ಮಸ್ಕಿ ಉಪ ಚುನಾವಣೆ; ಜನರು ತಕ್ಕಪಾಠ ಕಲಿಸುವುದು ಯಾರಿಗೆ?
ರಾಯಚೂರು, ಮಾರ್ಚ್ 18; ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣೆ ತಯಾರಿ ನಡೆಸಿವೆ. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆಯೇ? ಕಾದು ನೋಡಬೇಕು.
ಮಸ್ಕಿ ಕ್ಷೇತ್ರದ ಉಪ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ರಾಷ್ಟ್ರೀಯ ಪಕ್ಷಗಳು ತಯಾರಿಯನ್ನು ನಡೆಸುತ್ತಿವೆ. ಈಗ ಅಧಿಕೃತವಾಗಿ ದಿನಾಂಕ ಘೋಷಣೆ ಆಗಿದ್ದು, ಪ್ರಚಾರ ಕಣ ರಂಗು ಪಡೆದುಕೊಂಡಿದೆ.
ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ, ಕಾಂಗ್ರೆಸ್‌ನಿಂದ ಬಸನಗೌಡ ತುರ್ವಿಹಾಳ ಅವರು ಅಭ್ಯರ್ಥಿಯಾಗಲಿದ್ದಾರೆ. ಕಳೆದ ಚುನಾವಣೆಯಲ್ಲಿ ಇಬ್ಬರೂ ಎದುರಾಳಿಗಳಾಗಿದ್ದರು. ಉಪ ಚುನಾವಣೆಯಲ್ಲಿ ಇಬ್ಬರೂ ಸಹ ಪಕ್ಷ ಬದಲಾವಣೆ ಮಾಡಿದ್ದಾರೆ.
ಇಬ್ಬರು ನಾಯಕರು ಪಕ್ಷ ಬದಲಾಯಿಸಿದ್ದಾರೆ. ಆದರೆ, ಅವರ ಬೆಂಬಲಿಗರು ಅನೇಕರು ಇನ್ನೂ ಅಲ್ಲೇ ಉಳಿದಿದ್ದಾರೆ. ಇದರಿಂದಾಗಿ ಉಪ ಚುನಾವಣೆಯಲ್ಲಿ ಯಾರಿಗೆ ಗೆಲುವು ಎಂಬ ಚರ್ಚೆಗಳು ಜೋರಾಗಿವೆ. ಏಪ್ರಿಲ್ 17ರಂದು ಉಪ ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಇಬ್ಬರು ನಾಯಕರ ಕ್ಷೇತ್ರ ಬದಲು
ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ, ಕಾಂಗ್ರೆಸ್‌ನಿಂದ ಬಸನಗೌಡ ತುರ್ವಿಹಾಳ ಅವರು ಅಭ್ಯರ್ಥಿಯಾಗಲಿದ್ದಾರೆ. 2018ರ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ ಕಾಂಗ್ರೆಸ್‌ನಲ್ಲಿದ್ದರು. ಬಸನಗೌಡ ತುರ್ವಿಹಾಳ ಬಿಜೆಪಿಯಲ್ಲಿದ್ದರು. ಈಗ ಇಬ್ಬರು ಪಕ್ಷಗಳು ಅದಲು ಬದಲಾಗಿವೆ. ಆದ್ದರಿಂದ, ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

ಪಾಠ ಕಲಿಸುತ್ತೇವೆ ಎನ್ನುವ ಮಾತು
ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂಬ ಮಾತುಗಳು ಹಬ್ಬಿವೆ. ಇಬ್ಬರೂ ನಾಯಕರು ಪಕ್ಷವನ್ನು ಬದಲಾಯಿಸಿದರೂ ಕೆಲವು ಕಾರ್ಯಕರ್ತರು ಮೂಲ ಪಕ್ಷದಲ್ಲಿ ಉಳಿದಿದ್ದಾರೆ. ಯಾರು, ಯಾರಿಗೆ ಪಾಠ ಕಲಿಸುತ್ತಾರೆ? ಎಂದು ಕಾದು ನೋಡಬೇಕು.

ಉಪ ಚುನಾವಣೆ ಪಕ್ಷವೋ, ವ್ಯಕ್ತಿಯೋ?
ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಆದ್ಯತೆಯೋ?, ವ್ಯಕ್ತಿಗೋ? ಎಂಬುದು ತಿಳಿಯಬೇಕಿದೆ. ಪ್ರತಾಪಗೌಡ ಪಾಟೀಲ, ಬಸನಗೌಡ ತುರ್ವಿಹಾಳ ಪುನಃ ಎದುರಾಳಿಗಳಾಗಿದ್ದು, ಜನರು ಯಾರ ಬೆಂಬಲಕ್ಕೆ ನಿಲ್ಲಲಿದ್ದಾರೆ? ಎಂದು ಕಾದು ನೋಡಬೇಕಿದೆ.
Recommended Video

2018ರ ಫಲಿತಾಂಶ
2018ರ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ (ಕಾಂಗ್ರೆಸ್) 60,387, ಬಸನಗೌಡ ತುರ್ವಿಹಾಳ (ಬಿಜೆಪಿ) 60,174 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನಿಂದ ರಾಜಾಸೋಮನಾಥ ನಾಯಕ್ 11,392 ಮತಗಳನ್ನು ಪಡೆದಿದ್ದರು.












Click it and Unblock the Notifications