• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ಚುನಾವಣಾ ಫಲಿತಾಂಶದ ಕುರಿತು ಬಗೆಬಗೆಯ ಹಾಸ್ಯ ಚಟಾಕಿ

|

ಪಾಟ್ನಾ, ನವೆಂಬರ್ 10: ಒಂದೆಡೆ ಬಿಹಾರ ಚುನಾವಣಾ ಫಲಿತಾಂಶದ ಬಗ್ಗ ಜನರು ಕುತೂಹಲರಾಗಿ ಕುಳಿತಿದ್ದರೆ, ಇನ್ನೊಂದೆಡೆ ಚುನಾವಣೆ, ನಾಯಕರ ಸುತ್ತ ಬಗೆಬಗೆಯ ಹಾಸ್ಯಗಳು ಹುಟ್ಟಿಕೊಂಡಿವೆ.

ಕೆಲವು ದಿನಗಳ ಹಿಂದಷ್ಟೇ ಅಮೆರಿಕ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ, ಅದಕ್ಕೂ ಮುನ್ನ ಮತ ಎಣಿಕೆ ನಿಲ್ಲಿಸಿಬಿಡಿ ಎಂದು ಹೇಳಿ ಡೊನಾಲ್ಡ್ ಟ್ರಂಪ್ ಹಾಸ್ಯಕ್ಕೆ ಗುರಿಯಾಗಿದ್ದರು.

Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

ಕೆಲವರು ಇವಿಎಂ ಯಂತ್ರವೇ ಸರಿ ಇಲ್ಲ ಎಂದರೆ ಇನ್ನೂ ಕೆಲವರು ಮತ ಎಣಿಕೆಯನ್ನು ನಿಲ್ಲಿಸಿ ಎಂದಿದ್ದಾರೆ, ಇನ್ನೂ ಕೆಲವರು ಎಕ್ಸಿಟ್ ಪೋಲ್‌ ತಪ್ಪಾಗಿರುವುದೇನು ಎಂದು ಕಂಡುಹಿಡಿಯುವುದರಲ್ಲಿದ್ದಾರೆ.

ಈಗಲೂ ಎನ್‌ಡಿಎ ಸರ್ಕಾರ ಬಹುಮತ ಪಡೆಯುವ ಎಲ್ಲಾ ಸಾಧ್ಯತೆಗಳಿರುವ ಕಾರಣ ಮತ ಎಣಿಕೆ ನಿಲ್ಲಿಸಿ ಎನ್ನುವ ಜೋಕ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಅಮೆರಿಕದಲ್ಲಿ ಮತ ಎಣಿಕೆ ಸಂದರ್ಭದಲ್ಲಿ ಜೋ ಬಿಡನ್ ಅವರು ಒಂದೊಂದು ಭಾಗದಲ್ಲಿ ಗೆಲ್ಲುತ್ತಾ ಬಂದಾಗಲೂ ಕೋಪಗೊಂಡ ಟ್ರಂಪ್ ಮತ ಎಣಿಕೆಯನ್ನು ನಿಲ್ಲಿಸುವಂತೆ ಹೇಳಿದ್ದರು.

ಇದೀಗ ಬಿಹಾರ ವಿಧಾನ ಸಭೆ ಚುನಾವಣಾ ಮತ ಎಣಿಕೆಯಲ್ಲೂ ಅಂತಹದ್ದೇ ಮಾತು ಕೇಳಿಬರುತ್ತಿದೆ. ಬಿಹಾರ ಚುನಾವಣೆಗೆ ಸಂಬಂಧಿಸಿದ ಕೆಲವು ಹಾಸ್ಯಭರಿತ ಟ್ವೀಟ್ ಇಲ್ಲದೆ.

ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಎನ್ನುವ ಕುತೂಹಲ

ಚುನಾವಣೆ ಫಲಿತಾಂಶ ತಡವಾಗುತ್ತೆ ಸ್ವಲ್ಪ ಹೊತ್ತು ಮಲಗುತ್ತೇನೆ

ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ, ಮತ ಎಣಿಕೆ ನಿಲ್ಲಿಸಿ ಎಂದು ಬಾಬು ರಾವ್ಲ ಎಂಬುವವರು ಹಾಸ್ಯ ಚಟಾಕಿ ಹಾರಿಸಿದ್ದಾರೆ

English summary
Bihar Election Results 2020: As Bihar wait for its chief minister. Twitter is full of hilarious real time reactions. Some are questioning EVMs some are screaming Stop the count .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X