Get Updates
Get notified of breaking news, exclusive insights, and must-see stories!

ವಿವಿಧ ಸಂಕಷ್ಟ: ಭತ್ತದ ಬದಲಿಗೆ ಕಬ್ಬು ಬೆಳಯುವತ್ತ ದೇವದುರ್ಗ ರೈತರ ಚಿತ್ತ

ರಾಯಚೂರು, ಆಗಸ್ಟ್‌ 03: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವ್ಯಾಪ್ತಿಯಲ್ಲಿ ನೀರು ಕೊರತೆ, ದುಬಾರಿ ನಿರ್ವಹಣಾ ವೆಚ್ಚ, ಭೂಮಿ ಸವಳು-ಜವಳಾಗುವ ಆತಂಕ, ಕಡಿಮೆ ದರ ಹಾಗೂ ಇತರ ಕಾರಣಗಳಿಗಾಗಿ ತಾಲೂಕಿನ ರೈತರು ಈಗ ಭತ್ತದ ಬದಲಿಗೆ ಕಬ್ಬಿನತ್ತ ಚಿತ್ತ ಹರಿಸಿದ್ದಾರೆ.

ಸಂಪೂರ್ಣ ನೀರಾವರಿಗೆ ಒಳಪಟ್ಟಿರುವ ತಾಲೂಕಿನ ಅರ್ಧಕ್ಕೂ ಹೆಚ್ಚು ಪ್ರದೇಶದಲ್ಲಿ ಕಳೆದ ಮೂರು ದಶಕಗಳಿಂದ ಭತ್ತ ಬೆಳೆಯಲಾಗುತ್ತಿತ್ತು. ಕಳೆದ ಎರಡು ಮೂರು ವರ್ಷಗಳಿಂದ ಕೆಲ ರೈತರು ಕಬ್ಬು ನಾಟಿ ಮಾಡುತ್ತಿದ್ದಾರೆ.

farmers-have-decided-to-grow-sugarcane

ದೇವದುರ್ಗ ತಾಲೂಕು ಶೇ. 80ರಷ್ಟು ಭೂಮಿ ನೀರಾವರಿ ಸೌಲಭ್ಯ ಹೊಂದಿದೆ. ರೈತರು 30 ವರ್ಷಗಳಿಂದ ಭತ್ತ ಬೆಳೆಯುತ್ತಿದ್ದಾರೆ. ತಾಲೂಕಿನಲ್ಲಿಯೇ ಅತಿ ಹೆಚ್ಚು ಭತ್ತ ಬೆಳೆಯುತ್ತಿದ್ದ ಗ್ರಾಮಗಳಾದ ಜಾಲಹಳ್ಳಿ, ಲಿಂಗದಳ್ಳಿ, ಬುಂಕಲದೊಡ್ಡಿ, ಮಸರಕಲ್, ಕೊಪ್ಪರ, ಕುರ್ಕಿಹಳ್ಳಿ, ಯಾಟಗಲ್, ಸುಂಕೇಶ್ವರಹಾಳ, ಬೂದಿನಾಳ, ಜಿನ್ನಾಪುರ ಮತ್ತು ಹಂಚಿನಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರು ಕಬ್ಬು ಬೆಳೆಯಲು ಮುಂದಾಗಿದ್ದಾರೆ.

ಭತ್ತದ ಕೃಷಿಗೆ ಬಳಸುವ ನೀರಿನಲ್ಲಿ ಕಬ್ಬಿಗೆ ಅರ್ಧದಷ್ಟು ಪ್ರಮಾಣ ಬಳಸಿದರೆ ಸಾಕು. ಭೂಮಿ ಸವಳಾಗುವ ಆತಂಕ ಇಲ್ಲ. ಸದ್ಯ ಟನ್‌ಗೆ ₹2,500 ಬೆಲೆ ಇದೆ. ಒಂದು ಎಕರೆಗೆ ₹1 ಲಕ್ಷ ಮೌಲ್ಯದ ಬೆಳೆ ಬರುತ್ತದೆ. ಮೂರು ವರ್ಷಗಳ ನಂತರ ಹೊಸದಾಗಿ ನಾಟಿ ಮಾಡಬೇಕು. ಮೊದಲ ವರ್ಷ ಎಕರೆಗೆ ₹35 ಸಾವಿರ, ನಂತರದ ವರ್ಷಗಳಲ್ಲಿ ₹10 ಸಾವಿರ ನಿರ್ವಹಣಾ ವೆಚ್ಚ ತಗಲುತ್ತದೆ. ಕಡಿಮೆ ಬಡ್ಡಿ ದರದಲ್ಲಿ ಎಣ್ಣೆ, ಬೀಜ ಹಾಗೂ ಗೊಬ್ಬರವನ್ನು ಕಾರ್ಖಾನೆ ಒದಗಿಸುತ್ತದೆ. ಕಟಾವು ಮತ್ತು ಸಾಗಣೆ ಜವಾಬ್ದಾರಿಯೂ ನಮ್ಮದೇ ಎಂದು ಕಾರ್ಖಾನೆ ಮೇಲ್ವಿಚಾರಕರು ತಿಳಿಸಿದ್ದಾರೆ.

ಭತ್ತಕ್ಕೆ ಭೂಮಿ ಹದ ಮಾಡುವುದರಿಂದ ಹಿಡಿದು ನಾಟಿ, ಗೊಬ್ಬರ, ಕೀಟನಾಶಕ ಸಿಂಪಡಣೆ, ಕಟಾವು ಮಾಡುವುದರಲ್ಲಿ ರೈತನಿಗೆ ಸಾಕಾಗುತ್ತದೆ. ಎಲ್ಲ ದರಗಳು ದುಬಾರಿಯಾಗಿವೆ. ಪ್ರತಿವರ್ಷ ನೀರಿನ ಕೊರತೆ ಕಾಡುತ್ತದೆ. ಎರಡನೇ ಬೆಳೆಗೆ ನೀರಿಗಾಗಿ ಕಾದಾಟವೇ ನಡೆಯುತ್ತದೆ. ಒಂದು ಎಕರೆಗೆ 35 ರಿಂದ 40 ಚೀಲ ಇಳುವರಿ ಬಂದರೆ ಹೆಚ್ಚು. ಒಂದು ವರ್ಷ ದರ ಸಿಕ್ಕರೆ ಮತ್ತೆರಡು ವರ್ಷ ಕಡಿಮೆ ದರ ಇರುತ್ತದೆ. ನಷ್ಟ ಅನುಭವಿಸುವುದೇ ಹೆಚ್ಚು ಎಂದು ಜಾಲಹಳ್ಳಿಯ ರೈತ ವಿರೂಪಾಕ್ಷಪ್ಪ ಹೇಳಿದ್ದಾರೆ.

farmers-have-decided-to-grow-sugarcane

ನೆರೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ಕೋ-ಗ್ರೀನ್‌ ಸಕ್ಕರೆ ಕಾರ್ಖಾನೆ ಇದೆ. ಅಲ್ಲಿನ ಅಭಿವೃದ್ಧಿ ಅಧಿಕಾರಿ ಸೂಗನಗೌಡ ಪಾಟೀಲ ದೇವದುರ್ಗದವರು. ಕಾರ್ಖಾನೆ 45 ಕಿ.ಮೀ ವ್ಯಾಪ್ತಿ ಹೊಂದಿದೆ. ಸೂಗನಗೌಡ ಅವರು ರೈತರಿಗೆ ಕೊಬ್ಬು ಬೆಳೆಯ ಕುರಿತು ಮಾಹಿತಿ ನೀಡಿದ ಕಾರಣ ಈಗ 300 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕಬ್ಬು ನಾಟಿ ಮಾಡಲಾಗಿದೆ.

'ಮೊದಲ ವರ್ಷ ಎಕರೆಗೆ ₹80 ಸಾವಿರ ಲಾಭ'

ರೈತರು ಸಿ.ಒ 86032 ತಳಿಯ ಕಬ್ಬು ಬೆಳೆಯುತ್ತಿದ್ದಾರೆ. ವಾಣಿಜ್ಯ ಬೆಳೆಗಳಲ್ಲಿ ಅತಿವೃಷ್ಟಿ-ಅನಾವೃಷ್ಟಿಯನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುವ ಕಬ್ಬು ರೈತರಿಗೆ ಆರ್ಥಿಕವಾಗಿ ಲಾಭ ಉಂಟು ಮಾಡಲಿದೆ. ವಾರ್ಷಿಕ 1 ಎಕರೆ ಕಬ್ಬಿಗೆ ಪ್ರಥಮ ವರ್ಷ ₹80 ಸಾವಿರ ನಿವ್ವಳ ಲಾಭ ಬಂದರೆ, ಎರಡು ಮತ್ತು ಮೂರನೇ ವರ್ಷ ₹1.5 ಲಕ್ಷದಿಂದ 2 ಲಕ್ಷದವರೆಗೆ ರೈತರಿಗೆ ಲಾಭ ಸಿಗುತ್ತದೆ ಎಂದು ಕಾರ್ಖಾನೆ ಸೂಪರ್‌ವೈಸರ್ ಶಿವರಾಜ ಕೊಪ್ಪರ ಮಾಹಿತಿ ನೀಡಿದ್ದಾರೆ.

ಕಬ್ಬು ಬೆಳೆಯುವ ರೈತರಿಗೆ ವೈಜ್ಞಾನಿಕ ಪದ್ಧತಿಯ ಮಾಹಿತಿ ಜೊತೆಗೆ ಕಬ್ಬು ನಾಟಿ ಮಾಡಿದ ರೈತರಿಗೆ ಕಟಾವು, ಕಾರ್ಮಿಕರ ಕೂಲಿ, ಕಬ್ಬು ಸಾಗಾಟ ವಾಹನಗಳ ವೆಚ್ಚಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+