Karnataka Assembly Election 2023: ರಾಯಚೂರು ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ
ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯಾರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದರಲ್ಲಿ ಪಕ್ಷಗಳು ನಿರತವಾಗಿವೆ. ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, 23 ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ 124 ಅಭ್ಯರ್ಥಿಗಳ ಮೊದಲ ಪಟ್ಟಿ ಹಾಗೂ 42 ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಜೆಡಿಎಸ್ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಇನ್ನುಳಿದಂತೆ ಎಎಪಿ ಮೂರು ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ರಾಯಚೂರಿನಲ್ಲಿರುವ ಕ್ಷೇತ್ರಗಳು ಎಷ್ಟು? ಅಭ್ಯರ್ಥಿಗಳು ಯಾರು? ಯಾವ ಯಾವ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಬಿಡುಗಡೆಯಾಗಿದೆ? ಎನ್ನುವುದನ್ನು ನೋಡೋಣ.
ರಾಯಚೂರಿನಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ರಾಯಚೂರು ಗ್ರಾಮಾಂತರ, ರಾಯಚೂರು, ಮಾನ್ವಿ, ದೇವದುರ್ಗ, ಲಿಂಗಸೂರು, ಸಿಂಧನೂರು, ಮಸ್ಕಿ ವಿಧಾನಸಭಾ ಕ್ಷೇತ್ರಗಳಿವೆ. ಮೊದಲು ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಸ್ಪರ್ಧಿಸಲಿದ್ದಾರೆಂದು ಎನ್ನುವುದನ್ನು ನೋಡುವುದಾದರೆ-

1.ರಾಯಚೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯಿಂದ ತಿಪ್ಪರಾಜು ಹವಾಲ್ದಾರ್ ಅವರು ಸ್ಪರ್ಧಿಸಲಿದ್ದಾರೆ, ಕಾಂಗ್ರೆಸ್‌ನಿಂದ ಬಸನಗೌಡ ದಡ್ಡಲ್, ಜೆಡಿಎಸ್‌ನಿಂದ ನರಸಿಂಹ ನಾಯಕ್ ಹಾಗೂ ಎಎಪಿಯಿಂದ ಡಾ. ಸುಭಾಶಚಂದ್ರ ಸಾಂಭಾಜಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ.
2.ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ. ಶಿವರಾಜ್ ಪಾಟೀಲ್ ಅವರು ಸ್ಪರ್ಧಿಸಲಿದ್ದಾರೆ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಇನ್ನೂ ಯಾರನ್ನೂ ಘೋಷಣೆ ಮಾಡಿಲ್ಲ. ಎಎಪಿಯಿಂದ ಡಿ. ವೀರೇಶ ಕುಮಾರ ಯಾದವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ.
3.ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಯಾವುದೇ ಅಭ್ಯರ್ಥಿಗಳು ಘೋಷಣೆಯಾಗಿಲ್ಲ. ಜೆಡಿಎಸ್‌ನಿಂದ ರಾಜಾವೆಂಕಟಪ್ಪ ನಾಯಕ್ ಹಾಗೂ ಎಎಪಿಯಿಂದ ರಾಜಾ ಶಾಮಸುಂದರ ನಾಯಕ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಲಿದ್ದಾರೆ.

4.ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವನಗೌಡ ನಾಯಕ್, ಜೆಡಿಎಸ್‌ನಿಂದ ತಿ ಕರೆಮ್ಮಾ ಜಿ.ನಾಯಕ್ ಸ್ಪರ್ಧಿಸಲಿದ್ದರೆ, ಕಾಂಗ್ರೆಸ್ ಹಾಗೂ ಎಎಪಿ ಪಕ್ಷದಿಂದ ಯಾವುದೇ ಅಭ್ಯರ್ಥಿ ಘೋಷಣೆಯಾಗಿಲ್ಲ.
5.ಲಿಂಗಸೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾನಪ್ಪ ಡಿ ವಜ್ಜಲ್, ಜೆಡಿಎಸ್‌ನಿಂದ ಸಿದ್ದು ಬಂಡಿ ಹಾಗೂ ಎಎಪಿಯಿಂದ ಶಿವಪುತ್ರ ಗಾಣದಾಳ(ಎಎಪಿ) ಸ್ಪರ್ಧಿಸಲಿದ್ದರೆ, ಕಾಂಗ್ರೆಸ್‌ನಿಂದ ಅಭ್ಯರ್ಥಿ ಇನ್ನೂ ಘೋಷಣೆಯಾಗಿಲ್ಲ.
6.ಇನ್ನೂ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೆ ಕಾರಿಯಪ್ಪ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್‌ನಿಂದ ಯಾವುದೇ ಅಭ್ಯರ್ಥಿ ಘೋಷಣೆಯಾಗಿಲ್ಲ. ಇನ್ನೂ ಜೆಡಿಎಸ್‌ನಿಂದ ವೆಂಕಟರಾವ್ ನಾಡಗೌಡ ಹಾಗೂ ಎಎಪಿಯಿಂದ ಸಂಗ್ರಾಮ ನಾರಾಯಣ ಕಿಲ್ಲೇದ ಸ್ಪರ್ಧೆ ಮಾಡಲಿದ್ದಾರೆ.

7.ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್‌ನಿಂದ ಬಸನಗೌಡ ತುರ್ವಿಹಾಳ್ ಸ್ಪರ್ಧಿಸುತ್ತಿದ್ದರೆ, ಜೆಡಿಎಸ್ ಹಾಗೂ ಎಎಪಿಯಿಂದ ಇನ್ನೂ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಾಗಿಲ್ಲ.
ಕ್ಷೇತ್ರ ಬಿಜೆಪಿ ಕಾಂಗ್ರೆಸ್ ಅಭ್ಯಾರ್ಥಿ ಜೆಡಿಎಸ್ ಅಭ್ಯರ್ಥಿ ಇತರರು
| ಕ್ಷೇತ್ರ | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಇತರರು |
| ರಾಯಚೂರು ಗ್ರಾಮಾಂತರ | ತಿಪ್ಪರಾಜು ಹವಾಲ್ದಾರ್ | ಬಸನಗೌಡ ದದ್ದಲ್ | ನರಸಿಂಹ ನಾಯಕ್ | ಡಾ. ಸುಭಾಶಚಂದ್ರ ಸಾಂಭಾಜಿ(ಎಎಪಿ) |
| ರಾಯಚೂರು | ಡಾ. ಶಿವರಾಜ್ ಪಾಟೀಲ್ | ಡಿ. ವೀರೇಶ ಕುಮಾರ ಯಾದವ(ಎಎಪಿ) | ||
| ಮಾನ್ವಿ | ರಾಜಾವೆಂಕಟಪ್ಪ ನಾಯಕ್ | ರಾಜಾ ಶಾಮಸುಂದರ ನಾಯಕ(ಎಎಪಿ) | ||
| ದೇವದುರ್ಗ | ಶಿವನಗೌಡ ನಾಯಕ್ | ತಿ ಕರೆಮ್ಮಾ ಜಿ.ನಾಯಕ್ | ||
| ಲಿಂಗಸೂರು | ಮಾನಪ್ಪ ಡಿ ವಜ್ಜಲ್ | ಸಿದ್ದು ಬಂಡಿ | ಶಿವಪುತ್ರ ಗಾಣದಾಳ(ಎಎಪಿ) | |
| ಸಿಂಧನೂರು | ಕೆ ಕಾರಿಯಪ್ಪ | ವೆಂಕಟರಾವ್ ನಾಡಗೌಡ | ಸಂಗ್ರಾಮ ನಾರಾಯಣ ಕಿಲ್ಲೇದ(ಎಎಪಿ) | |
| ಮಸ್ಕಿ | ಪ್ರತಾಪಗೌಡ ಪಾಟೀಲ್ | ಬಸನಗೌಡ ತುರ್ವಿಹಾಳ್ |
2018 ವಿಧಾನಸಭಾ ಚುನಾವಣೆಯ ವಿವರ
1.2018ರ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ದದ್ದಲ 66,656 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ತಿಪ್ಪರಾಜು 9964 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಇನ್ನೂ ಜೆಡಿಎಸ್‌ನ ಅಭ್ಯರ್ಥಿ ರವಿ ಕುಮಾರ್ ಪಾಟೀಲ್ 34,250 ಮತಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದುಕೊಂಡಿದ್ದರು.
2.ರಾಯಚೂರು ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿ (2018) ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಡಾ. ಶಿವರಾಜ್ ಪಾಟೀಲ ಜಯ ಗಳಿಸಿದ್ದರು. ಕಾಂಗ್ರೆಸ್ಯ ಸಯ್ಯದ್ ಯಾಸೀನ್ 10991 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಜೆಡಿಎಸ್ ಪಕ್ಷದ ಅಭ್ಯರ್ಥಿ ಮಹಾಂತೇಶ್ ಪಾಟೀಲ ಮೂರನೇ ಸ್ಥಾನದಲ್ಲಿದ್ದರು.
3.2018ರ ವಿಧಾನಸಭಾ ಚುನಾವಣೆಯಲ್ಲಿ ಮಾನ್ವಿ ಕ್ಷೇತ್ರದ ಜನತಾ ದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಜಯ ಗಳಿಸಿದ್ದರು. ಸ್ವತಂತ್ರ ಅಭ್ಯರ್ಥಿಯೊಂದಿಗೆ 15815 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಇನ್ನೂ ಬಿಜೆಪಿ ಅಭ್ಯರ್ಥಿ ಶರಣಪ್ಪ ಗುಡದಿನ್ನಿ ಮೂರನೇ ಸ್ತಾನ ಪಡೆದುಕೊಂಡಿದ್ದರು.
4.2018ರ ವಿಧಾನಸಭಾ ಚುನಾವಣೆಯಲ್ಲಿ ದೇವದುರ್ಗ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಶಿವನಗೌಡ ನಾಯಕ ಜಯ ಗಳಿಸಿದ್ದರು. ಕಾಂಗ್ರೆಸ್‌ನ ರಾಜಶೇಖರ ನಾಯಕ 21045 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಜೆಡಿಎಸ್ ಅಭ್ಯರ್ಥಿ ವೆಂಕಟೇಶ್ ಪೂಜಾರಿ ನಾಲ್ಕನೇ ಸ್ಥಾನದಲ್ಲಿದ್ದರೆ ಪಕ್ಷೇತರ ಅಭ್ಯರ್ತಿ ಮೂರನೇ ಸ್ಥಾನದಲ್ಲಿದ್ದರು.
5.2018ರ ವಿಧಾನಸಭಾ ಚುನಾವಣೆಯಲ್ಲಿ ಲಿಂಗಸೂರು ಕ್ಷೇತ್ರದ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಎಸ್. ಹೊಲಗೇರಿ ಜಯ ಗಳಿಸಿದ್ದರು. ಜನತಾ ದಳ (ಜಾತ್ಯತೀತ)ಯ ಸಿದ್ದು ಬಂಡಿ 4946 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಜೆಡಿಎಸ್‌ನ ಮಾನಪ್ಪ ವಜ್ಜಲ ಅವರು ಮೂರನೇ ಸ್ಥಾನದಲ್ಲಿದ್ದರು.
6.2018ರ ವಿಧಾನಸಭಾ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದ ಜನತಾ ದಳ (ಜಾತ್ಯತೀತ) ಯ ವೆಂಕಟರಾವ್ ನಾಡಗೌಡ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ನ ಅಭ್ಯರ್ಥಿ ಹನುಮಗೌಡ ಬದ್ರಳ್ಳಿ 1597 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಬಿಜೆಪಿಯ ಕೊಲ್ಲ ಶೇಷಗಿರಿ ರಾವ್ ಮೂರನೇ ಸ್ಥಾನದಲ್ಲಿದ್ದರು.
7.2018ರ ವಿಧಾನಸಭಾ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದ ಕಾಂಗ್ರೆಸ್‌ನ ಬಸನಗೌಡ ತುರವಿಹಾಳ ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಪ್ರತಾಪ್ ಗೌಡ ಪಾಟೀಲ್ 31 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.












Click it and Unblock the Notifications