ಬಿಹಾರದಲ್ಲಿ ಭೀಕರ ರೈಲು ದುರಂತ : ಸೀಮಾಂಚಲ ಎಕ್ಸ್ ಪ್ರೆಸ್ ಹಳಿತಪ್ಪಿ 6 ಸಾವು
ಪಟ್ನಾ, ಫೆಬ್ರವರಿ 03 : ದೆಹಲಿಗೆ ತೆರಳುತ್ತಿದ್ದ ಸೀಮಾಂಚಲ ಎಕ್ಸ್ ಪ್ರೆಸ್ ರೈಲು ವೈಶಾಲಿ ಬಳಿ ಹಳಿತಪ್ಪಿದ ಪರಿಣಾಮ ಭಾರೀ ದುರ್ಘಟನೆ ಸಂಭವಿಸಿದ್ದು, ಕನಿಷ್ಠ 6 ಜನರು ಸಾವಿಗೀಡಾಗಿದ್ದಾರೆ.
ದುರ್ಘಟನೆ ಭಾನುವಾರ ಬೆಳಗಿನ ಜಾವ 3.52ಕ್ಕೆ ಸಂಭವಿಸಿದ್ದು, 9 ಬೋಗಿಗಳು ಧರೆಗುರುಳಿವೆ. ರೈಲು ದೆಹಲಿಗೆ ತೆರಳುತ್ತಿತ್ತು. ರೈಲಿನಡಿ ಸಿಲುಕಿದವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ನಿಖರವಾದ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.
ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗಲೇ ಜವರಾಯ ಎರಗಿದ್ದಾನೆ. ಸೋನಪುರ ಡಿವಿಜನ್ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. 9 ಬೋಗಿಗಳಲ್ಲಿ ಒಂದು ಜನರಲ್ ಬೋಗಿ, ಮೂರು ಸ್ಲೀಪರ್ ಬೋಗಿ, ಒಂದು ಎಸಿ ಕೋಚ್ ಇದೆ ಎಂದು ತಿಳಿದುಬಂದಿದೆ. ಸೋನಪುರ ಮತ್ತು ಬರೌನಿಯಲ್ಲಿರುವ ವೈದ್ಯರ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ.
ಸೋನಪುರ ವಿಭಾಗ - 06158221645
ಹಾಜಿಪುರ - 06224272230
ಬರೌನಿ - 0627923222













Click it and Unblock the Notifications