ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು: ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಸಿಎಂಗೆ ಪತ್ರ

|
Google Oneindia Kannada News

ರಾಯಚೂರು, ಮಾರ್ಚ್ 23: ರಾಯಚೂರು ಜಿಲ್ಲೆಯ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವ ಕುರಿತಾಗಿ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ.

ಅಕ್ರಮ ಮದ್ಯ ಮಾರಾಟ ತಡೆಗಟ್ಟಬೇಕೆಂದು ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿರುವ ಶ್ರಮಜೀವಿ ಆಶ್ರಮದ ಪ್ರಸನ್ನ ಎಂಬುವವರು, ""ರಾಯಚೂರಿನ ಮದ್ಯ ನಿಷೇಧ ಆಂದೋಲನದ ಮಹಿಳೆಯರು ಹಲವಾರು ವಾರಗಳಿಂದ ಹೋರಾಟ ನಡೆಸಿರುವುದು ತಮಗೆ ತಿಳಿದಿದೆ''.

ಅಕ್ರಮ ಮದ್ಯ ಮಾರಾಟ; ಪೊಲೀಸರಿಂದ ದಾಳಿಅಕ್ರಮ ಮದ್ಯ ಮಾರಾಟ; ಪೊಲೀಸರಿಂದ ದಾಳಿ

"ಅಕ್ರಮ ಮದ್ಯ ತಡೆಗಟ್ಟುವ ಹೋರಾಟ ನ್ಯಾಯಯುತವಾದದ್ದಾಗಿದ್ದು, ಇಷ್ಟಕ್ಕೂ ತಾವೇ ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿದ್ದಿರಿ. ಈಗ ಆಕ್ರಮ ಮದ್ಯವು ಪ್ರತಿಯೊಂದು ಹಳ್ಳಿಯ ಕಿರಾಣಿ ಅಂಗಡಿಗಳಲ್ಲಿ ರಾಜರೋಷವಾಗಿ ಮಾರಾಟವಾಗುತ್ತಿದೆ'' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Raichur: Letter To CM To Prevent Illegal Liquor Selling In Villages

ಕನ್ನಡನಾಡಿನ ನದಿಬಯಲು, ಶಾಲೆಗಳ ಆವರಣ ಅರಣ್ಯ ಪ್ರದೇಶ, ರಸ್ತೆ ಬದಿಗಳು ಎಲ್ಲವೂ ಮದ್ಯದ ಬಾಟಲಿಗಳಿಂದ ತುಂಬಿ ತುಳುಕುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಗ್ರಾಮೀಣ ಬಡ ಹೆಣ್ಣು ಮಕ್ಕಳಿಗೆ ಕುಡುಕ ಗಂಡಸರಿಂದ ಆಗುತ್ತಿರುವ ಕಿರುಕುಳ ಸಹಿಸಲಸಾಧ್ಯವಾಗಿದೆ.

Raichur: Letter To CM To Prevent Illegal Liquor Selling In Villages

Recommended Video

'ಎಲ್ಲಾ ನಾಯಕರ ತನಿಖೆಯಾಗಲಿ ಯಾರು ಏಕಪತ್ನಿವ್ರತಸ್ಥರು? ಯಾರಿಗೆಲ್ಲ ಅನೈತಿಕ ಸಂಬಂಧ ಇದೆ ಗೊತ್ತಾಗುತ್ತೆ' ಸಚಿವ ಸುಧಾಕರ್ ಹೇಳಿಕೆ | Oneindia Kannada

ದಯಮಾಡಿ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸುವ ಕೃಪೆ ಮಾಡಿರಿ. ಹಾಗೂ ಆಂದೋಲನವು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಿರಿ ಎಂದು ಹೊನ್ನೇಸರ ಶ್ರಮಜೀವಿ ಆಶ್ರಮದ ಪ್ರಸನ್ನ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

English summary
A letter has been written to CM Yediyurappa on preventing illigal liquor sales in the villages of Raichur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X