ರಿಮ್ಸ್ ಆಸ್ಪತ್ರೆಯಿಂದ ರಕ್ತಹೀನತೆ ತಡೆಗೆ ಗರ್ಭೀಣಿಯರಿಗೆ ಐರನ್ ಕ್ಲಿನಿಕಲ್ ಚಿಕಿತ್ಸೆ, ಇದು ದೇಶದಲ್ಲೇ ಮೊದಲ ಸಂಶೋಧನೆ
ರಾಯಚೂರು, ಅಕ್ಟೋಬರ್, 03: ಗರ್ಭೀಣಿಯರಲ್ಲಿನ ರಕ್ತಹೀನತೆ ತಡೆಗೆ ರಾಯಚೂರು ರಿಮ್ಸ್ ಆಸ್ಪತ್ರೆ ವೈದ್ಯರು ದೇಶದಲ್ಲಿಯೇ ಮೊದಲ ಬಾರಿ ರ‍್ಯಾಪಿಡ್ ಐರನ್ ಕ್ಲಿನಿಕಲ್ ಚಿಕಿತ್ಸೆ ನೀಡಿ ಯಶಸ್ಸು ಕಂಡಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಬ್ಬಿಣಾಂಶ ಕೊರತೆಯಿಂದ ಬಳಲುವ ಗರ್ಭೀಣಿಯರಿಗೆ ರಾಯಚೂರು ರಿಮ್ಸ್ ಆಸ್ಪತ್ರೆಯ ವೈದ್ಯರ ತಂಡ, ಎಫ್‌ಸಿಎಂ ಮತ್ತು ಐಎಎ ಇಂಜೆಕ್ಷನ್ ನೀಡಿ ಆರೋಗ್ಯ ವೃದ್ಧಿಗೆ ಮುಂದಾಗಿದೆ. ಪೌಷ್ಟಿಕ ಆಹಾರ ದೊರೆಯದೆ ರಕ್ತಹೀನತೆಗೆ ಒಳಗಾಗುವ ಗರ್ಭೀಣಿಯರಿಗೆ ಕೆಲ ಆಸ್ಪತ್ರೆಗಳಲ್ಲಿ ಐರನ್ ಮಾತ್ರೆಗಳನ್ನು ನೀಡುತ್ತಾರೆ.

ಆದರೆ ಮಾತ್ರೆಗಳನ್ನು ಮಹಿಳೆಯರು ಸರಿಯಾದ ಸಮಯಕ್ಕೆ ತೆಗೆದುಕೊಳ್ಳದೆ ಇರುವುದರಿಂದ ಗರ್ಭಧಾರಣೆ ಸಂದರ್ಭದಲ್ಲಿ ತಾಯಿ, ಮಗು ಮರಣ ಹೊಂದುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೊಸ ಸಂಶೋಧನೆ ಮೂಲಕ 12ರಿಂದ 14 ವಾರಗಳ ಕಾಲ ಗಭೀಣಿಯರನ್ನು ಪೋಷಿಸಿ ಇಂಜೆಕ್ಷನ್ ನೀಡಲು ರಿಮ್ಸ್ ಆಸ್ಪತ್ರೆ ಮುಂದಾಗಿದೆ.
ರಿಮ್ಸ್ ಆಸ್ಪತ್ರೆಯು ಬೆಳಗಾವಿಯ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಯುಕೆ ಅಂತಾರಾಷ್ಟ್ರೀಯ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬದ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊದಲ ಬಾರಿ ಗರ್ಭೀಣಿಗೆ ರಕ್ತ ಪರೀಕ್ಷೆ ಮಾಡಲಾಗುತ್ತದೆ. 7 ರಿಂದ 9.9 ಹಿಮೋಗ್ಲೋಬಿನ್ ರಕ್ತ ಕಡಿಮೆ ಇದ್ದವರನ್ನು ತೆಗೆದುಕೊಂಡು ಅವರ ಒಪ್ಪಿಗೆ ಮೇಲೆ ಗರ್ಭೀಣಿಯರ ಪೋಷಣೆಗೆ ಮುಂದಾಗುವ ಪ್ರಕ್ರಿಯೆ ನಡೆಯಲಿದೆ.
ಕಬ್ಬಿಣಾಂಶ ಕಡಿಮೆ ಇರುವ ಮಹಿಳೆಯರು ಮೂರು ತಿಂಗಳು ಗರ್ಭೀಣಿ ಇರುವಾಗಲೇ ಅವರ ಒಪ್ಪಿಗೆಯ ಮೇರೆಗೆ ಅವರಿಗೆ ಎಫ್‌ಸಿಎಂ, ಐಎಎ ಇಂಜೆಕ್ಷನ್ ನೀಡಲಾಗುತ್ತದೆ. ಇದರಿಂದ ಕಬ್ಬಿಣಾಂಶವನ್ನು ದೇಹದಲ್ಲಿ ಹೆಚ್ಚಳ ಮಾಡುವ ಜೊತೆಗೆ ಮಗುವಿನ ಮೆದುಳು ಹಾಗೂ ತೂಕದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದಲ್ಲದೆ ಮಗು ಜನಿಸಿದ ನಂತರ 42 ದಿನಗಳ ಕಾಲ ಮಗುವಿನ ಪೋಷಣೆಗೆ ವೈದ್ಯರು ನಿಗಾ ವಹಿಸುತ್ತಾರೆ.
ಗರ್ಭೀಣಿಯರ ರಕ್ತಹೀನತೆ ತಡೆಗೆ ಬೆಳಗಾವಿಯ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಹೆರಿಗೆ ವಿಭಾಗದ ಮುಖ್ಯಸ್ಥ ಡಾ.ರಾಧಾ ಸಂಘಾವಿ, ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರ, ರಿಮ್ಸ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರವೀಣ್ ಕುಮಾರ ನೇತೃತ್ವದಲ್ಲಿ ಜಿಲ್ಲೆಯ 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನಡೆದಿದೆ.
ದೇವದುರ್ಗದಿಂದ 7, ಮಾನ್ವಿ 3, ರಾಯಚೂರು ತಾಲೂಕಿನಲ್ಲಿ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 5,648 ಗರ್ಭೀಣಿಯರಿಗೆ ರಕ್ತ ಪರೀಕ್ಷೆ ಮಾಡಿದ್ದು, ಇದರಲ್ಲಿ 1,328 ಜನ ಮಹಿಳೆಯರಲ್ಲಿ ರಕ್ತಹೀನತೆ ಕಂಡುಬಂದಿದ್ದು, 436 ಗರ್ಭೀಣಿಯರು ಎಫ್‌ಸಿಎಂ ಮತ್ತು ಐಎಎ ಇಂಜೆಕ್ಷನ್ ಪಡೆದು ಆರೋಗ್ಯವಾಗಿದ್ದು, ಇನ್ನೂ 50 ಗರ್ಭೀಣಿಯರಿಗೆ ಡೆಲಿವರಿ ಆಗಬೇಕಿದೆ.
ರಕ್ತ ಹೀನತೆಯಿಂದ ಬಳಲುತ್ತಿರುವ ಗರ್ಭೀಣಿಯರಿಗೆ ಹೆರಿಗೆ ಆಸ್ಪತ್ರೆಗಳಲ್ಲಿ ಇದಕ್ಕೆ ಸಂಬಂಧಿಸಿದ ತಜ್ಞರಿಂದ ಕಬ್ಬಿಣ ಅಂಶ ಹೆಚ್ಚಿಸುವ ಇಂಜೆಕ್ಷನ್ ನೀಡಲಾಗುತ್ತದೆ. ರಾಯಚೂರು ನಗರ, ದೇವದುರ್ಗದ ಅರಕೇರಾ, ಮಾನ್ವಿ ಹಾಗೂ ಜೆ.ಮಲ್ಲಾಪುರ ಹೆರಿಗೆ ಆಸ್ಪತ್ರೆಯಲ್ಲಿ ಇಂಜೆಕ್ಷನ್ ನೀಡಲಾಗುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಾಕಷ್ಟು ಗರ್ಭೀಣಿಯರು ರಕ್ತಹೀನತೆಯಿಂದ ಬಳಲಬಾರದು ಎಂದು ದೇಶದಲ್ಲಿ ಮೊದಲ ಬಾರಿಗೆ ರಿಮ್ಸ್ ಆಸ್ಪತ್ರೆಯಿಂದ ರ‍್ಯಾಪಿಡ್ ಐರನ್ ಕ್ಲಿನಿಕಲ್ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ವೃದ್ಧಿಯಾಗಲಿದೆ. ಮಗುವಿನ ಮೆದುಳು ಬೆಳವಣಿಗೆಯಾಗಲಿದೆ ಎಂದು ರಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಬಸವರಾಜ ಪೀರಾಪುರ್ ಹೇಳಿದರು.
ಸರ್ಕಾರದ ಯೋಜನೆಯಡಿ ಗರ್ಭೀಣಿಯರಿಗೆ ಕಬ್ಬಿಣ ಅಂಶ ಹೆಚ್ಚಲು ಐರನ್ ಮಾತ್ರೆಗಳನ್ನು ನೀಡಲಾಗುತ್ತದೆ. ಸರಿಯಾದ ಸಮಯಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳದೆ ಇದ್ದರೆ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಹೊಸ ಸಂಶೋಧನೆ ಮಾಡಿ ರ‍್ಯಾಪಿಡಿ ಐರನ್ ಕ್ಲಿನಿಕಲ್ ಚಿಕಿತ್ಸೆ ನೀಡಲು ಮುಂದಾಗಿದ್ದೇವೆ ಎಂದು ರಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಶರೀರ ಕ್ರಿಯಾ ಶಸ್ತ್ರ ಚಿಕಿತ್ಸಕರಾದ ಡಾ.ಪ್ರವೀಣ್ ಕುಮಾರ್ ಹೇಳಿದರು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications