• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಚ್ಛೇದನದ ದೂರಲ್ಲಿ ಲಾಲೂ ಮಗನನ್ನು ಮಾದಕ ವ್ಯಸನಿ ಎಂದ ಐಶ್ವರ್ಯಾ

|

ಪಾಟ್ನಾ, ಆಗಸ್ಟ್ 6: ತೇಜ್ ಪ್ರತಾಪ್ ಮರಿಜುವಾನ ವ್ಯಸನಿ. ಆತ ನನ್ನನ್ನು ಶೋಷಣೆ ಮಾಡುತ್ತಿದ್ದರು ಎಂದು ಬಿಹಾರದ ಮಾಜಿ ಆರೋಗ್ಯ ಸಚಿವರೂ ಆದ ತೇಜ್ ಪ್ರತಾಪ್ ವಿರುದ್ಧ ಪತ್ನಿ ಕೋರ್ಟ್ ನಲ್ಲಿ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಮಾಡಿದ್ದಾರೆ. ಐಶ್ವರ್ಯಾ ರೈ ಸೆಕ್ಷನ್ 26 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಮಹಿಳೆಯರ ವಿರುದ್ಧದ ಕೌಟುಂಬಿಕ ಹಿಂಸೆ ವಿರೋಧಿ ಕಾಯ್ದೆ 2005ರ ಅಡಿಯಲ್ಲಿ ತನಗೆ ರಕ್ಷಣೆ ದೊರಕಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಐಶ್ವರ್ಯಾ ಹೇಳಿಕೊಂಡಿರುವ ಪ್ರಕಾರ: ತೇಜ್ ಮಾದಕ ವ್ಯಸನಿ ಎಂಬುದು ಗೊತ್ತಾಯಿತು. ಆತ ಮಾದಕ ಪದಾರ್ಥ ಸೇವನೆ ಮಾಡುತ್ತಿದ್ದರು. ಹಾಗೆ ಸೇವನೆ ಮಾಡಿದಾಗ ತಾನು ಶಿವನ ಅವತಾರ ಎನ್ನುತ್ತಿದ್ದುದಾಗಿ ಅಲವತ್ತುಕೊಂಡಿದ್ದಾರೆ.

ಶಿವನ ವೇಷಧಾರಿ, ವಿವಾದಿತ ರಾಜಕಾರಣಿ ಪುತ್ರನಾರು?ಶಿವನ ವೇಷಧಾರಿ, ವಿವಾದಿತ ರಾಜಕಾರಣಿ ಪುತ್ರನಾರು?

"ತೇಜ್ ಪ್ರತಾಪ್ ಅವರು ರಾಧಾ ಹಾಗೂ ಕೃಷ್ಣ ಥರ ವೇಷ ಧರಿಸುತ್ತಿದ್ದರು. ನನಗೆ ಮದುವೆ ಆದ ನಂತರ ಗೊತ್ತಾಗಿದ್ದೇನೆಂದರೆ, ಆತ ದೇವ- ದೇವತೆಗಳ ರೀತಿ ದಿರಿಸು ಧರಿಸುತ್ತಿದ್ದರು. ಅಷ್ಟೇ ಅಲ್ಲ, ಮಾದಕ ಪದಾರ್ಥ ಸೇವನೆ ನಂತರ ತೇಜ್ ಘಾಗ್ರಾ ಹಾಗೂ ಚೋಲಿ ಧರಿಸುತ್ತಿದ್ದರು. ರಾಧಾ ರೀತಿ ಸಿಂಗರಿಸಿಕೊಳ್ಳುತ್ತಿದ್ದರು. ಅಲಂಕಾರ ಮಾಡಿಕೊಂಡು, ವಿಗ್ ಧರಿಸುತ್ತಿದ್ದರು" ಎಂದು ಐಶ್ವರ್ಯಾ ಆರೋಪಿಸಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಹಾಗೂ ರಾಬ್ರಿ ದೇವಿ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಕಳೆದ ವರ್ಷ ಮೇ ತಿಂಗಳಲ್ಲಿ ಐಶ್ವರ್ಯಾರನ್ನು ವಿವಾಹ ಆಗಿದ್ದರು. ತನ್ನ ಪತಿಯ ಸಂಬಂಧಿಕರ ಗಮನಕ್ಕೂ ಈ ಬಗ್ಗೆ ಗಮನ ತಂದೆ. ಆದರೆ ಅವರಿಂದ ಯಾವ ಸಹಾಯವೂ ಆಗಲಿಲ್ಲ ಎಂದಿದ್ದಾರೆ.

"ತೇಜ್ ನ ನಡವಳಿಕೆ ಬಗ್ಗೆ ಅತ್ತೆ, ನಾದಿನಿಯ ಗಮನಕ್ಕೆ ತಂದೆ. ಇನ್ನು ಮುಂದೆ ಆತ ಹಾಗೆ ನಡೆದುಕೊಳ್ಳುವುದಿಲ್ಲ ಎಂದು ಅವರು ಭರವಸೆ ನೀಡಿದರು. ನನ್ನ ಅತ್ತೆ ಭಾವನಾತ್ಮಕವಾಗಿ ಸಮಾಧಾನ ಮಾಡಲು ಯತ್ನಿಸಿದರು. ಆದರೆ ತೇಜ್ ನಡವಳಿಕೆಯಲ್ಲಿ ಯಾವ ಬದಲಾವಣೆಯಲ್ಲಿ ಕಾಣಲಿಲ್ಲ" ಎಂದು ಐಶ್ವರ್ಯಾ ಹೇಳಿದ್ದಾರೆ.

ಐಶ್ವರ್ಯ ರೈರಿಂದ ವಿವಾಹ ವಿಚ್ಛೇದನ ಕೋರಿದ್ದ ಅರ್ಜಿ ವಾಪಸ್!ಐಶ್ವರ್ಯ ರೈರಿಂದ ವಿವಾಹ ವಿಚ್ಛೇದನ ಕೋರಿದ್ದ ಅರ್ಜಿ ವಾಪಸ್!

ಈ ರೀತಿ ವೇಷ ಹಾಕಿಕೊಳ್ಳಬೇಡಿ, ಮಾದಕ ಪದಾರ್ಥ ಸೇವಿಸಬೇಡಿ ಎಂದು ಐಶ್ವರ್ಯಾ ಹೇಳಿದ್ದರಂತೆ. ಅದಕ್ಕೆ ಆತ: ಗಾಂಜಾ ಎಂಬುದು ಶಿವನಿಗೆ ಅರ್ಪಣೆ. ಅದಕ್ಕೆ ನಾನು ಹೇಗೆ ಬೇಡ ಅನ್ನಲಿ. ಇನ್ನು ರಾಧಾನೇ ಕೃಷ್ಣ. ಕೃಷ್ಣನೇ ರಾಧಾ ಎಂದು ಸಮರ್ಥನೆ ನೀಡಿದ್ದರಂತೆ.

ಇನ್ನು ತನ್ನ ವಿದ್ಯಾಭ್ಯಾಸದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು ಎಂದು ದೂರು ನೀಡಿರುವ ಐಶ್ವರ್ಯಾ; "ನೀನು ಇರುವುದು ಅಡುಗೆ ಮಾಡುವುದಕ್ಕೆ, ಸಂಸಾರಕ್ಕೆ ಮಾತ್ರ ಎನ್ನುತ್ತಿದ್ದರು" ಎಂದು ಹೇಳಿಕೊಂಡಿದ್ದಾರೆ.

ದೂರಿನ ಸಾರಾಂಶದ ಪ್ರಕಾರ: ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಹಿಂಸೆಯ ಹೊರತಾಗಿಯೂ ತನ್ನ ಅತ್ತೆ- ಮಾವನ ಮನೆಯಲ್ಲಿ ವಾಸ ಇದ್ದುದಾಗಿ ಹಾಗೂ ನಿತ್ಯವೂ ಹಿಂಸೆ ಅನುಭವಿಸುತ್ತಿದ್ದುದಾಗಿ ಐಶ್ವರ್ಯಾ ಹೇಳಿಕೊಂಡಿದ್ದಾರೆ.

English summary
Tej Prtap Yadav is a drug addict. He harassed me, alleged by Tej wife Aishwarya Rai in her divorce application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X