ಪುಣೆಯಲ್ಲಿ ಇರಿತಕ್ಕೆ ಒಳಗಾಗಿದ್ದ ಸಲಿಂಗಿ ಸಂಗಾತಿ ಆಸ್ಪತ್ರೆಯಿಂದ ಪರಾರಿ
ಪುಣೆ, ಸೆಪ್ಟೆಂಬರ್ 24: ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ಸಲಿಂಗಿ ಗೆಳೆಯನಿಂದಲೇ ಚೂಪಾದ ಆಯುಧದಿಂದ ಇರಿತಕ್ಕೆ ಒಳಗಾಗಿದ್ದ ವ್ಯಕ್ತಿಯ ಬಗ್ಗೆ ಸುದ್ದಿಯನ್ನು ಓದಿದ ನೆನಪಿದೆಯಾ? ಸೆಪ್ಟೆಂಬರ್ ಹತ್ತೊಂಬತ್ತನೇ ತಾರೀಕು ಪುಣೆಯಲ್ಲಿ ಈ ಘಟನೆ ನಡೆದಿತ್ತು. 46 ವರ್ಷದ ಪುರುಷನ ಮೇಲೆ 23 ವರ್ಷದ ಯುವಕ ಆತನದೇ ಮನೆಯಲ್ಲಿ ಚೂಪಾದ ಆಯುಧದಿಂದ ತಿವಿದಿದ್ದ.
ಆ ನಂತರ ಯುವಕನನ್ನು ಪೊಲೀಸರು ಬಂಧಿಸಿದ್ದರು. ಇನ್ನು ಆತನನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ಇರಿತಕ್ಕೆ ಒಳಗಾಗಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಇದೀಗ ಆತ ಪೊಲೀಸ್ ವಶದಲ್ಲಿ ಇರುವಾಗಲೇ- ಆಸ್ಪತ್ರೆಯಿಂದಲೇ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಅಂದಹಾಗೆ ಈ ಸಲಿಂಗಿಗಳ ಮಧ್ಯೆ ಆ ಪರಿ ಜಗಳ ಆಗಲು ಕಾರಣ ಏನು ಗೊತ್ತೆ? ಇಬ್ಬರೂ ಸಲಿಂಗಿ ಸಂಗಾತಿಗಳು. ಹಿಂದಿನ ರಾತ್ರಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆ ನಂತರ ಮಧ್ಯರಾತ್ರಿ ಹೊತ್ತಿಗೆ 46 ವರ್ಷದ ವ್ಯಕ್ತಿ ಮತ್ತೊಮ್ಮೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಅದಕ್ಕೆ ಯುವಕ ನಿರಾಕರಿಸಿದ್ದಾನೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು, ಜಗಳವಾಗಿದೆ.

ಸಿಟ್ಟಿಗೆದ್ದ ಯುವಕ ಕೊನೆಗೆ ಚೂಪಾದ ಆಯುಧದಿಂದ ಚುಚ್ಚಿದ್ದಾನೆ. ಆತನ ವಿರುದ್ಧ ಕೊಲೆಯತ್ನದ ಪ್ರಕರಣ ಕೂಡ ದಾಖಲಿಸಲಾಗಿದೆ. ಈ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೇ ನಾಪತ್ತೆಯಾಗಿ, ಮತ್ತೆ ಈ ಪ್ರಕರಣ ಸುದ್ದಿ ಆಗಲು ಕಾರಣವಾಗಿದೆ.












Click it and Unblock the Notifications