ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಇದ್ದ ಕಾರು ಅಪಘಾತ
ಪಾಟ್ನಾ, ಮೇ 31: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅವರಿದ್ದ ಕಾರು ಅಪಘಾತಕ್ಕೀಡಾಗಿದೆ.
ಶುಕ್ರವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು ಅಪಘಾತದಲ್ಲಿ ತೇಜ್ ಪ್ರತಾಪ್‌ಗೆ ಗಂಭೀರ ಗಾಯಗಳಾಗಿವೆ.ಪಾಟ್ನಾ ಇಕೋ ಪಾರ್ಕ್ ಬಳಿ ಅಪಘಾತ ಸಂಭವಿಸಿದೆ. ತೇಜ್ ಮಾರುತಿ ಬ್ರೇಜಾ ಕಾರಿನಲ್ಲಿ ತೆರಳುತ್ತಿದ್ದರು. ನಾಲ್ಕು ಮಂದಿ ಇದ್ದ ಕಾರಿಗೆ ಹೋಗಿ ಡಿಕ್ಕಿ ಹೊಡೆದಿದೆ , ಎರಡೂ ಕಾರುಗಳು ಡಿಕ್ಕಿಯ ರಭಸಕ್ಕೆ ನಜ್ಜು ಗುಜ್ಜಾಗಿದೆ. ತೇಜ್ ಪ್ರತಾಪ್ ಕಾಲಿಗೆ ಏಟಾಗಿದೆ. ಚಾಲಕ ಸೇರಿ ನಾಲ್ಕು ಮಂದಿಗೆ ಗಂಭೀರ ಗಾಯಳಾಗಿವೆ.













Click it and Unblock the Notifications