ರಾಯಚೂರು: ನಟಿ ಪೂಜಾ ಗಾಂಧಿಗೆ ಜಾಮೀನು ಮಂಜೂರು

Posted By:
Subscribe to Oneindia Kannada

ರಾಯಚೂರು, ಅಕ್ಟೋಬರ್ 26: 2013ರ ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದ ಭೀತಿ ಎದುರಿಸುತ್ತಿದ್ದ ನಟಿ ಪೂಜಾಗಾಂಧಿಗೆ ಇಲ್ಲಿನ ಜೆಎಂ ಎಫ್ ಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಚುನಾವಣೆಯಲ್ಲಿ ಬಿಎಸ್‍ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅನುಮತಿ ಇಲ್ಲದ ವಾಹನವನ್ನ ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು.

Actress Pooja Gandhi gets bail JMFC Court

ಈ ಹಿನ್ನೆಲೆಯಲ್ಲಿ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಕಳೆದ ಜೂನ್ 19 ರಂದು ವಿಚಾರಣೆಗೆ ಹಾಜರಾಗಬೇಕಿತ್ತು. 5 ಬಾರಿ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ವಾರೆಂಟ್ ಜಾರಿ ಮಾಡಲಾಗಿತ್ತು. ಗುರುವಾರದಂದು ವಿಚಾರಣೆ ವೇಳೆ ನ್ಯಾಯಾಧೀಶರು ಪೂಜಾಗಾಂಧಿಯನ್ನು ಸುಮಾರು 6 ಗಂಟೆ ಕಾಲ ಕೋರ್ಟ್ ಕಸ್ಟಡಿಗೆ ಒಳಪಡಿಸಿದ್ದರು.

ನಂತರ ನ್ಯಾಯಾಧೀಶೆ ಪೂರ್ಣಿಮಾ ಯಾದವ್ ಅವರು ಪೂಜಾಗಾಂಧಿಗೆ ಒಂದು ಲಕ್ಷ ರೂ. ಶ್ಯೂರಿಟಿ ಹಾಗೂ ಮುಂದಿನ ವಿಚಾರಣೆಗೆ ತಪ್ಪದೆ ಹಾಜರಾಗುವಂತೆ ಎಚ್ಚರಿಕೆ ನೀಡಿ ಷರತ್ತುಬದ್ಧ ಜಾಮೀನು ನೀಡಿದೆ. ಮುಂದಿನ ವಿಚಾರಣೆಯನ್ನ ನವೆಂಬರ್ 3 ಕ್ಕೆ ಮುಂದೂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The JMFC in Raichur granted bail to actor Pooja Gandhi on furnishing a personal bond of Rs. 1,00,000 here on Thursday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ