ಐಶ್ವರ್ಯ ರೈ ಜೊತೆ ರಾಜಿಯಿಲ್ಲ, ಸುಳಿವು ನೀಡಿದ ತೇಜ್

ಪಾಟ್ನಾ, ನವೆಂಬರ್ 24: ಪತ್ನಿ ಐಶ್ವರ್ಯ ರೈ ಜೊತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಸುಳಿವನ್ನು ಆರ್ ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ನೀಡಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಪುತ್ರ ತೇಜ್ ಪ್ರತಾಪ್ ಇತ್ತೀಚೆಗಷ್ಟೇ ತಮ್ಮ ಪತ್ನಿ ಐಶ್ವರ್ಯ ರೈ ಅವರಿಗೆ ವಿಚ್ಛೇದನದ ನೋಟೀಸ್ ಕಳಿಸಿದ್ದರು.

Tej Pratap hints that he may not patch up with Aishwarya Rai

ಇದೀಗ ಟ್ವಿಟ್ಟರ್ ಮೂಲಕ ಮತ್ತೊಮ್ಮೆ ತಮ್ಮ ವಿಚ್ಛೇದನದ ಸೂಚನೆ ನೀಡಿರುವ ತೇಜ್ ಪ್ರತಾಪ್, 'ತಾವಿಬ್ಬರೂ ಮತ್ತೆ ಒಂದಾಗುವ ಪ್ರಶ್ನೆಯೇ ಇಲ್ಲ' ಎಂಬ ಸುಳಿವು ನೀಡಿದ್ದಾರೆ.

"ಪ್ರೀತಿಯ ದಾರ ಎಂದಿಗೂ ಹರಿಯದಿರಲಿ, ಅದು ಹರಿದರೆ ಮತ್ತೆ ಸೇರಿಸುವುದಕ್ಕೆ ಸಾಧ್ಯವೇ ಇಲ್ಲ" ಎಂಬರ್ಥದ ದ್ವಿಪದಿಯನ್ನು ತಮ್ಮ ಟ್ವಿಟ್ಟರ್ ನಲ್ಲಿ ತೇಜ್ ಪ್ರತಾಪ್ ಶೇರ್ ಮಾಡಿದ್ದಾರೆ. ಈ ಮೂಲಕ ತಾವು ಮತ್ತೆ ಐಶ್ವರ್ಯ ಜೊತೆ ಒಂದಾಗುವುದಿಲ್ಲ ಎಂಬ ಸುಳಿವು ನೀಡಿದ್ದಾರೆ.

ಕಳೆದ ಮೇ ತಿಂಗಳಿನಲ್ಲಿ ಐಶ್ವರ್ಯ ಅವರನ್ನು ತೇಜ್ ಪ್ರತಾಪ್ ಮದುವೆಯಾಗಿದ್ದರು. "ನಮ್ಮಿಬ್ಬರ ನಡುವೆ ಯಾವುದೇ ಹೊಂದಾಣಿಕೆಯಿಲ್ಲ. ಇಬ್ಬರೂ ಒಟ್ಟಾಗಿ ಬದುಕುವುದು ಸಾಧ್ಯವಿಲ್ಲದ ಮಾತು. ನಮ್ಮಿಬ್ಬರ ಕುಟುಂಬದವರು ತಮ್ಮ ರಾಜಕೀಯ ಉಪಯೋಗಕ್ಕಾಗಿ ನಮ್ಮಿಬ್ಬರ ಮದುವೆ ಮಾಡಿದರು" ಎಂದು ತೇಜ್ ಪ್ರತಾಪ್ ಇತ್ತೀಚೆಗೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+