ಪ್ರೀತಿ ಬಲೆಗೆ ಬಿದ್ದ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನ: ರೋಚಕ ಸತ್ಯ ಬಯಲಾಗಿದ್ದೇಗೆ?
ಮಾಡಿದ ಪ್ರೀತಿ ಫಲಿಸದಿದ್ದರೆ ಕೊನೆಗೆ ಆತ್ಮಹತ್ಯೆ ಮೊರೆಹೋದ ಉದಾಹರಣೆಗಳಿವೆ. ಹಾಗೆಯೇ ಇದೀಗ ವಿಚಿತ್ರ ಎಂಬಂತೆ ಪ್ರೀತಿಯ ಬಲೆಗೆ ಬಿದ್ದ ಒಂದೇ ಊರಿನ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ನಡೆದಿದೆ. ಹಾಗಾದ್ರೆ, ಇದು ಬೆಳಕಿಗೆ ಬಂದಿದ್ದು ಹೇಗೆ ಎನ್ನುವ ರೋಚಕ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಪ್ರೀತಿಯ ಬಲೆಯಲ್ಲಿ ಬಿದ್ದ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಒರ್ವ ಯುವತಿ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಬಚಾವ್ ಆಗಿದ್ದಾರೆ. ಈ ಘಟನೆ ನಡೆದಿದ್ದು ಹೇಗೆ, ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ತಿಳಿಯಿರಿ.

ಸಾಮಾನ್ಯವಾಗಿ ಆತ್ಮಹತ್ಯೆ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಜಾಲಾಡುತ್ತಾರೆ. ಇದೀಗ ನಡೆದಿದ್ದು ಅದೇ ಆಗಿದೆ. ಇದೀಗ ಒಂದೇ ಊರಿನ ಮೂವರು ಯುವತಿಯರು ಆತ್ಮಹತ್ಯಗೆ ಯತ್ನಿಸಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಕ್ವಾರಿಯರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಈ ವಿಚಾರ ತಿಳಿದ ಪೋಷಕರು ಧಂಗಾಗಿದ್ದಾರೆ. ಇನ್ನೂ ಈ ಬಗ್ಗೆ ಪೊಲೀಸರ ತನಿಖೆಯಲ್ಲಿ ಹೊರಬಿದ್ದ ವಿಚಾರ ಪೋಷಕರನ್ನು ಮತ್ತಷ್ಟು ಕಂಗಡೆಸಿಸಿದೆ.
ಆತ್ಮಹತ್ಯೆಗೆ ಯತ್ನಿಸಿದ ಮೂವರು ಯುವತಿಯರ ಪೈಕಿ ರೇಣುಕಾ (18) ಎಂಬುವರು ಮೃತಪಟ್ಟಿದ್ದರೆ, ತಿಮ್ಮಕ್ಕ ಮತ್ತು ಮತ್ತೊಬ್ಬ ಅಪ್ರಾಪ್ತೆ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಇವರು ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ ಎಂಬ ಮಾಹಿತಿ ಹೊರಬಿದ್ದಿರಲಿಲ್ಲ. ಆದರೆ, ಇದೀಗ ಈ ಪ್ರಕರಣ ಪೊಲೀಸ್ ತನಿಖೆ ವೇಳೆ ದೊಡ್ಡ ತಿರುವು ಪಡೆದಿದೆ.
ದೇವದುರ್ಗ ಪೊಲೀಸರ ತನಿಖೆ ವೇಳೆ ಈ ಯುವತಿಯರ ಲವ್ ಕಹಾನಿಗಳ ವಿಚಾರ ಬಟಾಬಯಲಾಗಿದೆ. ಈ ಪ್ರೇಮ್ ಕಹಾನಿ ಪ್ರಕರಣವೇ ಯುವತಿಯರಿಗೆ ದೊಡ್ಡ ಬಲೆಯಾದಂತಾಗಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ಮೂವರ ಹಿಂದೆ ಒಂದೊಂದು ಲವ್ ಕಹಾನಿ ಇತ್ತು. ಮೃತ ರೇಣುಕಾ ಹಾಗೂ ಆತ್ಮಹತ್ಯೆಯಿಂದ ಬಚಾವ್ ಆದ ತಿಮ್ಮಕ್ಕ ಹಾಗೂ ಅಪ್ರಾಪ್ತೆ ಮೂವರೂ ಸಂಬಂಧಿಕರು.
ಈ ಮೂವರು ಯುವತಿಯರು ಓಬ್ಬೊಬ್ಬ ಯುವಕನ ಜೊತೆ ಪ್ರೀತಿಯ ಪ್ರಣಯದಲ್ಲಿದ್ದರು. ಈ ನಡುವೆಯೇ
ರೇಣುಕಾಗೆ ಬೇರೋಬ್ಬ ಯುವಕನ ಜೊತೆ ನಿಶ್ಚಿತಾರ್ಥ ನಿಗದಿ ಆಗಿತ್ತು. ನಿಶ್ಚಿತಾರ್ಥಕ್ಕೆ ಇನ್ನೊಂದು ವಾರ ಅಷ್ಟೇ ಬಾಕಿ ಇತ್ತು. ಆದ್ದರಿಂದ ರೇಣುಕಾ ಹೇಗೆ ತಪ್ಪಿಸಿಕೊಳ್ಳುವುದು ಎನ್ನುವ ಯೋಚನೆಯಲ್ಲಿದ್ದಳು. ಈ ಬಗ್ಗೆ ಮನೆಯವರು ಪ್ರಶ್ನೆ ಮಾಡಿದರೆ, ಮೂವರ ಲವ್ ಕಹಾನಿ ವಿಚಾರವೂ ಬಯಲಾಗತ್ತದೆ ಎನ್ನುವ ಭಯದಲ್ಲಿ ಅವರಿದ್ದರು.
ಆದ್ದರಿಂದ ಕಳೆದ ವಾರವೇ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ತೀರ್ಮನ ಮಾಡಿದ್ದರು. ಈ ನಡುವೆಯೇ ಭಾನುವಾರ ತಿಮ್ಮಕ್ಕನ ಹೊಲಕ್ಕೆ ತಿಮ್ಮಕ್ಕ, ರೇಣುಕಾ ಹಾಗೂ ಆಪ್ರಾಪ್ತೆ ಕೆಲಸಕ್ಕೆ ಹೋಗಿದ್ದರು. ಆ ವೇಳೆ ತಿಮ್ಮಕ್ಕ ಕ್ರಿಮಿನಾಶಕ ಕುಡಿದಿದ್ದು, ಬಳಿಕ ರೇಣುಕಾ ಮತ್ತು ಅಪ್ರಾಪ್ತೆ ಸಹ ಅದೇ ಕ್ರಿಮಿನಾಶಕ ಸೇವಿಸಿದ್ದಾರೆ. ಆಗ ತಿಮ್ಮಕ್ಕ ಒದ್ದಾಡಲು ಶುರು ಮಾಡಿದ್ದಾರೆ. ಈ ವೇಳೆ ತಿಮ್ಮಕ್ಕ ಮೃತಪಟ್ಟಿದ್ದಾಳೆ ಎಂದು ಭಾವಿಸಿದ ರೇಣುಕಾ ಹಾಗೂ ಅಪ್ರಾಪ್ತೆ ಆತಂಕಗೊಂಡು ತಿಮ್ಮಕ್ಕನ ಹೊಲದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಆಗ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಅಪ್ರಾಪ್ತೆಯನ್ನು ಬದುಕಿಸಿದ್ದಾರೆ. ಆದರೆ, ರೇಣುಕಾ ಸಾವನ್ನಪ್ಪಿದ್ದು, ಮಗಳ ಸಾವಿನ ಬಗ್ಗೆ ಕುಟುಂಬಸ್ಥರು, ತಿಮ್ಮಕ್ಕ ಮತ್ತು ಅಪ್ರಾಪ್ತೆ ಮೇಲೆ ಅನುಮಾನ ಇದೆ ಎಂದು ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಸದ್ಯ ದೇವದುರ್ಗ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇತ್ತ ವಿಷ ಸೇವನೆ ಮಡಿದ್ದ ತಿಮ್ಮಕ್ಕಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪ್ರಾಪ್ತೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಹೆತ್ತವರು ತಮ್ಮ ಮಕ್ಕಳು ಸರಿಯಾದ ದಾರಿಯಲ್ಲೇ ನಡೆಯುತ್ತಿರುತ್ತಾರೆ ಎನ್ನುವ ಗರ್ವದಲ್ಲಿರುತ್ತಾರೆ. ಆದರೆ, ಯಾರೋ ಕೆಲ ಯುವತಿಯರು ಮಾಡುವ ಇಂತಹ ಎಡವಟ್ಟುಗಳಿಂದ ಇನ್ನಿತರ ಪೋಷಕರು ಸಹ ಭಯದಲ್ಲೇ ಜೀವನ ಸಾಗಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಮಕ್ಕಳು ಮಾಡುವ ತಪ್ಪಿನಿಂದ ಪೋಷಕರು ತಲೆ ತಗ್ಗಿಸುವಂತಹ ವಾತಾವರಣ ನಿರ್ಮಾಣ ಆಗುತ್ತಲಿವೆ. ಅದರಲ್ಲೂ ಚಿಕ್ಕವಯಸ್ಸಿನಲ್ಲೇ ಪ್ರೀತಿ ಬಲೆಗೆ ಬಿದ್ದವರೇ ಹೆಚ್ಚಾಗಿ ಇಂತಹ ಹಾದಿ ಹಿಡಿದಿರುವ ಉದಾಹರಣೆಗಳಿವೆ.












Click it and Unblock the Notifications