3 ರೂಪಾಯಿ ಒಡೆಯನಿಗೆ ಕಾಲಡಿ ಸಿಕ್ಕದ್ದು 40,000! ಪಡೆದಿದ್ದು ಏಳೇ ರೂಪಾಯಿ!

ಪುಣೆ, ನವೆಂಬರ್ 04: ಮಹಾರಾಷ್ಟ್ರದ ಸತಾರಾ ಎಂಬಲ್ಲಿ ವ್ಯಕ್ತಿಯೊಬ್ಬ ತನಗೆ ಸಿಕ್ಕ 40,000 ರೂಪಾಯಿಗಳಲ್ಲಿ ಕೇವಲ 7 ರೂಪಾಯಿಯನ್ನು ಮಾತ್ರ ಪಡೆದು, ಮಿಕ್ಕಿದ್ದನ್ನು ಅದರ ಒಡೆಯನಿಗೆ ತಲುಪಿಸಿದ ಅಪರೂಪದ ಘಟನೆ ನಡೆದಿದೆ.

ನಡೆದಿದ್ದಿಷ್ಟು: ಧಾನಜಿ ಜಗ್ದಲೆ ಎಂಬ ಬಡ ವ್ಯಕ್ತಿಯೊಬ್ಬರು ಬಸ್ ಸ್ಟಾಪಿಗೆ ಬಂದು ನಿಂತಾಗ ಜೇಬು ಮುಟ್ಟಿ ನೋದಿದರೆ ಅದರಲ್ಲಿದ್ದಿದ್ದು 3 ರೂಪಾಯಿ ಮಾತ್ರ, ಬಸ್ಸಿನಲ್ಲಿ ಊರಿಗೆ ಹೋಗುವುದಕ್ಕೆ ಅವರಿಗೆ ಬೇಕಿದ್ದಿದ್ದು 10 ರೂಪಾಯಿ. ಏನು ಮಾಡಬೇಕೆಂದೇ ತೋಚದೆ ನಿಂತಿದ್ದಾಗ ಕಾಲಡಿಯಲ್ಲೇ ಬ್ಯಾಗ್ ವೊಂದು ಬಿದ್ದಿದ್ದು ಕಾಣಿಸಿತ್ತು. ಕೂಡಲೇ ಅದನ್ನು ತೆಗೆದು ನೋಡಿದರೆ ಅದರಲ್ಲಿ 40,000 ರೂ. ಮೌಲ್ಯದ ಹೊಸ ಹೊಸ ನೋಟುಗಳಿದ್ದವು.

ಆದರೆ ಧಾನಜಿ ಜಗ್ದಲೆ ಅಲ್ಲಿ ಬಸ್ ಸ್ಟಾಪಿನಲ್ಲಿರುವರ ಬಳಿ ಎಲ್ಲ ಇದು ಯಾರ ಬ್ಯಾಗ್ ಎಂದು ವಿಚಾರಿಸಿ, ನಂತರ ಅಲ್ಲಿ ಸಪ್ಪೆ ಮುಖ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬರ ಬಳಿ ತೆರಳಿದ್ದಾರೆ. ಅವರ ಬಳಿಯೂ ಇದೇ ಪ್ರಶ್ನೆ ಕೇಳಿದಾಗ, ಹೌದು, ಅದೂ ತಮ್ಮದೇ ಬ್ಯಾಗ್ ಎಂದು ಅವರು ಹೇಳಿ, ಒಳಗೆ ಹಣವಿರುವುದನ್ನು ಖಚಿತಪಡಿಸಿಕೊಂಡು ಭಾವುಕರಾಗಿದ್ದಾರೆ.

Pune Man With Rs, 3 Finds 40,000 But Takes Only Rs

ಪತ್ನಿಯ ಆಪರೇಷನ್ ಗೆಂದು ಫೀಸ್ ಕಟ್ಟಲು ತೆಗೆದುಕೊಂಡು ಹೋಗುತ್ತಿದ್ದ ಹಣ ಅಚಾನಕ್ಕಾಗಿ ಬಿದ್ದು ಕಳಲೆದುಹೋಗಿತ್ತು.

ಧಾನಜಿ ಜಗ್ದಲೆ ಆ ಹಣವನ್ನು ತಂದು ಕೊಡುತ್ತಿದ್ದಂತೆಯೇ ಭಾವುಕರಾದ ಆ ವ್ಯಕ್ತಿ ಅದರಲ್ಲಿ 1000 ರೂಪಾಯಿಗಳನ್ನು ಅವ್ರಿಗೆ ಕೊಡಲು ಹೋದರು. ಆದರೆ ಧಾನಜಿ ಜಗ್ದಲೆ ತನಗೆ ಬಸ್ ಚಾರ್ಜಿಗೆ ಬೇಕಿದ್ದಿದ್ದು ಕೇವಲ ಹತ್ತು ರೂಪಾಯಿ. ನನ್ನ ಬಳಿ ಮೂರು ರೂಪಾಯಿ ಇದೆ. ಇನ್ನು ಏಳು ರೂಪಾಯಿ ಕೊಟ್ಟರೆ ಸಾಕೆಂದು ಕೇವಲ ಏಳು ರೂಪಾಯಿ ಪಡೆದು ಹೋಗಿದ್ದಾನೆ.

ಪ್ರಾಮಾಣಿಕತೆಗೆ ಧಾನಜಿ ಜಗ್ದಲೆ ಮತ್ತೊಂದು ಹೆಸರಾಗಿ ಕಂಡಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+