ಶಬನಾ ಆಜ್ಮಿ ಕಾರು ಅಪಘಾತ: ಚಾಲಕನ ವಿರುದ್ಧ ಎಫ್ಐಆರ್

ಮಂಬೈ, ಜನವರಿ 19: ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ನಟಿ ಶಬನಾ ಆಜ್ಮಿ ಅವರಿದ್ದ ಕಾರು ಅಪಘಾತವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಅಮ್ಲೇಶ್ ಯೋಗೇಂದ್ರ ಕಾಮತ್ ವಿರುದ್ಧ ರಾಯಗಢ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಕಾರು- ಟ್ರಕ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ನಟಿ ಶಬನಾ ಆಜ್ಮಿ ಮತ್ತು ಕಾರು ಚಾಲಕ ಅಮ್ಲೇಶ್ ಕಾಮತ್ ಗಾಯಗೊಂಡಿದ್ದು, ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ಮೊದಲಿಗೆ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ನಂತರ ಅಂಧೇರಿ ಉಪನಗರದ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕ ಅಮ್ಲೇಶ್ ಯೋಗೇಂದ್ರ ಕಾಮತ್ ನಿರ್ಲಕ್ಷ್ಯದಿಂಡ ವಾಹನ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Shabana Azmi car accident: FIR against driver for rash driving

ಟ್ರಕ್ ಚಾಲಕ ರಾಜೇಶ್ ಪಾಂಡುರಂಗ್ ಶಿಂಧೆ ನೀಡಿದ ದೂರಿನ ಮೇರೆಗೆ ಚಾಲಕ ಅಮ್ಲೇಶ್ ಕಾಮತ್ ವಿರುದ್ಧ ಐಪಿಸಿ ಸೆಕ್ಷನ್ 279, 337 ಹಾಗೂ ಮೋಟಾರು ವಾಹನ ಕಾಯ್ದೆಯ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಾಗಿ, ಎಫ್ಐಆರ್ ಹಾಕಲಾಗಿದೆ.

ಮುಂಬೈ- ಪುಣೆ ಎಕ್ಸ್ ಪ್ರೆಸ್ ವೇ ಖಾಲಾಪುರ ಟೋಲ್ ಬೂತ್ ಬಳಿ ಟಾಟಾ ಸಫಾರಿ ಕಾರು ಚಲಿಸುತ್ತಿದ್ದಾಗ ಚಾಲಕನ ಪಕ್ಕದಲ್ಲಿ ನಟಿ ಶಬನಾ ಕುಳಿತಿದ್ದರು. ಆಜ್ಮಿ ಅವರ ಪತಿ ಜಾವೇದ್ ಅಖ್ತರ್ ಅವರು ಆಡಿ ಕಾರಿನಲ್ಲಿ ಬರುತ್ತಿದ್ದರು. ಇತ್ತೀಚೆಗೆ 75ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಆಜ್ಮಿ ಅವರು ಸಂಭ್ರಮದ ನಂತರ ಅಪಘಾತಕ್ಕೀಡಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+