ಬಿಹಾರದ ಮಹಾಘಟಬಂಧನ ಅಭ್ಯರ್ಥಿಗಳಲ್ಲಿ ಒಬ್ಬರೂ ಬ್ರಾಹ್ಮಣರಿಲ್ಲ!
ಪಾಟ್ನಾ, ಮಾರ್ಚ್ 29: ಬಿಹಾರದಲ್ಲಿ ಕಾಂಗ್ರೆಸ್, ಆರ್ ಜೆಡಿ ಸೇರಿದಂತೆ ಹಲವು ಮಿತ್ರ ಪಕ್ಷಗಳು ಕೊನೆಗೂ ಜೊತೆಗೂಡಿ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿದ್ದು, ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆದರೆ ಈ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ಅಭ್ಯರ್ಥಿಯೂ ಇಲ್ಲ ಎಂದು ಹಿಂದುಸ್ತಾನ ಅವಾಮ್ ಮೋರ್ಚಾ-ಜಾತ್ಯತೀತ(HAM-S) ಸಂಸ್ಥಾಪಕ ಜಿತನ್ ರಾಮ್ ಮಂಜ್ಹಿ ಆರೋಪಿಸಿದ್ದಾರೆ.
ಹಿಂದುಳಿದ ವರ್ಗದ, ಅಲ್ಪಸಂಖ್ಯಾತರ ಓಲೈಕೆಗಾಗಿ ಮಹಾಮೈತ್ರಿಕೂಟ ಮೇಲ್ಜಾತಿಯನ್ನು ಕಡೆಗಣಿಸುತ್ತಿದೆ. ಆದ್ದರಿಂದಲೇ ಒಬ್ಬನೇ ಒಬ್ಬ ಬ್ರಾಹ್ಮಣ ಅಭ್ಯರ್ಥಿಗೂ ಟಿಕೆಟ್ ನೀಡಲಾಗಿಲ್ಲ ಎಂದು ಅವರು ದೂರಿದ್ದಾರೆ.

ಬಿಹಾರದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿದ್ದು, ಅವರುಗಳಲ್ಲಿ 19 ರಲ್ಲಿ ಆರ್ ಜೆಡಿ ಸ್ಪರ್ಧಿಸಲಿದ್ದು, 9 ರಲ್ಲಿ ಕಾಂಗ್ರೆಸ್, ಐದು ಕ್ಷೇತ್ರಗಳಲ್ಲಿ ಆರ್ ಎಲ್ ಎಸ್ ಪಿ(ರಾಷ್ಟ್ರೀಯ ಲೋಕ ಸಮತಾ ಪಕ್ಷ), (HAM-S) ಮತ್ತು ವಿಕಾಸಶೀಲ ಇನ್ಸಾನ್ ಪಕ್ಷಗಳು ತಲಾ ಮೂರು ಕ್ಷೇತ್ರ, ಸಿಪಿಐಎಂ ಒಂದು ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯಲಿದೆ.
ಆದರೆ ಇಷ್ಟೂ ಅಭ್ಯರ್ಥಿಗಳಲ್ಲಿ ಒಬ್ಬರೂ ಬ್ರಾಹ್ಮಣರಿಲ್ಲ. ಇದು ಚುನಾವಣೆಯ ಮೇಲೆ ಬಾರೀ ಪ್ರಂಆನ ಬೀರಲಿದ್ದು, ಮಹಾಮೈತ್ರಿಕೂಟ ಹಿನ್ನಡೆ ಅನುಭವಿಸಬೇಕಾಗಬಹುದು ಎಂದು ಮಹಾಮೈತ್ರಿಕೂಟದ ಸದಸ್ಯರೂ ಆಗಿರುವ ಜಿತನ್ ರಾಮ್ ಮಂಜ್ಹಿ ಎಚ್ಚರಿಕೆಯನ್ನೂ ನೀಡಿದ್ದಾರೆ.












Click it and Unblock the Notifications