ಲಂಚದ ಆರೋಪದ ಮೇಲೆ ಆರ್ಮಿ ಕರ್ನಲ್ ಬಂಧಿಸಿದ ಸಿಬಿಐ

By: ವಿಕಾಸ್ ನಂಜಪ್ಪ
Subscribe to Oneindia Kannada

ಪುಣೆ, ಜೂನ್ 19: ಭಾರತೀಯ ಸೇನೆಯ ಕರ್ನಲ್ ರೊಬ್ಬರನ್ನು ಸಿಬಿಐ ತಂಡವು ಭಾನುವಾರದಂದು ಬಂಧಿಸಿದೆ. ಕರ್ನಲ್ ಅವರ ಮೇಲೆ 50,000 ರು ಲಂಚ ಪಡೆದ ಆರೋಪ ಕೇಳಿ ಬಂದಿದೆ.

ಆರ್ಮಿ ಫೀಲ್ಡ್ ಡೇ ಆಯೋಜನೆಗೆ ಬೇಕಾದ ಸಲಕರಣೆಗಳನ್ನು ಒದಗಿಸಲು ಎರಡು ಬಾರಿ 50 ಸಾವಿರ ರು ಲಂಚ ಪಡೆದಿದ್ದಾರೆ. ಎರಡನೇ ಬಾರಿ ಲಂಚ ಪಡೆಯುವಾಗ ತನಿಖಾ ತಂಡಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

CBI arrests Indian Army Colonel on graft charges

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರನ್ನು ಬಂಧಿಸಲಾಗಿದೆ. ಕರ್ನಲ್ ಶೈಬಾಲ್ ಕುಮಾರ್, ಕೋಲ್ಕತ್ತಾದ ಯೋಜನಾ ಹಾಗೂ ಇಂಜಿನಿಯರಿಂಗ್ ಘಟಕ ಅವರನ್ನು ಪ್ರಮುಖ ಆರೋಪಿಯಾಗಿ ಹೆಸರಿಸಲಾಗಿದೆ. ಪುಣೆ ಮೂಲದ ಎಕ್ಸ್ ಟೆಕ್ ಎಕ್ವಿಪ್ಮೆಂಟ್ ಪ್ರೈ ಲಿಮಿಟೆಡ್ ಸಂಸ್ಥೆಯ ಶರತ್ ನಾಥ್ (ವ್ಯವಸ್ಥಾಪಕ ನಿರ್ದೇಶಕ), ವಿಜಯ್ ನಾಯ್ಡು (ನಿರ್ದೇಶಕ) ಹಾಗೂ ಅಮಿತ್ ರಾಯ್ (ಪ್ರತಿನಿಧಿ) ಅವರನ್ನು ವಶಕ್ಕೆ ಪಡೆಯಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
An Army Colonel was on Sunday arrested by the Central Bureau of Investigation on graft charges. It is alleged that the Colonel had taken a bribe of Rs 50,000 from a Pune based company for the supply of a product which is sent to all field formations of the Indian Army.
Please Wait while comments are loading...