ರಾಯಚೂರು: ರಾಹುಲ್ ಗಾಂಧಿ ಭರ್ಜರಿ ರೋಡ್ ಶೋ
Recommended Video

ರಾಯಚೂರು, ಫೆಬ್ರವರಿ 12: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕರ್ನಾಟಕ ರಾಜ್ಯ ಯಾತ್ರೆಯ 3ನೇ ದಿನ ರಾಯಚೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ವೀರಪ್ಪ ಮೋಯ್ಲಿ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರೊಂದಿಗೆ ರೋಡ್ ಶೋ ನಡೆಸಿದ ಯುವರಾಜನಿಗೆ ರಾಯಚೂರಿನ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.
In Pics : ರಾಯಚೂರಲ್ಲಿ ರಾಹುಲ್ ಗಾಂಧಿಗೆ ಅಭೂತಪೂರ್ವ ಸ್ವಾಗತ
ಜನಾಶೀರ್ವಾದ ಯಾತ್ರೆ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಯಚೂರಿನ ಗಂಜ್ ವೃತ್ತದಿಂದ , ಟಿಪ್ಪು ಸುಲ್ತಾನ್ ವೃತ್ತ, ಬಸವೇಶ್ವರ ವೃತ್ತದಲ್ಲಿ ರೋಡ್ ಶೋ ನಡೆಸಿದ್ದಾರೆ. ರೋಡ್ ಶೋನಲ್ಲಿ ಸಾವಿರಾರು ಕಾಂಗ್ರೆಸ್ ಯುವ ಕಾರ್ಯಕರ್ತರು ಭಾಗಿಯಾಗಿದ್ದರು.

ರಾಯಚೂರು ಬಳಿಕ ಕಲ್ಮಲಾ, ಗಬ್ಬೂರು ಗ್ರಾಮದಲ್ಲಿ ರೋಡ್ ಶೋ ನಡೆಸಿ ನಂತರ ದೇವದುರ್ಗದಲ್ಲಿ ಹಮ್ಮಿಕೊಂಡಿರೋ ಕಾಂಗ್ರೆಸ್ ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿಂದ ಶಹಾಪೂರ, ಜೇವರ್ಗಿ ಮಾರ್ಗವಾಗಿ ಕಲಬುರಗಿ ತಲುಪಲಿದ್ದಾರೆ.












Click it and Unblock the Notifications