• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅತ್ಯಾಚಾರ ದೂರು ದಾಖಲಿಸಲು 800ಕಿ.ಮೀ ದೂರ ಪ್ರಯಾಣಿಸಿದ ಯುವತಿ

|

ನಾಗ್ಪುರ, ಅಕ್ಟೋಬರ್ 05: ಅತ್ಯಾಚಾರದ ಕುರಿತು ದೂರು ದಾಖಲಿಸಲು ಯುವತಿಯೊಬ್ಬಳು 800 ಕಿ.ಮೀ ದೂರ ಪ್ರಯಾಣಿಸಿದ ಘಟನೆ ನಡೆದಿದೆ.

22 ವರ್ಷದ ಯುವತಿ ಲಕ್ನೋನಿಂದ ಮಹಾರಾಷ್ಟ್ರದ ನಾಗ್ಪುರಕ್ಕೆ ತೆರಳಿ ಅತ್ಯಾಚಾರ ದೂರು ದಾಖಲಿಸಿದ್ದಾಳೆ.ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರನ್ನು ಭೇಟಿ ಮಾಡದಂತೆ ಆರೋಪಿ ಬೆದರಿಕೆ ಹಾಕಿದ್ದ ಹಿನ್ನಲೆಯಲ್ಲಿ ಸ್ನೇಹಿತನ ಸಹಾಯದಿಂದ ನಾಗ್ಪುರಕ್ಕೆ ಬಂದು ದೂರು ಸಲ್ಲಿಸಿದ್ದಾಳೆ.

ಹತ್ರಾಸ್ ಸಂತ್ರಸ್ತೆ ಸಹೋದರನ ಭದ್ರತೆಗೆ ಇಬ್ಬರು ಗನ್ ಮ್ಯಾನ್!

ಯಾರು ಬೇಕಾದರೂ ದೇಶದ ಯಾವ ಮೂಲೆಯಲ್ಲೂ ದೂರು ಸಲ್ಲಿಸಬಹುದು, ಬಳಿಕ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಆ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ಇದನ್ನು ತಿಳಿದಿದ್ದ ಯುವತಿ 800 ಕಿ.ಮೀ ಪ್ರಯಾಣ ಬೆಳೆಸಿ ದೂರು ದಾಖಲಿಸಿದ್ದಾಳೆ.

ದೂರಿನ ಪ್ರಕಾರ ಆಕೆ 2018ರಲ್ಲಿ ನೇಪಾಳದಿಂದ ಕೆಲಸವನ್ನು ಅರಸಿ ಭಾರತಕ್ಕೆ ಬಂದಿದ್ದಳು.ಈ ಮಾರ್ಚ್ ತಿಂಗಳವರೆಗೆ ತನ್ನ ಸ್ನೇಹಿತೆಯ ಫ್ಲ್ಯಾಟ್‌ನಲ್ಲಿ ತಂಗಿದ್ದಳು. ಆಕೆಯ ಸ್ನೇಹಿತೆ ಆರೋಪಿಯನ್ನು ಭೇಟಿ ಮಾಡಿಸಿದ್ದಳು. ಆತ ಲಕ್ನೋ ಮೂಲದವನಾಗಿದ್ದರೂ ದುಬೈನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ.

ಬಳಿಕ ಸಂತ್ರಸ್ತೆಯಿಂದ 1.5 ಲಕ್ಷವನ್ನು ಆತ ಪಡೆದಿದ್ದ, ವಾಪಸ್ ಕೇಳಿದರೆ ನೀಡಿರಲಿಲ್ಲ, ಬಳಿಕ ಆಕೆಯ ಮೇಲೆ ಹಲ್ಲೆಯನ್ನೂ ನಡೆಸಿದ್ದ. ಬಳಿಕ ಹಣ ನೀಡುವುದಾಗಿ ಕರೆಸಿಕೊಂಡು ನಿದ್ರೆ ಮಾತ್ರೆ ತಿನ್ನಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ಎಂದು ದೂರಲಾಗಿದೆ.

ಬಳಿಕ ಒಂದೊಮ್ಮೆ ಆತನ ಬಗ್ಗೆ ದೂರು ನೀಡಿದರೆ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಯುವತಿ ಹೇಗೋ ಮಾಡಿ ಲಕ್ನೋನಿಂದ ಓಡಿಹೋಗಿ ನಾಗ್ಪುರ ಸೇರುವಲ್ಲಿ ಯಶಸ್ವಿಯಾದಳು.

ಇದೀಗ ಪೊಲೀಸರು ಲಕ್ನೋ ಪೊಲೀಸರಿಗೆ ಪ್ರಕರಣ ದಾಖಲಿಸುವಂತೆ ಪತ್ರ ರವಾನಿಸಿದ್ದಾರೆ ಎಂಬುದು ತಿಳಿದುಬಂದಿದೆ.

English summary
A 22-year-old Nepalese woman travelled all the way from Lucknow to file a rape case in Nagpur in Maharashtra against a man, police said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X