ಸೆರಂ ಇನ್‌ಸ್ಟಿಟ್ಯೂಟ್‌ನಲ್ಲಿ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಉತ್ಪಾದನೆ

ಪುಣೆ, ಜೂನ್ 04; ಸೆರಂ ಇನ್‌ಸ್ಟಿಟ್ಯೂಟ್‌ನಲ್ಲಿ ರಷ್ಯಾದ ಲಸಿಕೆಯಾದ ಸ್ಪುಟ್ನಿಕ್-ವಿ ತಯಾರಿಸಲು ಭಾರತೀಯ ಔಷಧ ನಿಯಂತ್ರಕರು ಒಪ್ಪಿಗೆ ಕೊಟ್ಟಿದ್ದಾರೆ. ಪುಣೆಯ ಪ್ರಯೋಗಾಲಯದಲ್ಲಿ ಸ್ಪುಟ್ನಿಕ್ ಲಸಿಕೆ ಪರೀಕ್ಷೆ, ವಿಶ್ಲೇಷಣೆ ಮತ್ತು ಉತ್ಪಾದನೆ ನಡೆಯಲಿದೆ.

ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ವಕ್ತಾರರು ಶುಕ್ರವಾರ ಈ ಕುರಿತು ಮಾಹಿತಿ ನೀಡಿದ್ದಾರೆ. "ನಾವು ಸ್ಪುಟ್ನಿಕ್-ವಿ ಉತ್ಪಾದನೆಗೆ ಪ್ರಾಥಮಿಕ ಅನುಮೋದನೆ ಪಡೆದಿದ್ದೇವೆ. ಉತ್ಪಾದನೆಗೆ ಹಲವು ತಿಂಗಳು ಬೇಕು, ಈ ಸಮಯದಲ್ಲಿ ನಮ್ಮ ಆದ್ಯತೆ ಕೋವಿಶೀಲ್ಡ್ ಉತ್ಪಾದನೆ ಮೇಲಿರುತ್ತದೆ" ಎಂದು ಹೇಳಿದ್ದಾರೆ.

ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಈಗಾಗಲೇ ಭಾರತದಲ್ಲಿ ಲಭ್ಯವಿದೆ. ಹೈದರಾಬಾದ್‌ನಲ್ಲಿ ಮೇ 14ರಂದು ಮೊದಲ ಡೋಸ್ ನೀಡಲಾಗಿದೆ. ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ದೇಶದಲ್ಲಿ ಲಸಿಕೆ ವಿತರಣೆ ಮಾಡಲಿದೆ.

Serum Institute Got Permission To Make Sputnik V

ಭಾರತದಲ್ಲಿ ಪ್ರಸ್ತುತ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಇವುಗಳಿಗೆ ಹೋಲಿಕೆ ಮಾಡಿದರೆ ಸ್ಪುಟ್ನಿಕ್-ವಿ ಶೇ 91.6ರಷ್ಟು ಪರಿಣಾಮಕಾರಿಯಾಗಿದೆ. ಸ್ಪುಟ್ನಿಕ್ ಲಸಿಕೆಯಲ್ಲಿ 2 ವಿಧಗಳಿದ್ದು ಒಂದು ಮತ್ತು 2 ಡೋಸ್ ಲಸಿಕೆ ಲಭ್ಯವಿದೆ. ಪ್ರಸ್ತುತ ಭಾರತದಲ್ಲಿ 2 ಡೋಸ್‌ನ ಲಸಿಕೆ ಲಭ್ಯವಿದೆ.

ಕೋವಿಡ್ ವಿರುದ್ಧದ ಹೋರಾಟಕ್ಕೆ ಲಸಿಕೆ ಸಿದ್ಧಪಡಿಸಿರುವ ರಷ್ಯಾ ಸ್ಪುಟ್ನಿಕ್-ವಿ ಎಂದು ಉಪಗ್ರಹವೊಂದರ ಹೆಸರನ್ನು ಅದಕ್ಕೆ ಇಟ್ಟು ನೋಂದಣಿ ಮಾಡಿದೆ. ಸುಮಾರು 65 ದೇಶದಲ್ಲಿ ಈ ಲಸಿಕೆಯನ್ನು ಹಂಚಿಕೆ ಮಾಡಲಾಗಿದೆ.

ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ದೇಶದ ಅತಿ ದೊಡ್ಡ ಲಸಿಕೆ ಉತ್ಪಾದನಾ ಕಂಪನಿಯಾಗಿದೆ. ರಷ್ಯಾ ಮೂಲದ ಸ್ಪುಟ್ನಿಕ್-ವಿ ಉತ್ಪಾದಿಸುವ ಉದ್ದೇಶದಿಂದ ಅನುಮತಿ ನೀಡಬೇಕು ಎಂದು ಕೇಂದ್ರ ಔಷಧಿಯ ನಿಯಂತ್ರಕ ಮಂಡಳಿಗೆ ಅರ್ಜಿ ಸಲ್ಲಿಸಿತ್ತು.

ಜೂನ್ ತಿಂಗಳಿನಿಂದ ಸೆರಂ ಇನ್‌ಸ್ಟಿಟ್ಯೂಟ್ ಪ್ರತಿ ತಿಂಗಳು 100 ಮಿಲಿಯನ್ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುವ ನಿರೀಕ್ಷೆ ಇದೆ. ಭಾರತ ರಷ್ಯಾದಿಂದ ಈಗಾಗಲೇ 3 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಸಿಕೆಯನ್ನು ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+