ಖಾಸಗಿ ಕಂಪನಿ ಉದ್ಯೋಗಿಗಳು ನಿಗೂಢ ಕಣ್ಮರೆ

ಪುಣೆ, ನ.6: ಜಾಹೀರಾತು ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದ್ದು ಈ ಬಗ್ಗೆ ಬುಧವಾರ ಮಹತ್ವದ ಸುಳಿವು ಸಿಕ್ಕಿದೆ. ನಾಲ್ವರ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಪುಣೆ ಪೊಲೀಸರು ಹೇಳಿದ್ದಾರೆ.

ಪುಣೆಯ ಕೊಥ್ರುಡ್ ನ ಭಾನ್ಸಾರಿ ಕಾಲೋನಿಯ ಜಾಹೀರಾತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬಳು ಯುವತಿ ಶ್ರುತಿಕಾ ಚಾಂದ್ವಾನಿ(27) ಹಾಗೂ ಮೂವರು ಯುವಕರು ಪ್ರಣವ್ ಲೆಲೆ(29), ಚಿಂತನ್ ಬುಚ್ (28) ಹಾಗೂ ಸಾಹಿಲ್ ಖುರೇಷಿ (28) ಗೋವಾಕ್ಕೆ ಕಳೆದ ಶುಕ್ರವಾರ ಪ್ರಯಾಣ ಹೊರಟಿದ್ದಾರೆ. ಆದರೆ, ಗೋವಾ ತಲುಪದೆ ಮಾರ್ಗದಲ್ಲೇ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಈ ಪೈಕಿ ಚಿಂತನ್ ಶವ ಇಂದು(ನ.6) ಪತ್ತೆಯಾಗಿದೆ.

ಗೋವಾದಲ್ಲಿ ರಜೆ ಕಳೆಯಲು ಮೂವರು ತೆರಳುವುದು ಮಾರ್ಗ ಮಧ್ಯೆ ಕೊಲ್ಹಾಪುರದಲ್ಲಿ ಚಾಂದ್ವನಿ ಇಳಿದುಕೊಂಡು ತನ್ನ ಮನೆಗೆ ಹೋಗುವುದು ಎಂದು ಪ್ಲ್ಯಾನ್ ಮಾಡಿಕೊಂಡಿದ್ದರು.

ಹ್ಯುಂಡೈ ಐ20 ವಾಹನ (MH-12/FY-4510) ಶನಿವಾರ ಮುಂಜಾನೆ 2.30 ರ ವೇಳೆಗೆ ಖೆದ್ ಶಿವಪುರ ಟೋಲ್ ಫ್ಲಾಜಾದ ಬಳಿ ಅವರು ಹೋಗಿರುವುದು ಸಿಸಿಟಿವಿ ಕೆಮೆರಾದಲ್ಲಿ ದಾಖಲಾಗಿದೆ. ಮತ್ತೆ ಅವರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮೊಬೈಲ್ ಸಂಖ್ಯೆಗಳು ನಾಟ್ ರೀಚಬಲ್ ಆಗಿದೆ ಎಂದು ಇನ್ಸ್ ಪೆಕ್ಟರ್ ಶ್ರೀಕಾಂತ್ ನವಾಲೆ ಹೇಳಿದ್ದಾರೆ.

Missing advertising professional found dead, 3 others untraceable

ತಕ್ಷಣವೇ ಪುಣೆಯ ಗ್ರಾಮೀಣ ಭಾಗ, ಸತಾರಾ, ಸಾಂಗ್ಲಿ ಕೊಲ್ಹಾಪುರ ಪೊಲೀಸ್ ಠಾಣೆಗಳಿಗೆ ಕರೆ ಮಾಡಿ ಅಪಘಾತ ಪ್ರಕರಣದ ಸುದ್ದಿಗಾಗಿ ಕಾದಿದ್ದಾರೆ. ಆದರೆ, ಯಾವುದೇ ಕಾರು ಅಪಘಾತ ಸುದ್ದಿ ಸಿಕಿಲ್ಲ. ನಂತರ ಶನಿವಾರದಿಂದ ಎರಡು ದಿನಗಳ ಕಾಲ ಹೆಲಿ ಕಾಪ್ಟರ್ ಬಳಸಿ ವರಾಂಧ ಘಾಟ್, ಮಹಾಬಲೇಶ್ವರ್ ಘಟ್ಟದ ಬಳಿ ಹುಡುಕಾಟ ನಡೆಸಿ ಸುಸ್ತಾಗಿದ್ದಾರೆ.

ನಂತರ ಇನ್ಸ್ ಪೆಕ್ಟರ್ ಮತ್ತೊಮ್ಮೆ ಕಾಲ್ ರೆಕಾರ್ಡ್ ಚೆಕ್ ಮಾಡಿದ್ದಾರೆ. ಶುಕ್ರವಾರ 10.30ಕ್ಕೆ ಎಲ್ಲರೂ ಭೇಟಿಯಾಗಿದ್ದಾರೆ ಬನೇರ್ 11 ಗಂಟೆಗೆ ಬಿಟ್ಟಿದ್ದಾರೆ. ಚಾಂದ್ವನಿ ಫೋನ್ ಮಾತ್ರ 2.45 ರ ತನಕ ಟ್ರೇಸ್ ಮಾಡಲಾಗಿದೆ ಅದರೆ, ನಂತರ ಯಾವುದೇ ಸಂಪರ್ಕ ಸಿಕ್ಕಿಲ್ಲ.

ಪ್ರಕರಣ ಚತುಶೃಂಗ ಪೊಲೀಸ್ ಠಾಣೆಯಿಂದ ಕೊಥ್ರುಡ್ ಠಾಣೆಗೆ ಬಂದಿದೆ. ತನಿಖೆ ಮೂಲಕ ತಿಳಿದು ಬಂದ ಅಂಶವೆಂದರೆ ನಾಲ್ವರು ಪುಣೆ ಬೆಂಗಳೂರು ಹೆದ್ದಾರಿಯ ಸತಾರಾ ಬಳಿಯ ಆನೆವಾಡಿ ಟೋಲ್ ಬಳಿ ತಲುಪಿಯೇ ಇಲ್ಲ. ನಂತರ ಹೆಲಿಕಾಪ್ಟರ್ ಮೊರೆ ಹೋಗಲಾಗಿದೆ. ಜಾಹೀರಾತು ಕಂಪನಿ ತನ್ನ ಉದ್ಯೋಗಿಗಳ ಹುಡುಕಾಟಕ್ಕೆ ನೆರವು ನೀಡಿ ಹೆಲಿಕಾಪ್ಟರ್ ಒದಗಿಸಿದೆ. 15 ಮಂದಿ ತಂಡ ನೀರಾ-ದೇವ್ ಘರ್ ಅಣೆಕಟ್ಟು ಪ್ರದೇಶದಲ್ಲಿ ಸತತ ಹುಡುಕಾಟ ನಡೆಸಿದ ಫಲವಾಗಿ ಬುಧವಾರ ಬೆಳಗ್ಗೆ ಸರೋಳಾ ಗ್ರಾಮದ ಬಳಿ ನೀರಾ ನದಿಯಲ್ಲಿ ಚಿಂತನ್ ಬುಚ್ ಶವ ಪತ್ತೆಯಾಗಿದೆ.

ಗುಜರಾತಿನ ವಡೋಧರಾ ಮೂಲದ ಚಿಂತನ್ ಬುಚ್ ಮದುವೆ ಡಿಸೆಂಬರ್ ನಲ್ಲಿ ನಿಶ್ಚಯವಾಗಿತ್ತು. ಖುರೇಷಿ, ಲೆಲೆ ಜತೆ ಅರ್ಜುನ್ ರೇಖಾ ಅಪಾರ್ಟ್ಮೆಂಟ್ ನಲ್ಲಿ ಬುಚ್ ನೆಲೆಸಿದ್ದ. ಈಗ ಮಿಕ್ಕ ಮೂವರಿಗಾಗಿ ಹುಡುಕಾಟ ಜಾರಿಯಲ್ಲಿದೆ. ಪುಣೆ ಬೆಂಗಳೂರು ಹೆದ್ದಾರಿ ನರಸಾಪುರ, ನೀರಾ ಸಾಸ್ವಡ್ ಸುತ್ತಮುತ್ತ ನಾಪತ್ತೆಯಾದವರ ಕುಟುಂಬಸ್ಥರು ಕೂಡಾ ಹುಡುಕಾಟ ನಡೆಸಿದ್ದಾರೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+