• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಗನೇ, ಸಾಕು... ಮನೆಗೆ ವಾಪಸ್ ಬಾ! ರಾಬ್ಡಿ ದೇವಿ ಭಾವುಕ ಮನವಿ

|

ಪಾಟ್ನಾ, ಏಪ್ರಿಲ್ 13: "ಮಗನೇ, ಸಾಕು ಇದೆಲ್ಲ... ಮನೆಗೆ ವಾಪಸ್ ಬಾ" ಹಾಗೆಂದು ಭಾವುಕವಾಗಿ ಮನವಿ ಮಾಡಿದ್ದಾರೆ ಆರ್ ಜೆಡಿ ನಾಯಕಿ ರಾಬ್ಡಿದೇವಿ.

ಇತ್ತೀಚೆಗಷ್ಟೇ ತಮ್ಮ ಕುಟುಂಬವನ್ನು ತೊರೆದು ಬಿಹಾರ ರಾಜಧಾನಿ ಪಾಟ್ನಾದಲ್ಲಿ ನೆಲೆಸಿರುವ ತೇಜ್ ಪ್ರತಾಪ್, ಹೊಸ ಪಕ್ಷವನ್ನು ಕಟ್ಟಿದ್ದಾರೆ. ಆರ್ ಜೆಡಿ ತೊರೆದು ಲಾಲು ರಾಬ್ಡಿ ಮೋರ್ಚಾ ಎಂಬ ಪಕ್ಷವನ್ನು ಕಟ್ಟಿರುವ ತೇಜ್ ಪ್ರತಾಪ್ ಯಾದವ್ ನಡೆ ತಾಯಿ ರಾಬ್ಡಿ ದೇವಿ ಅವರಿಗೆ ಸಾಕಷ್ಟು ನೋವುಂಟು ಮಾಡಿದ್ದು, ತೇಜ್ ಪ್ರತಾಪ್ ಮತ್ತು ತೇಜಸ್ವಿ ಯಾದವ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇದು ಮಾಧ್ಯಮಗಳ ಸೃಷ್ಟಿಯಷ್ಟೇ ಎಂದು ಅವರು ಹೇಳಿದ್ದಾರೆ.

ಮಹಾಮೈತ್ರಿಕೂಟದ ಲಾಲೂ ಕನಸಿಗೆ ದೊಡ್ಡ ಮಗನೇ ಅಡ್ಡಿ

ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇವೆಲ್ಲಕ್ಕೂ ಬಿಜೆಪಿ ಮತ್ತು ಜೆಡಿಯು ದ ಕೆಲವು ನಾಯಕರು ಕಾರಣ ಎಂಬುದು ನನ್ನ ಅಭಿಪ್ರಾಯ ಎಂದು ರಾಬ್ಡಿ ದೇವಿ ಆರೋಪಿಸಿದ್ದಾರೆ.

"ನಾನು ಲಾಲೂ ಪ್ರಸಾದ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರ ಗೈರು ನನಗೆ ತೀವ್ರ ನೋವುಂಟು ಮಾಡಿದೆ. ಅವರು ನಮ್ಮ ಜೊತೆಯಲ್ಲೇ ಇದ್ದಿದ್ದರೆ ಈ ಎಲ್ಲಾ ಬೆಳವಣಿಗೆ ನಡೆಯುತ್ತಿರಲಿಲ್ಲ. ಅವರು ಬೇಗ ಜೈಲಿನಿಂದ ಆಚೆ ಬರಲಿ ಎಂದು ಹಾರೈಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಬಹುಕೋಟಿ ಮೇವು ಹಗರದಣದ ನಾಲ್ಕು ಪ್ರಕರಣಗಳಲ್ಲಿ ದೋಷಿಯಾಗಿ ಜೈಲಿನಲ್ಲಿರುವ ಲಾಲೂ ಪ್ರಸಾದ್ ಒಟ್ಟು 20.5 ವರ್ಷ ಶಿಕ್ಷೆ ಅನುಭವಿಸಬೇಕಿದೆ.

English summary
"It's enough son, Come back home" RJD chief Lalu Prasad Yadav's wife Rabri Devi requests her son emotionally to return home. He stayed separately in Patna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X