• search
  • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈರುಳ್ಳಿ ಬೆಲೆ ದಿಢೀರ್ ಕುಸಿತ, ಖರೀದಿ ಸ್ಥಗಿತ

|

ರಾಯಚೂರು, ಡಿಸೆಂಬರ್ 11: ಬೇರೆ ರಾಜ್ಯ ಹಾಗೂ ಹೊರದೇಶಗಳಿಂದ ಈರುಳ್ಳಿ ಆಮದು ಆಗುತ್ತಿರುವ ಕಾರಣದಿಂದಾಗಿ ಈರುಳ್ಳಿ ಬೆಲೆ ದಿಢೀರ್ ಕುಸಿತ ಕಂಡಿದ್ದು, ಖರೀದಿ ಸ್ಥಗಿತಗೊಳಿಸಲಾಗಿದೆ. ಇದರಿಂದ ರೈತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ.

ಈರುಳ್ಳಿ ಖರೀದಿದಾರರು ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಖರೀದಿ ಸ್ಥಗಿತಗೊಳಿಸಿದ್ದರಿಂದ, ಸಿಟ್ಟಿಗೆದ್ದ ರೈತರು ಈರುಳ್ಳಿ ಖರೀದಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಈರುಳ್ಳಿ ಬೆಳೆವ ಹುಬ್ಬಳ್ಳಿಯಲ್ಲಿ ಸೇಬು ಸಸ್ತಾ, ಆದರೆ ಈರುಳ್ಳಿ ದುಬಾರಿ

ಪ್ರತಿ ಕ್ವಿಂಟಾಲ್ ಗೆ 15 ಸಾವಿರ ರೂ, ಇದ್ದ ಈರುಳ್ಳಿ ದರ ಈಗ 5 ಸಾವಿರ ರೂಪಾಯಿಗೆ ಇಳಿದಿದೆ. ಹೀಗಾಗಿ ಈರುಳ್ಳಿ ಖರೀದಿದಾರರು ಏಕಾಏಕಿ ಈರುಳ್ಳಿ ಖರೀದಿಸುವುದನ್ನು ಸ್ಥಗಿತಗೊಳಿಸಿದರು. ಇದರಿಂದ ರೈತರು ಆತಂಕಕ್ಕೆ ಒಳಗಾಗಿ ಈರುಳ್ಳಿ ಬೆಳೆಗಾರರು ಎಪಿಎಂಸಿ ಮುಖ್ಯದ್ವಾರ ಬಂದ್ ಮಾಡಿ ಪ್ರತಿಭಟಿಸಿದರು.

ರೈತರ ಪ್ರತಿಭಟನೆ ಹಿನ್ನೆಲೆ ಸ್ಥಳಕ್ಕೆ ಧಾವಿಸಿದ ರಾಯಚೂರು ಎಸ್ಪಿ ಡಾ.ಸಿ,ಬಿ.ವೇದಮೂರ್ತಿ, ಎಪಿಎಂಸಿ ಅಧಿಕಾರಿಗಳು ಹಾಗೂ ರೈತರ ಸಭೆ ನಡೆಸಿದರು. ರೈತರು ತಾವು ತಂದಿರುವ ಈರುಳ್ಳಿಯನ್ನು ಖರೀದಿ ಮಾಡುವಂತೆ ಒತ್ತಾಯಿಸಿದರು.

ಜಿಲ್ಲಾವಾರು ಈರುಳ್ಳಿ ಬೆಲೆ; ಬಂಗಾರದಂತೆ ಈರುಳ್ಳಿ ಅಳೆಯುತ್ತಿರುವ ವ್ಯಾಪಾರಿಗಳು

ನಾಳೆಯಿಂದ ಖರೀದಿಯನ್ನು ಮುಂದುವರೆಸುವುದಾಗಿ ಎಪಿಎಂಸಿ ಅಧಿಕಾರಿಗಳು ಹಾಗೂ ಖರೀದಿದಾರರು ಹೇಳಿದ್ದರಿಂದ ರೈತರು ತಮ್ಮ ಹೋರಾಟವನ್ನು ವಾಪಸ್ ಪಡೆದುಕೊಂಡರು.

English summary
The Onion Price Has Come Down Sharply Due To The Import Of Onions From Other States And Overseas And The Purchase Has Been Nill. Farmers Were Outraged By This.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X