ಅಮ್ಮ ಸತ್ತಿದ್ರೆ ಖುಷಿ ಪಡ್ತೀಯಾ ಎಂದು ಪತ್ನಿಯನ್ನು ಮಹಡಿಯಿಂದ ತಳ್ಳಿದ ಪತಿ

ಕೊಲ್ಲಾಪುರ, ಮಾರ್ಚ್ 14: ಅತ್ತೆ ಸಾವಿನಿಂದ ನೊಂದು ಸೊಸೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಅಮ್ಮ ಸತ್ತಿದ್ದಾರೆ ಅದನ್ನು ನೋಡಿ ಖುಷಿ ಪುಡುತ್ತಿದ್ದೀಯಾ ಎಂದು ಪತ್ನಿಯನ್ನೇ ಮಹಡಿಯಿಂದ ನೂಕಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿತ್ತು.

ಮೂಲತಃ ಸಾಂಗಲಿ ಜಿಲ್ಲೆಯ ಬಾಗಣಿ ಗ್ರಾಮದ ಶುಭಾಂಗಿ ಸಂದೀಪ ಲೋಖಂಡೆ (35) ಎಂಬುವವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

Maharashtra Man Kills Wife Gloating Over His Mothers Death

ಆದರೆ ಪತಿ ತನ್ನ ತಾಯಿ ಸಾವಿನಿಂದ ನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಎಲ್ಲರನ್ನೂ ನಂಬಿಸುವ ಪ್ರಯತ್ನ ಮಾಡಿದ್ದ ಆದರೆ ಸಫಲವಾಗಿಲ್ಲ.

ಶುಭಾಂಗಿ ಅತ್ತೆ ಕ್ಯಾನ್ಸರ್ ಪೀಡಿತೆ ಮಾಲತಿ ಮಧುಕರ ಲೋಖಂಡೆ 70 ನಿಧನರಾಗಿದ್ದರು. ಅತ್ತೆ ತೀರಿಕೊಂಡ ಸುದ್ದಿ ಕೇಳಿ ಸೊಸೆ ಶುಭಾಂಗಿ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅತ್ತೆ- ಸೊಸೆ ಬಹಳ ಅನ್ಯೋನ್ಯವಾಗಿದ್ದು, ಅಗಲಿಕೆ ಸಹಿಸದೇ ಪತ್ನಿ ಸಾವಿಗೆ ಶರಣಾಗಿದ್ದಾಳೆ ಎಂದು ಪತಿ ಸಂದೀಪ ತಿಳಿಸಿದ್ದ. ಪೊಲೀಸರು ಕೂಡ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಆದರೆ ಪೊಲೀಸರು ಆಕೆಯ ಪತಿಯನ್ನು ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ. ಅತ್ತೆಯ ಸಾವಿನಿಂದ ದುಃಖ ಸಹಿಸದೆ ಸೊಸೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಅತ್ತೆ ತೀರಿಕೊಂಡ ಸುದ್ದಿ ತಿಳಿದು ಸಂತಸ ವ್ಯಕ್ತಪಡಿಸಿದ್ದರಿಂದ ಪತ್ನಿಯನ್ನು ಮೂರು ಅಂತಸ್ತಿನ ಬಂಗಲೆಯಿಂದ ನೂಕಿ ಹತ್ಯೆಗೈದಿರುವುದಾಗಿ ಆರೋಪಿ ಸಂದೀಪ ಒಪ್ಪಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+