ಭತ್ತದ ಕಣಜ ರಾಯಚೂರಿನಲ್ಲಿ ಮೋದಿ ಹವಾ: ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ನಂ.1 ಮಾಡುತ್ತೇವೆಂದು ಭರವಸೆ
ಸಿಂಧನೂರು ಮೇ 2: ಭತ್ತದ ಕಣಜ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕು ಇಂದು ಕೇಸರಿ ಮಯವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದರು.
ಈ ವೇಳೆ ಅವರಿಗೆ ಶ್ರೀಕೃಷ್ಣನ ಮೂರ್ತಿಯನ್ನು ನೀಡಿ ಗೌರವಿಸಲಾಯಿತು. ಸಭೆಯನ್ನುದ್ದೇಶಿಸಿ ಕನ್ನಡದಲ್ಲಿ ಮಾತು ಆರಮಭಿಸಿದ ನರೇಂದ್ರ ಮೋದಿ, 'ಭತ್ತದ ಕಣಜ ರಾಯಚೂರು ಜಿಲ್ಲೆಯ ನನ್ನ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು. ಜಗತ್ ಜ್ಯೋತಿ ಬಸವೇಶ್ವರ ಹಾಗೂ ರಾಘವೇಂದ್ರ ಸ್ವಾಮಿಜಿಗೆ ನನ್ನ ಪ್ರಣಾಮಗಳು' ಎಂದು ಹೇಳಿದರು. ಈ ವೇಳೆ 'ಬಿಜೆಪಿ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ನಂ. 1 ಮಾಡುವ ಸಂಕಲ್ಪವನ್ನು ಹೊಂದಿದೆ' ಎಂದು ಮೋದಿ ಭರವಸೆ ನೀಡಿದರು.

'ಇಷ್ಟೊಂದು ಕಷ್ಟವಿದ್ದರೂ, ಮಳೆ ಬಂದರೂ ನೀವು ತೋರಿಸುತ್ತಿರುವ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ನಿಮ್ಮಲ್ಲಿ ಉತ್ಸಾಹ ಕಾಣಿಸುತ್ತಿದೆ. ನಿಮ್ಮ ಉತ್ಸಾಹ ನೋಡಿ ನನಗೆ ಖುಷಿ ಆಯ್ತು. ಕರ್ನಾಟಕದಲ್ಲಿ ಬಿಜೆಪಿಯ ಪೂರ್ಣ ಸರ್ಕಾರ ಬರುವ ಮುನ್ಸೂಚನೆ ನೀವೆಲ್ಲಾ ನೀಡುತ್ತಿರುವಿರಿ' ಎಂದು ಹೇಳಿ ನೆರೆದ ಜನರನ್ನು ಸೆಳೆದರು.
'ಬಿಜೆಪಿಯದ್ದು ಒಂದು ಸಂಕಲ್ಪ ಇದೆ. ಅದೇನೆಂದರೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರ, ಕರ್ನಾಟಕವನ್ನು ನಂಬರ್ ಒನ್ ಮಾಡಲು ಬಯಸುತ್ತದೆ. ಹೀಗಾಗಿ ಈ ಒಂದು ಉದ್ದೇಶ ಗುರಿಯನ್ನು ಇಟ್ಟುಕೊಂಡು ಬಿಜೆಪಿ ಮತಯಾಚನೆ ಮಾಡುತ್ತಿದೆ. ಆದರೆ ಕಾಂಗ್ರೆಸ್ ಯಾಕೆ ಓಟ್ ಕೇಳುತ್ತಿದೆ. ಯಾಕೆ ಅಂದರೆ ತಾವು ನಿವೃತ್ತಿ ಆಗಲು ಕೊನೆಯ ಚುನಾವಣೆಗಾಗಿ ಮತ ಹಾಕಿ ಎಂದು ಕೇಳುತ್ತಿದೆ. ಜೆಡಿಎಸ್ ಪರಿವಾರ ರಾಜನೀತಿ ಉಳಿಸಲು ಮತ ಕೇಳುತ್ತಿದೆ. ಇದು ಅವರಿಗೂ ನಮಗೂ ಇರುವ ವ್ಯತ್ಯಾಸ. ಹೀಗಾಗಿ ಕರ್ನಾಟಕದಲ್ಲಿ ಒಂದೇ ಮಾತು ಕೇಳಿ ಬರುತ್ತಿದೆ. ಅದೇನೆಂದರೆ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ' ಎಂದು ನೆರೆದ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಹುರಿದುಂಬಿಸಿದರು.

'ಬಿಜೆಪಿ ಈಗಾಗಲೇ ಪ್ರಜಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅನ್ನ, ಅಭಯ, ಅಭಿವೃದ್ಧಿ, ಆದಾಯ, ಅಕ್ಷರ ಹಾಗೂ ಆರೋಗ್ಯ ಎಲ್ಲಾ ವಿಷಯದ ಬಗ್ಗೆ ಗಮನಿಸಲಾಗಿದೆ. ಕರ್ನಾಟಕದ ಗೌರವ ರಕ್ಷಣೆಗಾಗಿ ಕಪ್ಪು ಚುಕ್ಕೆ ಬಾರದಂತೆ ಬಿಜೆಪಿ ನೋಡಿಕೊಳ್ಳುತ್ತದೆ. ಕಾಂಗ್ರೆಸ್, ಜೆಡಿಎಸ್ ತುಷ್ಠೀಕರಣ ರಾಜನೀತಿಯನ್ನು ದೂರ ಮಾಡುತ್ತದೆ. ಕಲ್ಯಾಣ ಕರ್ನಾಟಕ ವಿಕಾಸದ ಬಗ್ಗೆ ನೆನಪಾದರೆ ಯಡಿಯೂರಪ್ಪ, ಬೊಮ್ಮಾಯಿ ಬಗ್ಗೆ ನೆನೆಪಿಸಿಕೊಳ್ಳಿ. ಬಿಜೆಪಿ ಹೊಸ ಶುರುವಾದವನ್ನು ಆರಂಭಿಸಿದೆ' ಎಂದರು.
ನೀವೆಲ್ಲಾ ಉನ್ನತ ರೈಲು ಸಂಚಾರದ ಬಗ್ಗೆ ಬೇಡಿಕೆ ಇಟ್ಟಿದ್ದೀರಿ. ಈ ಆಸೆಯನ್ನು ಬಿಜೆಪಿ ಸರ್ಕಾರ ಪೂರ್ಣಗೊಳಿಸುತ್ತಿದೆ. ಈ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಎಸ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್, ಜೆಡಿಎಸ್ ರಾಜ್ಯಕ್ಕೆ ದೊಡ್ಡ ದ್ರೋಹ ಮಾಡಿದೆ. ಕಾಂಗ್ರೆಸ್ ಪ್ರಧಾನ ಮಂತ್ರಿ ಹೇಳಿದ ಮಾತಿದು- ದೆಹಲಿ ಯಿಂದ ಒಂದು ರೂಪಾಯಿ ಕಳೆಸುತ್ತಾರೆ. ಅದರಲ್ಲಿ 80 ಪೈಸೆ ಬರುವ ಮಾರ್ಗದಲ್ಲೇ ಖಾಲಿಯಾಗಿಬಿಡುತ್ತದೆ. ಉಳಿದಿದದ್ದು ಮಾತ್ರ ಜನರಿಗೆ ತಲುಪಿಸಲಾಗುತ್ತದೆ. ಇದೆಲ್ಲವನ್ನು ತೊಡೆದು ಹಾಕಲು ಬಿಜೆಪಿ ಸರ್ಕಾರ ಹುಟ್ಟಿಕೊಂಡಿದೆ. ಇದಕ್ಕೆ ತಕ್ಕಂತೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ ಎಂದರು.
ಗ್ರಾಮೀಣ ಭಾಗದ ರೈತರಿಗೆ, ಜನರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೋಸ ಮಾಡಿದೆ. ಕರ್ನಾಟಕದ ಮಹಾ ಇತಿಹಾಸಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಇದೆಲ್ಲದಕ್ಕೂ ಪರಿಹಾರ ಬಿಜೆಪಿ ಸರ್ಕಾರವಾಗಿದೆ ಎಂದು ಮೋದಿ ಹೇಳಿದರು.












Click it and Unblock the Notifications