'ಮುಂಜಾಗ್ರತೆ'ಗಾಗಿ ಪತಿಯೊಂದಿಗೆ ಪತ್ನಿಯಿಂದಲೂ ನಾಮಪತ್ರ ಸಲ್ಲಿಕೆ!

ಮುಂಬೈ, ಏಪ್ರಿಲ್ 5: ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಸುಜಯ್ ವಿಖೆ ಪಾಟೀಲ್ ಅಹ್ಮದ್‌ನಗರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಅದೇ ಕ್ಷೇತ್ರದಿಂದ ಅವರ ಪತ್ನಿಯೂ ನಾಮಪತ್ರ ಸಲ್ಲಿಸಿದ್ದಾರೆ.

ತಮ್ಮ ನಾಮಪತ್ರ ಸಲ್ಲಿಕೆಯನ್ನು ಮುಂಜಾಗ್ರತೆಯ ಕ್ರಮ ಎಂದು ಅವರ ಪತ್ನಿ ಧನಶ್ರೀ ಹೇಳಿಕೆ ನೀಡಿದ್ದಾರೆ. ಸುಜಯ್ ವಿಖೆ ಪಾಟೀಲ್ ಅವರ ನಾಮಪತ್ರದಲ್ಲಿ ಯಾವುದೇ ತಾಂತ್ರಿಕ ದೋಷಗಳು ಉಂಟಾಗಿ ತಿರಸ್ಕೃತವಾದರೆ ಎಂಬ ಕಾರಣಕ್ಕೆ ತಾವೂ ನಾಮಪತ್ರ ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ.

Lok Sabha elections 2019 bjp ahmednagar candidate sujay vikhe patils wife files nomination same seat

ಮಹಾರಾಷ್ಟ್ರದ ಅಹ್ಮದ್‌ನಗರ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಎನ್‌ಸಿಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಸೀಟು ಹಂಚಿಕೆಯಲ್ಲಿ ಅಹ್ಮದ್‌ನಗರ ಎನ್‌ಸಿಪಿ ಪಾಲಾಗುವುದನ್ನು ಖಂಡಿಸಿ ಸುಜಯ್ ಅವರು ಪಕ್ಷ ತ್ಯಜಿಸಿದ್ದರು. ಸುಜಯ್, ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷ ನಾಯಕರಾಗಿರುವ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಮಗ.

ಕಾಂಗ್ರೆಸ್ ತೊರೆದ ಪತಿಯ ಬೆಂಬಲವನ್ನು ಪತ್ನಿ ಧನಶ್ರೀ ಬೆಂಬಲಿಸಿದ್ದರು. ಅವರು ಬಿಜೆಪಿ ಸೇರುವ ನಿರ್ಧಾರವನ್ನು ಪತ್ನಿಯಾಗಿ ಬೆಂಬಲಿಸುತ್ತೇನೆ. ನನಗೆ ರಾಜಕಾರಣದಲ್ಲಿ ಆಸಕ್ತಿಯಿಲ್ಲ. ಮನೆಯಲ್ಲಿ ನಾವು ರಾಜಕಾರಣದ ಬಗ್ಗೆ ಚರ್ಚೆಯನ್ನೂ ನಡೆಸುವುದಿಲ್ಲ. ಹೀಗಾಗಿ ಯಾವುದೇ ಗೊಂದಲಗಳು ಉಂಟಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+