• search
  • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರಿನಲ್ಲಿ ಲವ್ ಜಿಹಾದ್ ಆರೋಪ: ಹೈದರಾಬಾದ್ ಲಿಂಕ್ ಇರುವ ಶಂಕೆ

|
Google Oneindia Kannada News

ರಾಯಚೂರು ಡಿಸೆಂಬರ್ 2: ರಾಯಚೂರಿನಲ್ಲಿ ಮತ್ತೆ ಜಿಹಾದ್ ಆರೋಪ ಕೇಳಿಬಂದಿದ್ದು ಇದಕ್ಕೆ ಹೈದರಾಬಾದ್ ಲಿಂಕ್ ಇರುವ ಶಂಕೆ ವ್ಯಕ್ತವಾಗಿದೆ. ತಂಗಿ.. ಸಹೋದರಿ ಎಂದು ಕರೆಯುತ್ತಲೇ ರಿಹಾನ್ ಮಿಯಾ ಎಂಬಾತ ಭಾರತಿಯನ್ನು ಪುಸಲಾಯಿಸಿ ಹೈದರಾಬಾದ್‌ಗೆ ಕರೆದೊಯ್ದಿದ್ದಾನೆ ಎಂದು ಪೋಷಕರು ನೇತಾಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾರತಿ ಪೋಷಕರಾದ ಬಾಳಪ್ಪ ನಾಗಮ್ಮ ದೂರು ನೀಡಿದ್ದಾರೆ.

ಹಿಂದೂ ಯುವಕನೊಂದಿಗೆ ಮದುವೆ ನಿಶ್ಚಯವಾಗಿದ್ದರೂ ಭಾರತಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ನವೆಂಬರ್ 6ರಂದು ಭಾರತಿಯನ್ನು ರಿಹಾನ್ ಕರೆದೊಯ್ದಿದ್ದಾನೆ ಎಂದು ದೂರಲಾಗಿದೆ. ಈಗಾಗಲೇ ನಿಶ್ಚಿತಾರ್ಥವಾಗಿದ್ದ ಭಾರತಿಗೆ ಒಂದೇ ತಿಂಗಳಲ್ಲಿ ಬ್ರೇನ್ ವಾಶ್ ಮಾಡಿ ಮುಸ್ಲೀಂ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಹೂವಿನಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಿಹಾನ್ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತಿಯ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. ಆದರೆ ಇವರಿಬ್ಬರು ಅಣ್ಣ-ತಂಗಿಯಂತೆ ಇದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ರಿಹಾನ್ ಆಕೆಯ ಪ್ರೀತಿಯ ಬಲೆಗೆ ಬೀಳಿಸಿದ್ದಾನೆಂದು ದೂರಲಾಗಿದೆ.

ಮನೆಯಿಂದ ನಾಪತ್ತೆಯಾಗಿದ್ದ ಭಾರತಿಯೊಂದಿಗೆ ಒಂದು ತಿಂಗಳು ರಿಹಾನ್ ಉಳಿದುಕೊಂಡಿದ್ದಾನೆ. ಬಳಿಕ ಆತ ಆಕೆಯನ್ನು ಹೈದರಾಬಾದ್‌ಗೆ ಕರೆದೊಯ್ದಿದ್ದಾನೆ. ಇದ್ದಕ್ಕಿದ್ದಂತೆ ಹೈದರಾಬಾದ್‌ನಲ್ಲಿ ಅವರು ಉಳಿಯಲು ಹೇಗೆ ಸಾಧ್ಯ. ಅವರು ಹೂ ಮಾರುವ ವ್ಯಾಪಾರಿ. ಯಾವುದೋ ಕಾಣದ ಕೈಗಳು ಕೆಲಸ ಮಾಡಿವೆ ಎನ್ನಲಾಗುತ್ತಿದೆ. ಹೈದರಾಬಾದ್‌ನಲ್ಲಿ ಲವ್ ಜಿಹಾದಿಗಳಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತಿ ಕಾಣೆಯಾದ ಬಳಿ ಪೋಷಕರ ದೂರನ್ನು ಆಧರಿಸಿ ನೇತಾಜಿ ನಗರದ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಭಾರತಿಯ ಕಾಲ್‌ ಡಿಟೇಲ್ಸ್ ತೆಗೆಸಿದ್ದರು. ಈಗ ರಿಹಾನ್ ಆಕೆಯನ್ನು ಮಂತಾಂತರ ಮಾಡಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆ ಎಂದು ತಿಳಿದುಬಂದಿದೆ.

ಠಾಣೆಗೆ ಅವರಿಬ್ಬರನ್ನು ಕರೆಸಿ ವಿಚಾರಿಸಿದಾಗ ಭಾರತಿ ಬುರ್ಖಾ ಧರಿಸಿ ಠಾಣೆಗೆ ಆಗಮಿಸಿದ್ದಳು ಎಂದು ತಿಳಿದು ಬಂದಿದೆ. 'ನಮ್ಮ ಮಗಳನ್ನು ವಾಪಸ್ ಕೊಡಿಸಿ. ಅವಳು ಕನ್ನಡ ಕೂಡ ಮಾತನಾಡುತ್ತಿಲ್ಲ. ಆಕೆಗೆ ಮೈಂಡ್ ವಾಷ್ ಮಾಡಲಾಗಿದೆ. ನಮ್ಮ ಮಗಳನ್ನು ನಮಗೆ ಹಿಂದೂ ಮತಾಂತರಿಸಿ ಕೊಡಿ. ಆಕೆಗೆ ನಾವು ಮದುವೆ ನಿಶ್ಚಯ ಮಾಡಿದ್ದೇವೆ' ಎಂದು ಭಾರತಿ ತಾಯಿ ಅಳಲು ತೋಡಿಕೊಂಡಿದ್ದಾರೆ. ಅವರಿಬ್ಬರ ಫೋಟೋಗಳು ವೈರಲ್ ಆಗಿದ್ದು ಫೋಟೋದಲ್ಲಿ ಯುವತಿಗೆ ಬಲವಂತಪಡಿಸಿರುವಂತೆ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಯುವತಿ ಸಹಜ ಸ್ಥಿತಿಯಲ್ಲೇ ಕಂಡುಬಂದಿದ್ದಾಳೆ.

 Allegation of love jihad again in Raichur: Hyderabad link suspected

ಈ ಹಿಂದೆ ನಾಪತ್ತೆಯಾಗಿದ್ದ ಸುಹಾಸಿನಿ ಕೇಸ್‌ನಲ್ಲೂ ಹೈದರಾಬಾದ್ ಲಿಂಕ್ ಇತ್ತು. ಭಾರತಿ ಪ್ರಕರಣದಲ್ಲೂ ಹೈದರಬಾದ್‌ ಲಿಂಕ್ ಇದೆ ಎನ್ನಲಾಗುತ್ತಿದೆ. ಹೀಗಾಗಿ ಹೈದರಾಬಾದ್‌ನಲ್ಲಿ ರೆಡಿಯಾಗುತ್ತಿದ್ದಾರಾ ಲವ್ ಹಿಹಾದಿಗಳು ಎಂಬ ಪ್ರಶ್ನೆ ಉದ್ಬವಿಸಿದೆ.

English summary
In Raichur, love Jihad has been accused again and it is suspected that Hyderabad has a link to it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X