ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು 186 ಕೋಟಿ ರೂ. ವೆಚ್ಚದ ವಿಮಾನ ನಿಲ್ದಾಣಕ್ಕೆ 23 ಎಕರೆ ಭೂ ಸ್ವಾಧೀನ

|
Google Oneindia Kannada News

ರಾಯಚೂರು ಮೇ 12: ರಾಜ್ಯ ಸರ್ಕಾರ ಮಾರ್ಚ್ 4ರಂದು 2022-2023 ಸಾಲಿನ ಬಜೆಟ್ ಮಂಡಿಸಿತು. ಇದರಲ್ಲಿ ರಾಯಚೂರು ಭಾಗಕ್ಕೆ 186 ಕೋಟಿ ರೂ. ವೆಚ್ಚದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆಗೆ ಆಧ್ಯತೆ ನೀಡಲಾಗಿದೆ. ಹೀಗಾಗಿ ಇದರ ನಿರ್ಮಾಣಕ್ಕೆ ಬೇಕಾಗಿರುವ 23 ಎಕರೆ ಭೂಮಿಯನ್ನು ಸ್ವಾಧೀನ ಅಥವಾ ಖರೀದಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ತಿಳಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಲು ಈಗಿನ ವಿಮಾನ ತಂಗುದಾಣ ಪಕ್ಕದಲ್ಲಿರುವ ಖಾಸಗಿಯವರ 23 ಎಕರೆ ಭೂಮಿ ಸ್ವಾಧೀನ ಅಥವಾ ಖರೀದಿಸಲಾಗುವುದು ಎಂದು ಎಲ್. ಚಂದ್ರಶೇಖರ ನಾಯಕ ತಿಳಿಸಿದ್ದಾರೆ. ರಾಯಚೂರು ಏರೋಡ್ರಮ್ ಹೆಸರಿನಲ್ಲಿ 315 ಎಕರೆ ಭೂಮಿ ಇದೆ. ಆದರೆ, ನಿಗದಿ ಪಡಿಸಿದ ನಿವೇಶನ ಪಕ್ಕದಲ್ಲಿ ಇದ್ದ 23 ಎಕರೆ ಭೂಮಿ ಖಾಸಗಿಯವರಿಗೆ ಸೇರಿದ್ದಾಗಿದ್ದರೆ, ಇನ್ನೊಂದು ಭಾಗದಲ್ಲಿ ವಿಮಾನ ತಂಗುದಾಣಕ್ಕೆ ಸೇರಿದ 23 ಎಕರೆ ಭೂಮಿ ಇದೆ.

'ರಾಯಚೂರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿಲ್ಲ': ಬಜೆಟ್ ಬಗ್ಗೆ ಕಾಂಗ್ರೆಸ್ ಅಸಮಾಧಾನ'ರಾಯಚೂರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿಲ್ಲ': ಬಜೆಟ್ ಬಗ್ಗೆ ಕಾಂಗ್ರೆಸ್ ಅಸಮಾಧಾನ

ಹೀಗಾಗಿ ವಿಮಾನ ನಿಲ್ದಾಣಕ್ಕೆ ಬೇಕಾಗುವ 315 ಎಕರೆ ಭೂಮಿ ಸರಿದೂಗಿಸಲು ಖಾಸಗಿಯವರ 23 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಸರಿಪಡಿಸಲು ನಿರ್ಧರಿಸಲಾಗಿದೆ ಎಂದರು.

23 acre land acquisition for Raichur Airport

ಸರ್ಕಾರಕ್ಕೆ ಪತ್ರ:

ಜಿಲ್ಲೆಯಲ್ಲಿ 2009ರಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ಪ್ರವಾಹದಿಂದ ಪುನರ್‌ವಸತಿಗೊಂಡ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಬೇಕಾಗುವ ಅಗತ್ಯ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರರಿಂದ ಮಾಹಿತಿ ಪಡೆದು ಯಾವ ತಾಲೂಕಿನ ಗ್ರಾಮಗಳಿಗೆ ಮೂಲ ಸೌಕರ್ಯಕ್ಕೆ ಎಷ್ಟು ಅನುದಾನ ಬೇಕಾಗುತ್ತದೆ ಎಂಬುದರ ಮಾಹಿತಿ ಪಡೆದು ಪತ್ರದಲ್ಲಿ ವಿವರಿಸಿಬರೆಯುವುದಾಗಿ ಹೇಳಿದರು.

ಕಡತ ವಿಲೇವಾರಿಗೆ ಚುರುಕು:

ತಮ್ಮ ಕಚೇರಿಯಲ್ಲಿ ಯಾವುದೆ ಕಡತಗಳು ವಿಳಂಬವಾಗದಂತೆ ವಿಲೇವಾರಿಯಾಗಲು ಅಧೀನ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ತಿಳಿಸಿದರು.

23 acre land acquisition for Raichur Airport

ನನ್ನ ಸಹಿಗಾಗಿ ಇರುವ ಯಾವುದೇ ಕಡತಗಳು ತಮ್ಮ ಬಳಿ ಇಟ್ಟುಕೊಳ್ಳದೆ ಅಂದಿನ ಕಡತ ಅಂದೆ ನನ್ನ ಬಳಿ ರವಾನಿಸಿ ಸಹಿ ಪಡೆಯಬೇಕು. ಆದರೆ , ಅದು ಬಿಟ್ಟು ನನ್ನ ಬಳಿ ಕಡತ ತೆಗೆದುಕೊಂಡು ಹೋದರೆ ಬೇಜಾರು, ಬಯ್ಯತ್ತಾರೆ ಎನ್ನುವ ನೆಪ ಹೇಲದೆ ಕಡತಗಳು ಸಹಿಗೆ ಮಂಡಿಸಬೇಕು ಎಂದುಸೂಚನೆ ನೀಡುವುದಾಗಿ ಪುನರುಚ್ಚರಿಸಿದರು.

ಕಂದಾಯ ಕಾರ್ಯಕ್ಕೆ ಆದ್ಯತೆ:

ಜಿಲ್ಲೆಯಲ್ಲಿ 1956ನೇ ಸಾಲಿನಲ್ಲಿ ತುಂಗಭದ್ರಾ ಎಡದಂಡೆಗೆ ಸ್ಔಆಧೀನಪಡಿಸಿಕೊಂಡ ಭೂಮಿ ಇನ್ನೂ ಸರ್ಕಾರದ ಹೆಸರಿಗೆ ಆಗಿಲ್ಲ. ಹೀಗಾಗಿ ಸರ್ಕಾರ ಪುನರ್ ವಸತಿಗೆ ಸೇರಿದಂತೆ ವಿವಿಧ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಂಡ ಖಾಸಗಿ ಭೂಮಿಯನ್ನು ಸಂಬಂಧಪಟ್ಟ ಇಆಳಾಕೆಗೆ ಅಥವಾ ಸರ್ಕಾರ ಎಂದು ನಮೂದಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.

English summary
A decision has been taken to acquire or purchase 23 acres of land required for the construction of Raichur Green Field Airport, said District Collector L. Chandra Shekhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X