ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ವಿಡಿಯೋ: ರಾಯಚೂರಿನಲ್ಲಿ ಹಾವನ್ನು ನುಂಗಿದ ಕಪ್ಪೆ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಜುಲೈ 16: ಆಹಾರ ಸರಪಳಿಯಲ್ಲಿ ಹಾವು ಕಪ್ಪೆಯನ್ನು ನುಂಗುವುದು ಸಾಮಾನ್ಯ. ಆದರೆ ಕಪ್ಪೆಗಳೇ ಹಾವನ್ನು ನುಂಗಿದ ಘಟನೆ ಅಲ್ಲಲ್ಲಿ ನಡೆದಿವೆ. ರಾಯಚೂರಿನಲ್ಲಿ ಕಪ್ಪೆಯೊಂದು ಹಾವನ್ನು ನುಂಗಲೆತ್ನಿಸಿದ ಅಪರೂಪದ ಘಟನೆ ನಡೆದಿದೆ. ಕಪ್ಪೆ ತನ್ನ ಬಾಯಲ್ಲಿ ಹಾವನ್ನು ಹಿಡಿದು ಕೊಂಡಿರುವ ದೃಶ್ಯ ಹುಬ್ಬೇರಿಸುವಂತಿದೆ.

ರಾಯಚೂರು ತಾಲ್ಲೂಕಿನ ದೇವಸೂಗೂರು ಹೋಬಳಿ ವ್ಯಾಪ್ತಿಯ ಗ್ರಾಮದ ಚರಂಡಿಯಯೊಂದರಲ್ಲಿ ಕಪ್ಪೆಯೊಂದು ತನ್ನ ಬಾಯಲ್ಲಿ ಹಾವನ್ನು ಹಿಡಿದು ಕೊಂಡಿರುವ ದೃಶ್ಯವನ್ನು ಸ್ಥಳೀಯರು ತಮ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದ್ದು ಬಾರೀ ಕುತೂಹಲಕಾರಿಯಾಗಿದೆ.

 ವಿಡಿಯೋ: ಆಕಸ್ಮಿಕವಾಗಿ ಬಲೆಗೆ ಸಿಕ್ಕ 16 ಅಡಿ 'ಶಾಪಗ್ರಸ್ತ ಮೀನು' ವಿಡಿಯೋ: ಆಕಸ್ಮಿಕವಾಗಿ ಬಲೆಗೆ ಸಿಕ್ಕ 16 ಅಡಿ 'ಶಾಪಗ್ರಸ್ತ ಮೀನು'

ನಾವು ಹಾವು ಕಪ್ಪೆಯನ್ನು ಹಾವು ನುಂಗುವುದನ್ನು ಸಾಕಷ್ಟು ಬಾರಿ ನೋಡಿದ್ದೇವೆ, ಆದರೆ ಇಲ್ಲಿ ಕಪ್ಪೆಯೇ ಹಾವನ್ನು ನುಂಗಿರುವ ಘಟನೆಗೆ ಸಾರ್ವಜನಿಕರು ನೋಡಿ ಆಶ್ಚರ್ಯವ್ಯಕ್ತಪಡಿಸಿದ್ದಾರೆ. ಇಂಥ ಅನೇಕ ಕುತೂಹಲಗಳು ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುತ್ತವೆ. ಅದರಲ್ಲಿ ಕಪ್ಪೆಯೇ ಹಾವನ್ನು ನುಂಗುವ ಘಟನೆ ಬಿಸಿಲು ನಾಡಿನಲ್ಲಿ ಕಂಡುಬಂದಿರುವುದು ತೀರ ಅಪರೂಪವಾಗಿದೆ.

Frog Eats deadly Snake in Raichur : video viral

ಅರ್ಚಕ ನೀರು ಪಾಲು
ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಅರ್ಚಕರೊಬ್ಬರು ಕಾಲುಜಾರಿ ನದಿಗೆ ಬಿದ್ದು ಕೊಚ್ಚಿಹೋಗಿರುವ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ ನಡೆದಿದೆ. ಕೊಚ್ಚಿ ಹೋಗಿರುವ ವ್ಯಕ್ತಿಯನ್ನು ಲಿಂಗಪ್ಪ (50) ಎಂದು ಗುರುತಿಸಲಾಗಿದೆ. ಇವರು ಕರಿವಿಶ್ವೇಶ್ವರ ದೇವಸ್ಥಾನದ ಅರ್ಚಕರಾಗಿದ್ದರು. ತುಂಗಭದ್ರ ನದಿಯಲ್ಲಿ ಈಜಲು ತೆರಳಿದ್ದ ಸಂದರ್ಭದಲ್ಲಿ ಕಾಲ ಜಾರಿ ಕೊಚ್ಚಿ ಹೋಗಿದ್ದಾರೆ. ಇವರು ದೇವಸ್ಥಾನದ ಅರ್ಚಕ ಎಂದು ತಿಳಿದು ಬಂದಿದೆ. ಸದ್ಯ ಅಗ್ನಿ ಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.

ಕಳೆದ ಕೆಲ ದಿನಗಳಿಂದ ರಾಯಚೂರಿನಲ್ಲಿ ತೀವ್ರ ಮಳೆಯಾಗುತ್ತಿದ್ದು ಬಿಸಿಲು ನಾಡಿ ಮಂದಿ ಹೈರಾಣಾಗಿದ್ದಾರೆ. ಬೆಂಬಿಡದೆ ಸುರಿಯುತ್ತಿರುವ ಮಳೆಗೆ ನದಿಗಳು ಉಕ್ಕಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ರಸ್ತೆಗಳು ಮನೆಗಳಿಗೆ ನೀರು ನುಗ್ಗಿದ ವರದಿಗಳಾಗಿವೆ. ಮಾತ್ರವಲ್ಲದೇ ಗ್ರಾಮಗಳಿಗೆ ಸಂಪರ್ಕಕ ಕಲ್ಪಸುವ ಕಿರಿದಾದ ರಸ್ತೆಗಳು ಮೇಲೆ ಪ್ರವಾಹದಂತೆ ನೀರು ರಭಸದಿಂದ ಹರಿಯುತ್ತಿದೆ.

English summary
In an unusual incident, a frog eat a snake in Raichur,video viral on Social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X