• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನರೇಂದ್ರ ಮೋದಿಗೆ 6 ಮಂದಿ ಒಡಹುಟ್ಟಿದವರು:ತೇಜಸ್ವಿ ಯಾದವ್

|

ಪಾಟ್ನಾ, ಅಕ್ಟೋಬರ್ 27: ಪ್ರಧಾನಿ ನರೇಂದ್ರ ಮೋದಿಗೂ 6 ಮಂದಿ ಒಡಹುಟ್ಟಿದವರಿದ್ದಾರೆ ಎಂದು ತೇಜಸ್ವಿ ಯಾದವ್ ವ್ಯಂಗ್ಯವಾಡಿದ್ದಾರೆ.

ನಿತೀಶ್ ಕುಮಾರ್ ಅವರು ತೇಜಸ್ವಿ ಯಾದವ್ ಮತ್ತು ಅವರ ತಂದೆ ಲಾಲು ಪ್ರಸಾದ್ ಯಾದವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಬಿಹಾರ ಚುನಾವಣೆ; 71 ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರೆ

ಲಾಲ್ ಕುಟುಂಬ ಎಂಟು- ಒಂಬತ್ತು ಮಕ್ಕಳಿದ್ದಾರೆ. ಪುತ್ರಿಯರಲ್ಲಿ ಅವರಿಗೆ ನಂಬಿಕೆ ಇಲ್ಲ. ಅನೇಕ ಪುತ್ರಿಯರನ್ನು ಹೊಂದಿದ ಬಳಿಕ ಒಬ್ಬ ಮಗ ಹುಟ್ಟಿದ. ಆದರೆ ಬಿಹಾರವನ್ನು ಬೇರೆಯೇ ಪರಿಸ್ಥಿತಿಗೆ ತಳ್ಳಲು ಹೊರಟಿದ್ದಾರೆ ಎಂದು ನಿತೀಶ್ ಕುಮಾರ್ ಹೇಳಿದ್ದರು.

ನಾಳೆ ನಡೆಯಲಿರುವ ಮೊದಲ ಹಂತದ ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಸೋಮವಾರ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ತಾಯಿ ರಾಬ್ಡಿದೇವಿಯನ್ನು ಅಪಮಾನಿಸಿದ್ದಾರೆ ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ನನ್ನ ಕುಟುಂಬದ ಬಗ್ಗೆ ಟೀಕೆ ಮಾಡುವ ಮೂಲಕ ನಿತೀಶ್ ಕುಮಾರ್, ಆರು ಜನ ಒಡಹುಟ್ಟಿದವರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿ ಇಟ್ಟುಕೊಂಡಿದ್ದಾರೆ.

ಇಂತಹ ಭಾಷೆ ಬಳಸುವ ಮೂಲಕ ನಿತೀಶ್ ಕುಮಾರ್, ಮಹಿಳೆಯರು ಮತ್ತು ನನ್ನ ತಾಯಿಯ ಭಾವನೆಗಳಿಗೆ ಅಪಮಾನ ಮಾಡಿದ್ದಾರೆ. ಹಣದುಬ್ಬರ, ಭ್ರಷ್ಟಾಚಾರ, ನಿರುದ್ಯೋಗ ಮತ್ತಿತರ ಪ್ರಮುಖ ವಿಷಯಗಳ ಬಗ್ಗೆ ಅವರು ಮಾತನಾಡುತ್ತಿಲ್ಲ ಎಂದು ತೇಜಸ್ವಿ ಯಾದವ್ ದೂರಿದ್ದಾರೆ.

English summary
Bihar Chief Minister Nitish Kumar took no names in his taunt at an election rally about "having eight to nine children in the quest for a son" but his intended target, Rashtriya Janata Dal (RJD) leader Tejashwi Yadav, has responded sharply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X