುವುದು ಈವರೆಗಿನ ದಾಖಲೆಯಾಗಿದೆ. ಈಗಾಗಲೇ ಕಲ್ಲಿದ್ದಲು ಕೊರತೆಯಿಂದ ಬಳಲುತ್ತಿರುವ ಮುಚ್ಚುವ ಹಂತದಲ್ಲಿರುವ ಶಾಖೋತ್ಪನ್ನ ಘಟಕಗಳಿಗೆ ಇದು ದೊಡ್ಡ ಹೊಡೆತವೆಂದೇ ಹೇಳಬಹುದು. ಅದರಲ್ಲೂ ಅಕ್ಟೋಬರ್ ಅಂತ್ಯ ನವೆಂಬರ್ ಆರಂಭದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.

ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ 10,888 ಮೆಗಾ ವ್ಯಾಟ್ ಬೇಡಿಕಯೇ ಅತ್ಯಂತ ಗರಿಷ್ಠ ಮಟ್ಟದ್ದಾಗಿತ್ತು. ಈ ಸಾಲಿನಲ್ಲಿ ಚಳಿಗಾಲದಲ್ಲಿ ಹಗಲಿನಲ್ಲೇ ಬೇಡಿಕೆ 10 ಸಾವಿರ ಮೆಗಾ ವ್ಯಾಟ್ ಗಡಿ ದಾಟುತ್ತಿರುವುದು ಕೆಪಿಸಿಗೆ ತಲೆ ನೋವಾಗಿ ಪರಿಣಮಿಸಿದೆ.

ಶಾಖೋತ್ಪನ್ನ ಕೇಂದ್ರಗಳಿಗೆ ಕಲ್ಲಿದ್ದಿಲು ಪ್ರಮಾಣ ಹೆಚ್ಚಿಸಲು ಸರ್ಕಾರ ಯತ್ನ

ಶಾಖೋತ್ಪನ್ನ ಕೇಂದ್ರಗಳಿಗೆ ಕಲ್ಲಿದ್ದಿಲು ಪ್ರಮಾಣ ಹೆಚ್ಚಿಸಲು ಸರ್ಕಾರ ಯತ್ನ

ರಾಜ್ಯದಲ್ಲಿರುವ ಶಾಖೋತ್ಪನ್ನ ಕೇಂದ್ರಗಳಿಗೆ ಕಲ್ಲಿದ್ದಲು ಪ್ರಮಾಣವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಆಲೋಚಿಸುತ್ತಿವೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಉಷ್ಣತಾ ಪ್ರಮಾಣ ಹೆಚ್ಚುತ್ತಿದ್ದು, ವಿದ್ಯುತ್ ಬೇಡಿಕೆ ಪ್ರಮಾಣದಲ್ಲಿ ಏರಿಕೆಯಾಗಿದೆಯಾದರೂ ಉತ್ಪಾದನೆ ಹಾಗೂ ಪೂರೈಕೆ ಪ್ರಮಾಣದಲ್ಲಿ ಸುಧಾರಣೆ ಗೋಚರಿಸುತ್ತಿದೆ.

ಆರ್‌ಟಿಪಿಎಸ್, ಬಿಟಿಪಿಎಸ್ ಸೇರಿದಂತೆ ರಾಜ್ಯ ಘಟಕಗಳಿಂದ 4,214 ರಿಂದ 6,189 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದ್ದು, ಅಸಂಪ್ರದಾಯಿಕ ವಿದ್ಯುತ್ ಮೂಲಗಳಿಂದ 3,366 ಮೆಗಾ ವ್ಯಾಟ್ ವರೆಗೂ ಹಗಲು ಹೊತ್ತಿನಲ್ಲಿ ಉತ್ಪಾದನೆಯಾಗಿದೆ. ಕೇಂದ್ರ ಗ್ರಿಡ್‌ನಿಂದ ಹಗಲು ಹೊತ್ತು 1560 ಹಾಗೂ ಸಂಜೆ ಸಮಯದಲ್ಲಿ 2119 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡಲಾಗಿದೆ.

ಅಕ್ಟೋಬರ್‌ ಟು ಡಿಸೆಂಬರ್ ಹೆಚ್ಚುವರಿ ವಿದ್ಯುತ್ ಬಿಲ್ ಏಕೆ ಕಟ್ಟಬೇಕು?

ಕಲ್ಲಿದ್ದಲು ಸಾಗಣೆಗೆ ಕಾರ್ಯವ್ಯೂಹ

ಕಲ್ಲಿದ್ದಲು ಸಾಗಣೆಗೆ ಕಾರ್ಯವ್ಯೂಹ

ಕಲ್ಲಿದ್ದಲು ಕೊರತೆಯಿಂದ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕಲ್ಲಿದ್ದಲನ್ನು ಹೊತ್ತು ಕೇಂದ್ರಗಳಿಗೆ ತಲುಪುವ ರೈಲುಗಳ ಓಡಾಟದ ವೇಗ ಹೆಚ್ಚಿಸಲು ಕೆಪಿಸಿ ಮುಂದಾಗಿದೆ.

ರಾಜ್ಯದಲ್ಲಿ ಹೊಸ ದಾಖಲೆ ತಲುಪಿದ ವಿದ್ಯುತ್ ಬೇಡಿಕೆ

ಸಮಯದ ಉಳಿತಾಯ

ಸಮಯದ ಉಳಿತಾಯ

ರಾಜ್ಯದ ಆರ್‌ಪಿಪಿಎಸ್ ಹಾಗೂ ಬಿಟಿಪಿಎಸ್ ವಿದ್ಯುತ್ ಕೇಂದ್ರಗಳಿಗೆ ಸಿಂಗರೇಣಿ ಮಹಾನದಿ ಕೋಲ್ ಫೀಲ್ಡ್ ಮತ್ತು ವೆಸ್ಟರ್ನ್ ಕೋಲ್ ಫೀಲ್ಡ್ ಗಳಿಂದ ದಿನವೂ ರೈಲುಗಳ ಮೂಲಕ ಕಲ್ಲಿದ್ದಿಲು ರವಾನೆಯಾಗುತ್ತದೆ. ಶಾಖೋತ್ಪನ್ನ ವಿದ್ಯುತ್ ಕೇಂದದ್ರವನ್ನು ತಲುಪಿದ ಕಲ್ಲಿದ್ದಲನ್ನು ರೈಲಿನಿಂದ ಇಳಿಸಿ ಸಂಗ್ರಹಣೆ ಯಾರ್ಡ್ ಗೆ ಸಾಗಿಸಲು ಎಂಟು ತಾಸು ಬೇಕಾಗುತ್ತದೆ. ಈ ಸಮಯವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಕೆಪಿಸಿ ಹೆಜ್ಜೆ ಇಟ್ಟಿದೆ.

ದೇಶಾದ್ಯಂತ ಕಲ್ಲಿದ್ದಲು ಕೊರತೆ: ಥರ್ಮಲ್ ಘಟಕಗಳು ಸ್ತಬ್ಧ ಸಾಧ್ಯತೆ

English summary
RTPS and YTPS unit of Raichur Thermal Power Plant has been shutdown of Thursday following technical error found in the same after operational since consecutive 252 days. Another four have been shutdown out of eight due to shortage of coal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X