ಬಹುಕಾಲದ ಸ್ನೇಹಿತೆ ರಾಜಶ್ರೀ ಜೊತೆ ತೇಜಸ್ವಿ ಯಾದವ್ ನಿಶ್ಚಿತಾರ್ಥ

ಪಾಟ್ನಾ, ಡಿಸೆಂಬರ್ 09: ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಹಾರದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ತಮ್ಮ ದೀರ್ಘಕಾಲದ ಕುಟುಂಬ ಸ್ನೇಹಿತನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಕೇವಲ ಸಂಬಂಧಿಕರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು.

ತೇಜಸ್ವಿ ಯಾದವ್ ಸಹೋದರಿ ರೋಹಿಣಿ ಅರ್ಚಾರ್ಯ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಿಶ್ಚಾತಾರ್ಥದ ಬಗ್ಗೆ ಬರೆದುಕೊಂಡಿದ್ದಾರೆ. ನಿಶ್ಚಿತಾರ್ಥ ನಡೆದ ಸ್ಥಳ ಸೈನಿಕ್ ಫಾರ್ಮ್ ಪ್ರದೇಶದಲ್ಲಿ ಅನೇಕ ಬೌನ್ಸರ್‌ಗಳು ಕಂಡು ಬಂದರು.

ವಧು ಯಾರು ಎಂಬುದರ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ. ಅದಾಗ್ಯೂ, ಹಿಂದೂಸ್ತಾನ್ ಟೈಮ್ಸ್‌ನ ವರದಿಯ ಪ್ರಕಾರ ತೇಜಸ್ವಿ ತಮ್ಮ ಹಳೆಯ ಸ್ನೇಹಿತ ಹರಿಯಾಣದ ರೇವಾರಿಯಿಂದ ಬಂದ ರಾಜ್ ಶ್ರೀ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ತೇಜಸ್ವಿ ಅವರ ಪತ್ನಿ ಯಾದವ್ ವಂಶಸ್ಥರ ದೀರ್ಘಕಾಲದ ಸ್ನೇಹಿತರಾಗಿದ್ದು, ಪ್ರಸ್ತುತ ಅವರ ಕುಟುಂಬದೊಂದಿಗೆ ನವದೆಹಲಿಯ ಫ್ರೆಂಡ್ಸ್ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಅದಕ್ಕಿಂತ ಹೆಚ್ಚಾಗಿ, ತೇಜಸ್ವಿ ಅಳಿಯಂದಿರು ಯಾವುದೇ ರಾಜಕೀಯ ಹಿನ್ನೆಲೆ ಹೊಂದಿಲ್ಲ ಎಂದು ಗೊತ್ತಾಗಿದೆ.

Lalu Prasad Yadavs son Tejashwi Yadav Engaged to Rajshri; Pic inside

ಕುಟುಂಬ ಸದಸ್ಯರಿಗೆ ಮಾತ್ರ ಆಹ್ವಾನ:

ತೇಜಸ್ವಿ ಯಾದವ್ ಕುಟುಂಬಕ್ಕೆ ಹತ್ತಿರದ ಮೂಲಗಳ ಪ್ರಕಾರ, ಕೋವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದರ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ಸೀಮಿತವಾದಂತೆ ನಿಶ್ಚಿತಾರ್ಥ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ.

2020ರಲ್ಲಿ ಮದುವೆಯಾಗುವ ಬಗ್ಗೆ ಸುದ್ದಿ:

ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿರುವ 32 ವರ್ಷದ ತೇಜಸ್ವಿ ಯಾದವ್ ಕಿರಿಯರಾಗಿದ್ದಾರೆ. ಕಳೆದ 2020ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆ ವೇಳೆ ಪಕ್ಷದ ನೇತೃತ್ವ ವಹಿಸಿಕೊಂಡಿದ್ದ ತೇಜಸ್ವಿ ಯಾದವ್, ಚುನಾವಣೆ ಮುಗಿಯುತ್ತಿದ್ದಂತೆ ದಾಂಪತ್ಯ ಬದುಕಿಗೆ ಕಾಲಿಡುತ್ತಾರೆ ಎಂದ ಸುದ್ದಿಯಿತ್ತು. ಆದರೆ ಅಂದು ಆ ಸುದ್ದಿ ನಿಜವಾಗಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+