ರಾಯಚೂರಿನಲ್ಲಿ ದೇವೇಗೌಡರ ಪತ್ರಿಕಾಗೋಷ್ಠಿ, ಪ್ರಮುಖ ಅಂಶಗಳು
ರಾಯಚೂರು, ನವೆಂಬರ್ 26 : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ರಾಯಚೂರಿನ ಲಿಂಗಸುಗೂರಿನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದರು. ಅದರ ಪ್ರಮುಖ ಅಂಶಗಳು ಇಲ್ಲಿವೆ.
* ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಚಂಪಾ ಹೇಳಿಕೆ ವಿಚಾರ, 'ಸಾಹಿತಿ ಚಂಪಾ ಹೇಳಿಕೆ ಬಗ್ಗೆ ಅನಗತ್ಯ ಹುಯಿಲೆಬ್ಬಿಸುವುದು ಬೇಡ. ಕನ್ನಡ ನಾಡು, ನುಡಿ ಮತ್ತು ಗಡಿ ಸಮಸ್ಯೆಗಳಿಗೆ ಪರಿಹಾರ ಕಾಣದ ಹಿನ್ನಲೆಯಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯತೆಯ ಬಗ್ಗೆ ಅಥವಾ ಬೇರೊಂದು ಪಕ್ಷ ಬೆಂಬಲಿಸಲು ಹೇಳಿರಬಹುದು'.

* 'ಜೆಡಿಎಸ್ ಪಕ್ಷಕ್ಕೆ ನಿಷ್ಠರಾಗಿರುವ ಹಾಲಿ ಶಾಸಕರನ್ನು ಯಾವುದೇ ಕಾರಣಕ್ಕೂ ಅಸ್ಥಿರಗೊಳಿಸುವುದಿಲ್ಲ. ಹಾಲಿ ಶಾಸಕರ ಸ್ಪರ್ಧೆ ವಿರೋಧಿಸುವವರಿಗೆ ಬೇರೆ ಕಡೆ ಸ್ಪರ್ಧಿಸಲು ಅವಕಾಶ' ನೀಡಲಾಗುತ್ತದೆ.
* 'ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆಯಾದರೆ ಜೆಡಿಎಸ್‌ಗೆ ಯಾವುದೇ ಹಾನಿಯಿಲ್ಲ. ಮೊದಲಿನಿಂದಲೂ ಕಾಂಗ್ರೆಸ್ ವಿರುದ್ಧ ನಿರಂತರ ರಾಜಕೀಯ ಹೋರಾಟ ಮಾಡಿದ್ದೇವೆ. ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ಅವಕಾಶವಿದೆ'.
* 'ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಿಕೆ ಬಗ್ಗೆ ಪಕ್ಷದ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ.
ಹಿಂದಿನ ಬಾಗಿಲಿನಿಂದ ಪ್ರವೇಶ ಮಾಡಿ ರಾಜಕೀಯವಾಗಿ ಬೆಳೆಯುವವರ ಬಗ್ಗೆ ಗಮನಕೊಡಬೇಕಿಲ್ಲ'.
* 'ರಾಜಕೀಯ ನಾಯಕರಾಗುವ ಆಕಾಂಕ್ಷೆ ಹೊಂದಿದವರು ಜನರ ಮುಂದೆ ಹೋಗಿ ಅಗ್ನಿ ಪರೀಕ್ಷೆಗೆ ಒಳಪಟ್ಟು ಗೆದ್ದು ಬರಬೇಕು.'
* 'ಶಾಸಕ ಎಂ.ಪಿ.ರವೀಂದ್ರ ಕಾಂಗ್ರೆಸ್ ಬಿಟ್ಟ ವಿಚಾರ ತಿಳಿದಿಲ್ಲ. ಎಂ.ಪಿ.ರವೀಂದ್ರರನ್ನು ಜೆಡಿಎಸ್‌ಗೆ ಸೇರಿಸಿಕೊಳ್ಳುವ ಬಗ್ಗೆ ಈಗಲೇ ಹೇಳಲಾಗದು'.












Click it and Unblock the Notifications