Election Icons : ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಗೆ ಚುನಾವಣಾ ರಾಯಭಾರಿಗಳ ನೇಮಕ, ಇಲ್ಲಿದೆ ವಿವರ

ಚುನಾವಣಾ ಆಯೋಗವು ಜಿಲ್ಲಾವಾರು ಚುನಾವಣಾ ರಾಯಭಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಹಾಗಾದರೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಗೆ ಚುನಾವಣಾ ರಾಯಭಾರಿಗಳಾಗಿ ಆಯ್ಕೆಯಾದವರು ಯಾರು ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ರಾಯಚೂರು, ಮಾರ್ಚ್‌, 09: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಈಗಾಗಲೇ ಚುನಾವಣಾ ಆಯೋಗವು ಜಿಲ್ಲಾವಾರು ಚುನಾವಣಾ ರಾಯಭಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ರಾಯಚೂರು ಚುನಾವಣೆ ರಾಯಭಾರಿಯಾಗಿ ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿಯವರನ್ನು ಆಯ್ಕೆ ಮಾಡಿದರೆ, ಕೊಪ್ಪಳ ಜಿಲ್ಲೆಗೆ ಗಂಗಾವತಿ ಪ್ರಾಣೇಶ್‌ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.

ಬಿಸಿಲಿನ ನಾಡು ರಾಯಚೂರು ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ತೆಲುಗು ಸ್ಟಾರ್‌ ನಿರ್ದೇಶಕ ರಾಜಮೌಯನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ ಹಲವು ಜಿಲ್ಲೆಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಆಯೋಗ ಆದೇಶ ಹೊರಡಿಸಿದೆ. ಮತದಾರರಲ್ಲಿ ಜಾಗೃತಿ ಮೂಡಿಸುವುದು ಈ ರಾಯಭಾರಿಗಳ ಆಯ್ಕೆಯ ಉದ್ದೇಶ ಆಗಿದೆ.

S S Rajamouli and Gangavati Pranesh as District icons of Election of Raichur & Koppal districts

ಚುನಾವಣಾ ರಾಯಭಾರಿಗಳ ನೇಮಕ

ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಂಗಳೂರು ನಗರ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಹೀಗೆ ರಾಯಭಾರಿಗಳನ್ನು ನೇಮಕ ಮಾಡಲಾಗಿದೆ. 10 ಜಿಲ್ಲೆಗಳ ಮನವಿ ಪುರಸ್ಕರಿಸಿದ ಚುನಾವಣಾ ಆಯೋಗ ವಿವಿಧ ಕ್ಷೇತ್ರಗಳ ಸಾಧಕರನ್ನು ಚುನಾವಣಾ ರಾಯಭಾರಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಅಭಿಮಾನಿಗಳ ಕ್ರೇಜ್‌ ಹೆಚ್ಚಿದೆ. ಆದ್ದರಿಂದ ಜಿಲ್ಲಾಡಳಿತಕ್ಕೆ ರಾಯಭಾರಿಯ ಆಯ್ಕೆ ಕುರಿತು ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜಮೌಳಿ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.

ಇನ್ನು ಮಂಡ್ಯಕ್ಕೆ ಕನ್ನಡ ನಟ ನೀನಾಸಂ ಸತೀಶ್‌, ಕೊಪ್ಪಳಕ್ಕೆ ಗಂಗಾವತಿ ಪ್ರಾಣೇಶ್‌, ವಿಜಯಪುರಕ್ಕೆ ಸೈಕ್ಲಿಂಗ್‌ ಚಾಂಪಿಯನ್‌ ಸಹನಾ ಕೂಡಿಗನೂರು, ಬಳ್ಳಾರಿಗೆ ಗೊಂಬೆಯಾಟ ಕಲಾವಿಧ ಬೆಳಗಲ್ಲು ವೀರಣ್ಣ, ಕೊಡಗಿಗೆ ಸಾಮಾಜಿಕ ಕಾರ್ಯಕರ್ತ ಕೆ.ಯು ಮುತ್ತಪ್ಪ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

S S Rajamouli and Gangavati Pranesh as District icons of Election of Raichur & Koppal districts

ಹಾಗೆಯೇ ಬೆಂಗಳೂರಿನ ಮೂರು ವಿಭಾಗಗಳಿಗೆ ಬ್ಯಾಡ್ಮಿಂಟನ್‌ ಚಾಂಪಿಯನ್‌ ಅನೂಪ್‌ ಶ್ರೀಧರ್‌, ಕಬ್ಬಡಿ ಆಟಗಾರ್ತಿ ತೇಜಸ್ವಿನಿ ಬಾಯಿ, ಪ್ಯಾರಾ ಸ್ವಿಮ್ಮರ್‌ ಶರತ್‌ ಗಾಯಕ್ವಾಡ್‌ ಜಾನಪದ ಗಾಯಕ ಮೋಹನ್‌ ಕುಮಾರ್‌.ಎನ್‌ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ.

ಹೀಗೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾವಾರು ಚುನಾವಣಾ ರಾಯಭಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+